ಟಾಲಿವುಡ್ ಮೋಸ್ಟ್ ಅಪ್ ಕಮ್ಮಿಂಗ್ ಸಿನಿಮಾಗಳಲ್ಲೊಂದು ಅಖಂಡ-1. ಸೂಪರ್ ಸ್ಟಾರ್ ನಂದಮೂರಿ ಬಾಲಕೃಷ್ಣ ನಟಿಸುತ್ತಿರು ಅಖಂಡ ಚಿತ್ರದ ಸೀಕ್ವೆಲ್ ಮೇಲೆ ಚಿತ್ರಪ್ರೇಮಿಗಳು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬೊಯಾಪಾಟಿ ಶ್ರೀನು ಈ ಬಾರಿ ಬಾಲಯ್ಯನನ್ನು ಯಾವ ಅವತಾರದಲ್ಲಿ ತೋರಿಸ್ತಾರೆ ಅಂತಾ ಕಾತರದಿಂದ ಕಾಯುತ್ತಿದ್ದಾರೆ. ಅಖಂಡ-2ದಲ್ಲಿಯೂ ಡಬಲ್ ರೋಲ್ ಮುಂದುವರೆಯಲಿದ್ದು, ಭರಪೂರ ಆಕ್ಷನ್ ಇರೋದು ಖಾತ್ರೆಯಾಗಿದೆ. ಈ ಆಕ್ಷನ್ ಸೀಕ್ವೆನ್ಸ್ ಕಂಪೋಸ್ ಮಾಡೋದಿಕ್ಕೆ ಕನ್ನಡದ ಖ್ಯಾತ ಸಾಹಸ ನಿರ್ದೇಶಕ ಎಂಟ್ರಿ ಕೊಟ್ಟಿದ್ದಾರೆ.
ರವಿವರ್ಮ, ಸ್ಯಾಂಡಲ್ ವುಡ್ ಮಾತ್ರವಲ್ಲ ಬಾಲಿವುಡ್ ಸ್ಟಾರ್ ಹೀರೋ, ಸ್ಟಾರ್ ಡೈರೆಕ್ಷರ್ ಗಳಿಂದ ಸೈ ಎನಿಸಿಕೊಂಡವರು. ಸಲ್ಮಾನ್ ಖಾನ್, ಶಾರುಖ್ ಖಾನ್ ಸಿನಿಮಾಗಳಿಗೆ ಸಾಹಸ ಸಂಯೋಜಿಸಿ ಜನಪ್ರಿಯತೆಗಳಿಸಿರುವ ರವಿವರ್ಮ ಈಗ ಬಾಲಯ್ಯನಿಗೆ ಆಕ್ಷನ್ ಹೇಳಿಕೊಡಲು ರೆಡಿಯಾಗಿದ್ದಾರೆ.
ಕನ್ನಡದ ರವಿವರ್ಮಾ, ಎಲ್ಲಾ ಭಾಷೆಯಲ್ಲೂ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ.. ಬಹುತೇಕ ಸೂಪರ್ ಸ್ಟಾರ್ಗಳ ಸಿನಿಮಾಗಳಿಗೆ ರವಿವರ್ಮಾ ಸ್ಟಂಟ್ ಇರುತ್ತೆ. ಇದೀಗ ತೆಲುಗಿನ ಅಖಂಡ 2ಗೆ ಭರ್ಜರಿ ಫೈಟ್ ಒಂದನ್ನು ಕಂಪೋಸ್ ಮಾಡಿದ್ದಾರೆ.. ಸರೈನಾಡು ಬಳಿಕ ಮತ್ತೊಮ್ಮೆ ಬೊಯಪಾಟಿ ಶ್ರೀನು ಜೊತೆ ಕೆಲಸ ಮಾಡ್ತಿದ್ದು, ಅಖಂಡ 2 ಬಗ್ಗೆ ದೊಡ್ಡ ನಿರೀಕ್ಷೆ ಇಟ್ಟು ಕೊಂಡಿದ್ದಾರೆ.
ಬೊಯಪಾಟಿ ಶ್ರೀನು ಹಾಗೂ ಬಾಲಕೃಷ್ಣ ಕಾಂಬಿನೇಷನ್ನ ಹ್ಯಾಟ್ರಿಕ್ ಹಿಟ್ ಬಾರಿಸಿದೆ. ಈ ಕಾಂಬೋದ ನಾಲ್ಕನೇ ಸಿನಿಮಾ ‘ಅಖಂಡ 2’. ಈ ಹಿಂದೆ ಬಂದಿದ್ದ ‘ಸಿಂಹ’, ‘ಲಿಜೆಂಡ್’ ಹಾಗೂ 2021 ರಲ್ಲಿ ಬಿಡುಗಡೆ ಆಗಿದ್ದ ‘ಅಖಂಡ’ ಸಿನಿಮಾಗಳು ಭಾರಿ ಯಶಸ್ಸುಗಳಿಸಿವೆ. ಇದೀಗ ‘ಅಖಂಡ 2’ ನಿರ್ದೇಶನದಲ್ಲಿ ಬೊಯಪಾಟಿ ತೊಡಗಿದ್ದಾರೆ. ಈ ಚಿತ್ರಕ್ಕೆ ಕನ್ನಡದ ಖ್ಯಾತ ಸಾಹಸ ನಿರ್ದೇಶಕ ರವಿವರ್ಮ ಕೆಲಸ ಮಾಡುತ್ತಿರುವುದು ಕನ್ನಡಿಗರಿಗೆ ಖುಷಿ ವಿಚಾರವೇ.