ಬೆಂಗಳೂರು:- ನಗರದಲ್ಲಿ ದಿನದಿಂದ ದಿನಕ್ಕೆ ಪುಡಿಪುಡಿಗಳ ಹಾವಳಿ ಮಿತಿ ಮೀರಿದೆ. ಲಾಂಗ್ ಹಿಡಿದು ಪುಡಿಪುಡಿ ಓರ್ವ ಸಿಕ್ಕ ಸಿಕ್ಕ ವಾಹನದ ಗ್ಲಾಸ್ ಹೊಡೆದು ಅಟ್ಟಹಾಸ ಮೆರೆದಿದ್ದಾನೆ.
ನಗರದ ಕೆ ಆರ್ ಪುರಂ ಮಾರ್ಕೆಟ್ ನಲ್ಲಿ ನಡೆದ ಘಟನೆ ಜರುಗಿದೆ. ಇಂದು ಬೆಳಗ್ಗಿನ ಜಾವ ಕಾರು, ಗೂಡ್ಸ್ ವಾಹನದ ಗ್ಲಾಸ್ ಪುಡಿ ಪುಡಿಯಾಗಿದೆ. ಕೆ ಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ಗಾಂಜಾ ನಶೆಯಲ್ಲಿ ಲಾಂಗ್ ಹಿಡಿದು ವ್ಯಾಪಾರಿಗಳಿಗೆ,ಜನರಿಗೆ ಬೆದರಿಕೆ ಹಾಕುತ್ತಿದ್ದ.
ಈ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ಯುವಕನ ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಪುಡಿರೌಡಿಯನ್ನ ವಶಕ್ಕೆ ಪಡೆದಿರುವ ಕೆ ಆರ್ ಪುರಂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.