ಬೆಂಗಳೂರು: ಪಿಯುಸಿ ಪರೀಕ್ಷೆ ಬೆನ್ನಲ್ಲೇ ವೃತ್ತಿಪರ ಕೋರ್ಸ್ಗಳ ಪ್ರವೇಶಾತಿಗಾಗಿ ರಾಜ್ಯಾದ್ಯಂತ ಏಪ್ರಿಲ್ 15, 16, 17 ಸಿಇಟಿ ಪರೀಕ್ಷೆ ನಡೆದಿದೆ. ಕೊನೆಯ ದಿನವಾದ ನಿನ್ನೆ, ಶಿವಮೊಗ್ಗ ಮತ್ತು ಬೀದರ್ನಲ್ಲಿ ಪರೀಕ್ಷಾರ್ಥಿಗೆ ತಪಾಸಣೆ ವೇಳೆ ಜನಿವಾರ ತೆಗೆದುಹಾಕುವಂತೆ ಸೂಚಿಸಿರೋದು ಭಾರೀ ವಿವಾದಕ್ಕೆ ಕಾರಣವಾಗಿದೆ. ಇನ್ನೂ ಈ ವಿಚಾರವಾಗಿ ಹಿಂದೂಪರ ಚಿಂತಕ ಚಕ್ರವರ್ತಿ ಸೂಲಿಬೆಲೆ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರೇ ನಾನು ಬ್ರಾಹ್ಮಣರ ವಿರೋಧಿಯಲ್ಲ ಅಂತ ಹೇಳ್ತಿದ್ರು. ಆದ್ರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಂದ ನಂತರ ಈ ರೀತಿಯ ಪ್ರಕರಣಗಳು ಹೆಚ್ಚಾಗುತ್ತಿವೆ. ಇದು ತುಂಬಾ ಶಾಕಿಂಗ್ ವಿಚಾರ. ಒಂದು ಸಮುದಾಯವನ್ನ ಇನ್ನೊಂದು ಸಮುದಾಯದ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಉದ್ಧ ತೋಳಿನ ಶರ್ಟ್ ತೆಗೆಸ್ತಾರೆ, ಜನಿವಾರದಲ್ಲಿ ಬ್ಲೂಟೂತ್ ಹಾಕ್ಕೊಂಡು ಬರೋಕೆ ಆಗುತ್ತಾ? ಅಂತ ಪ್ರಶ್ನೆ ಮಾಡಿದ್ದಾರೆ.
ನಿಮಗೆ ಪ್ಲಾಸ್ಟಿಕ್ ಬಾಕ್ಸ್ʼನಲ್ಲಿ ಬಿಸಿ ಅನ್ನ ಇಡುವ ಅಭ್ಯಾಸವಿದೆಯೇ..? ಶೀಘ್ರದಲ್ಲೇ ಕ್ಯಾನ್ಸರ್ ಬರುವುದು ಖಚಿತ
ಹಿಜಬ್, ಬುರ್ಖಾಗೆ ಅನುಮತಿ ಕೊಡ್ತೀರ, ಇವೇಲ್ಲ ಇರಬಹುದು ಅದ್ರೆ ಜನಿವಾರ ಬೇಡ್ವಾ..? ಜಾತಿ ಜಾತಿಗಳ ನಡುವೆ ವಿಷ ಬೀತ್ತ ಬಿತ್ತಿವ ಕೆಲಸ ಇದು. ಜನಿವಾರ ಕಟ್ ಮಾಡಿದ ಮಾತ್ರಕ್ಕೆ ಹಿಂದುತ್ವ ಅಲುಗಾಡಿಸಲು ಆಗಲ್ಲ. ಜಾತಿಗಣತಿಯನ್ನ ಮರೆಮಾಚಲು ಈ ಘಟನೆ ತಂದಂತಿದೆ. ಕೂಡಲೇ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಕ್ರಮ ಆಗಬೇಕು. ಮನಸ್ಸು ಮನಸ್ಸುಗಳ ಬಗ್ಗೆ ವಿಷಬೀಜ ಬಿತ್ತುವ ಕೆಲಸ ಆಗ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.