ಕನ್ನಡದ ಕುವರ, ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಇಂದು ಜನ್ಮದಿನ ಸಂಭ್ರಮದಲ್ಲಿದ್ದಾರೆ. ರಾಹುಲ್ ಜನ್ಮದಿನಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬರ್ತಿದೆ. ತಮ್ಮ ಹುಟ್ಟುಹಬ್ಬದಂದೇ ರಾಹುಲ್ ಮಗಳ ಹೆಸರನ್ನು ರಿವೀಲ್ ಮಾಡಿದ್ದಾರೆ.
ಕೆಎಲ್ ರಾಹುಲ್ ಮಂಗಳೂರು ಮೂಲದ ಸುನಿಲ್ ಶೆಟ್ಟಿ ಪುತ್ರಿ ಆತಿಯಾ ಶೆಟ್ಟಿಯನ್ನು ಪ್ರೀತಿಸಿ ಕೈ ಹಿಡಿದ್ದರು. ಸುನಿಲ್ ಶೆಟ್ಟಿಯವರ ಮುಂಬೈ ಫಾರ್ಮ್ ಹೌಸ್ ನಲ್ಲಿ ಅದ್ಧೂರಿಯಾಗಿ ಮದುವೆ ನಡೆದಿತ್ತು. ಈ ಜೋಡಿ ಈ ವರ್ಷ ಹೆಣ್ಣು ಮಗವನ್ನು ಬರ ಮಾಡಿಕೊಂಡಿದ್ದರು. ಇದೀಗ ಆ ಮಗಳ ಹೆಸರನ್ನು ರಾಹುಲ್ ದಂಪತಿ ತಮ್ಮ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.
ಇವಾರಾ ರಾಹುಲ್
“ನಮ್ಮ ಮಗಳು ಮಗು, ನಮ್ಮ ಸರ್ವಸ್ವ. ಇವಾರಾ/ ಈವಾರಾ, ದೇವರ ಉಡುಗೊರೆ,” ಎಂದು ಅಥಿಯಾ-ರಾಹುಲ್ ಫೋಟೋದೊಂದಿಗೆ ಬರೆದಿದ್ದಾರೆ. ಈವಾರಾ ಸಂಸ್ಕೃತದ ಹೆಸರು. ದೇವರ ಕೊಡುಗೆ ಎಂದರ್ಥ.