Close Menu
Ain Live News
    Facebook X (Twitter) Instagram YouTube
    Friday, June 27
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ನಿಮಗಿದು ಗೊತ್ತಾ!? ಟಾಯ್ಲೆಟ್ ಫ್ಲಶ್‌ನಲ್ಲಿ ಏಕೆ ಎರಡು ಬಟನ್ ಇರುತ್ತೆ? ಬಳಕೆ ಹೇಗೆ? ಇಲ್ಲಿದೆ ಉತ್ತರ!

    By AIN AuthorApril 18, 2025
    Share
    Facebook Twitter LinkedIn Pinterest Email
    Demo

    ಸಾಮಾನ್ಯವಾಗಿ ಮನೆಯಾಗಲಿ ಅಥವಾ ಕಚೇರಿಯಾಗಲಿ ನಾವು ಪ್ರತಿದಿನ ಶೌಚಾಲಯವನ್ನು ಬಳಸಿಯೇ ಬಳಸುತ್ತೇವೆ. ನಮ್ಮ ದೈನಂದಿನ ಜೀವನದಲ್ಲಿ ಶೌಚಾಲಯ ಕೂಡ ಬಹುಮುಖ್ಯ ಪಾತ್ರವನ್ನು ಹೊಂದಿದೆ. ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ. ಇತ್ತೀಚಿನ ದಿನಗಳಲ್ಲಿ ಹೊಸ ಬಗೆಯ ಕಮಾಡ್​ಗಳು ಮಾರುಕಟ್ಟೆಗೆ ಬಂದಿದ್ದು, ಇದರಲ್ಲಿ ಆಧುನಿಕ ಫಿನಿಶಿಂಗ್ ಜತೆಗೆ ಹಲವು ಪರಿಕರಗಳಿವೆ.

    ಈ ರಾಶಿಯ ಬೇಕರಿ, ಹೋಟೆಲ್,ಟೀ ಕಾಂಡಿಮೆಂಟ್ಸ್ , ಸಾರಿ ಸೆಂಟರ್, ಸಿದ್ದ ಉಡುಪು ವ್ಯಾಪಾರಗಳಲ್ಲಿ ಭಾರಿ ಏರಿಳಿತ: ಶುಕ್ರವಾರದ ರಾಶಿ ಭವಿಷ್ಯ 18 ಏಪ್ರಿಲ್ 2025

    ಹಿಂದಿನ ಕಾಲದಲ್ಲಿ ಶೌಚಾಲಯವಿಲ್ಲದೇ ಒದ್ದಾಡುತ್ತಿದ್ದ ಜನರು ಈಗ ತಮ್ಮ ಮನೆಗಳಲ್ಲಿ ಎರಡೆರಡು ಶೌಚಾಲಯಗಳನ್ನು ನಿರ್ಮಿಸಿದ್ದಾರೆ. ಅದರಲ್ಲೂ ಈಗಂತೂ ಪಾಶ್ಚಿಮಾತ್ಯ ಶೌಚಾಲಯಗಳನ್ನು ಜನರು ಹೆಚ್ಚಾಗಿ ಬಳಸಲು ಶುರು ಮಾಡಿದ್ದಾರೆ. ಏಕೆಂದರೆ ಇದರಿಂದ ಅನೇಕ ಸೌಲಭ್ಯಗಳಿವೆ. ದಿನದಲ್ಲಿ ಅನೇಕ ಬಾರಿ ಎಲ್ಲರೂ ಶೌಚಾಲಯ ಬಳಸುತ್ತೇವೆ. ಆದರೆ ಎಂದಾದರೂ ಪಾಶ್ಚಿಮಾತ್ಯ ಶೌಚಾಲಯದ ಫ್ಲಶ್​ ನಲ್ಲಿ ಎರಡು ಬಟನ್​ಗಳು ಏಕಿದೆ ಅಂತ ಯೋಚಿಸಿದ್ದೀರಾ?

    ಹೌದು, ನೋಡಲು ವಿಭಿನ್ನವಾಗಿರುವ ಫ್ಲಶ್​ ಬಟನ್​ನಲ್ಲಿ ಒಂದು ಚಿಕ್ಕದಾದ ಬಟನ್ ಇದ್ದರೆ, ಮತ್ತೊಂದರಲ್ಲಿ ದೊಡ್ಡ ಬಟನ್ ಇದೆ. ಇವೆರಡನ್ನೂ ಒತ್ತುವುದರಿಂದ ನೀರು ಬಿಡುಗಡೆಯಾಗುತ್ತದೆ. ಸದ್ಯ ಈಗಿರುವ ಪ್ರಶ್ನೆ ಏನೆಂದರೆ, ಎರಡೂ ಗುಂಡಿಗಳನ್ನು ಒತ್ತಿದರೂ ಸಹ ನೀರು ಬರುತ್ತದೆ ನಿಜ. ಹೀಗಿರುವಾಗ ಫ್ಲಶ್​​ನಲ್ಲಿ ಎರಡು ಗುಂಡಿಗಳು ಏಕೆ ಇರುತ್ತವೆ? ಇವುಗಳ ಅರ್ಥವೇನು ಮತ್ತು ಇವುಗಳನ್ನು ಯಾವಾಗ ಬಳಸಬೇಕು ಎಂಬ ಈ ಎಲ್ಲಾ ವಿಚಾರಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

    ಟಾಯ್ಲೆಟ್ ಫ್ಲಶ್‌ನಲ್ಲಿ ಎರಡು ಗುಂಡಿಗಳಿವೆ. ನೀವು ಸಣ್ಣ ಫ್ಲಶ್ ಬಟನ್ ಒತ್ತಿದಾಗ, ಶೌಚಾಲಯವನ್ನು ಸ್ವಚ್ಛಗೊಳಿಸಲು ಸುಮಾರು 3 ಲೀಟರ್ ನೀರು ಬರುತ್ತದೆ. ಅದೇ ರೀತಿ ನೀವು ದೊಡ್ಡ ಬಟನ್ ಒತ್ತಿದಾಗ ಸುಮಾರು 6 ಲೀಟರ್ ನೀರು ಬರುತ್ತದೆ. ಒಟ್ಟಾರೆ ಈ ಎರಡೂ ಗುಂಡಿಗಳನ್ನು ಕಡಿಮೆ ಮತ್ತು ಹೆಚ್ಚು ನೀರನ್ನು ಬಿಡುಗಡೆ ಮಾಡಲು ಬಳಸಲಾಗುತ್ತದೆ. ಸಾಮಾನ್ಯವಾಗಿ, ಮೂತ್ರ ವಿಸರ್ಜನೆಯ ನಂತರ ಜನರು ಚಿಕ್ಕ ಬಟನ್ ಒತ್ತಬೇಕು. ಇದರಿಂದ ನೀರು ಕಡಿಮೆ ಬಿಡುಗಡೆಯಾಗುತ್ತದೆ. ಮಲವಿಸರ್ಜನೆಯ ನಂತರ ಹೆಚ್ಚು ನೀರು ಹೊರ ಬರಲು ಮತ್ತು ಶೌಚಾಲಯವನ್ನು ಸ್ವಚ್ಛಗೊಳಿಸಲು ಸಾಧ್ಯವಾದಷ್ಟು ದೊಡ್ಡ ಬಟನ್ ಒತ್ತಬೇಕು. ಒಂದು ವೇಳೆ ಎರಡೂ ಗುಂಡಿಗಳನ್ನು ಒತ್ತಿದಾಗ, ವಿಭಿನ್ನ ಪ್ರಮಾಣದ ನೀರು ಹೊರಬರುತ್ತದೆ.

    ವಾಸ್ತವವಾಗಿ ಇಂದಿನ ಕಾಲದಲ್ಲಿ ನೀರಿನ ಕೊರತೆಯು ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಡ್ಯುಯಲ್ ಫ್ಲಶ್ ವ್ಯವಸ್ಥೆಯು ತುಂಬಾ ಉಪಯುಕ್ತವಾಗಿದೆ. ಇದು ಪ್ರತಿ ಬಾರಿ 3 ರಿಂದ 6 ಲೀಟರ್ ನೀರನ್ನು ಉಳಿಸಬಹುದು. ನೀವು ದಿನವಿಡೀ ಹಲವಾರು ಬಾರಿ ಶೌಚಾಲಯವನ್ನು ಬಳಸಿದರೆ ಮತ್ತು ಸರಿಯಾದ ಬಟನ್ ಒತ್ತಿದರೆ, ಪ್ರತಿ ತಿಂಗಳು ನೂರಾರು ಲೀಟರ್ ನೀರನ್ನು ಉಳಿಸಬಹುದು.

    ಡ್ಯುಯಲ್ ಫ್ಲಶ್ ವ್ಯವಸ್ಥೆಯು ನಿಮ್ಮ ಮನೆಯಲ್ಲಿ ನೀರನ್ನು ಉಳಿಸುವಲ್ಲಿ ಸಹಾಯ ಮಾಡುವುದಲ್ಲದೇ, ವಾತಾವರಣವನ್ನು ಕಾಪಾಡುವಲ್ಲಯೂ ಸಹಾಯ ಮಾಡುತ್ತದೆ

    Demo
    Share. Facebook Twitter LinkedIn Email WhatsApp

    Related Posts

    Bomb Threat: ಏರ್ ಇಂಡಿಯಾ ವಿಮಾನಕ್ಕೆ ಟಿಶ್ಯೂ ಪೇಪರ್ ನಲ್ಲಿ ‘ಬಾಂಬ್’ ಬೆದರಿಕೆ..! ಕೆಲಹೊತ್ತು ಭೀತಿ

    June 27, 2025

    ಇನ್ಮುಂದೆ ಭಾರತದಲ್ಲಿ ಈ ಕಂಪನಿಯ ಫ್ರಿಡ್ಜ್, ವಾಷಿಂಗ್ ಮಿಷನ್ ಬ್ಯಾನ್..!

    June 27, 2025

    Donald Trump: ಭಾರತದೊಂದಿಗೆ ದೊಡ್ಡ ಡೀಲ್: ವ್ಯಾಪಾರ ಒಪ್ಪಂದದ ಬಗ್ಗೆ ಟ್ರಂಪ್ ಸುಳಿವು

    June 27, 2025

    ನಿಮ್ಮ ಡೊಳ್ಳು ಹೊಟ್ಟೆ ಚಪ್ಪಟೆ ಆಗಲು ಕಾಫಿ ಟೀ ಬದಲು ಬೆಳಗೆದ್ದು ಈ ನೀರು ಕುಡಿಯಿರಿ!

    June 27, 2025

    ಡ್ರೈ ಫ್ರೂಟ್ಸ್ ಒಳ್ಳೆಯದು ಆದರೆ ಇಂಥವರು ಯಾವುದೇ ಕಾರಣಕ್ಕೂ ತಿನ್ನಬಾರದು..!

    June 27, 2025

    UPI ಬಳಕೆದಾರರಿಗೆ ಗಮನಿಸಿ: ಜುಲೈ 15 ರಿಂದ ಜಾರಿಗೆ ಬರಲಿದೆ ಹೊಸ ನಿಯಮಗಳು!

    June 27, 2025

    Friday Tips: ಶುಕ್ರವಾರ ಈ ಒಂದು ಕೆಲಸ ಮಾಡಿದ್ರೆ ಸಾಕು ಬೇಡ ಬೇಡ ಎಂದರೂ ಹಣ ಬರುತ್ತೆ.!

    June 27, 2025

    Kitchen Tips: ಅಕ್ಕಿಯಲ್ಲಿ ಹುಳ ಆಗ್ತಿದ್ಯಾ!? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ!

    June 26, 2025

    ರಾತ್ರಿ ನಿದ್ರೆ ಮಾಡುವ ಸಂದರ್ಭದಲ್ಲಿ ಬಾಯಿ ಗಂಟಲು ಒಣಗುತ್ತಾ? ಹಾಗಿದ್ರೆ ಈ ಕಾಯಿಲೆ ಇರಬಹುದು!

    June 26, 2025

    ನಿಮ್ಮ ಮನೆಯಲ್ಲಿಯೂ ಹಲ್ಲಿ, ಜಿರಳೆ ಕಾಟ ಹೆಚ್ಚಾಗಿದ್ಯಾ? ಹಾಗಿದ್ರೆ ಈ ಟ್ರಿಕ್ಸ್ ಫಾಲೋ ಮಾಡಿ!

    June 26, 2025

    Guarantee Scheme: 3 ತಿಂಗಳಿ0ದ ಬರದ ಗೃಹಲಕ್ಷ್ಮೀ ಹಣ: ಕಂಗಾಲಾದ ಮಹಿಳೆಯರು!

    June 26, 2025

    ಡೇಂಜರ್.. ಡೇಂಜರ್: ಹೃದಯ, ಕಣ್ಣು ಎರಡಕ್ಕೂ ಅಪಾಯಕಾರಿ ಅಧಿಕ ರಕ್ತದೊತ್ತಡ!

    June 26, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.