ಕಾವಾಲಯ್ಯ ಜೈಲರ್ ಸಿನಿಮಾದ ಈ ಸ್ಪೆಷಲ್ ನಂಬರ್ ಯೂಟ್ಯೂಬ್ ನಲ್ಲಿ ದಾಖಲೆ ಹಿಟ್ ಕಂಡಿದೆ. ತಮನ್ನಾ ಜೊತೆ ಸೂಪರ್ ಸ್ಟಾರ್ ರಜನಿಕಾಂತ್ ನೂ ಕಾವಾಲಯ್ಯ ಅಂತಾ ಭರ್ಜರಿಯಾಗಿ ಕುಣಿದಿದ್ದರು. ಲಿರಿಕಲ್ಸ್ ಸಾಂಗ್ ಗೆ ರಬೋಬ್ಬರಿ 200 ಮಿಲಿಯನ್ಸ್ ವೀವ್ಸ್ ಕಂಡಿದೆ. ನೆಲ್ಸನ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಜೈಲರ್ ಸಿನಿಮಾದ ಸ್ಪೆಷಲ್ ನಂಬರ್ ಇದಾಗಿದ್ದು, ಈ ಹಾಡನ್ನು ಮೀರಿಸುವ ಮತ್ತೊಂದು ಗಾನಬಜಾನದಲ್ಲಿ ಕರಾವಳಿ ಸುಂದರಿ ಪೂಜಾ ಹೆಗ್ಡೆ ಹೆಜ್ಜೆ ಹಾಕಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಲೋಕೇಶ್ ಕನಗರಾಜ್ ಕಾಂಬೋದ ಬಹುನಿರೀಕ್ಷಿತ ಸಿನಿಮಾ ಕೂಲಿ. ಈ ಚಿತ್ರದ ಗ್ಲಿಂಪ್ಸ್ ಈಗಾಗಲೇ ಭಾರೀ ಸದ್ದು ಮಾಡಿದೆ. ಸದ್ಯ ಚಿತ್ರ ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ಸಾಗುತ್ತಿದ್ದು, ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಇರೋದ್ರಿಂದ ಕಂಟೆಂಟ್ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸಿದೆ.
ಕೂಲಿ ಸಿನಿಮಾಲಿ ಒಂದು ಸ್ಪೆಷಲ್ ಹಾಡೊಂದಿದ್ದು, ಈ ಹಾಡಿಗೆ ಪೂಜಾ ಹೆಗ್ಡೆ ಹೆಜ್ಜೆ ಹಾಕಿದ್ದಾರೆ.. ಈ ಹಾಡಿನ ಕುರಿತು ಪೂಜಾ ಮೌನ ಮುರಿದಿದ್ದು, ನಾನು ಕೂಲಿಯಲ್ಲಿ ಸ್ಪೆಷಲ್ ಅಪಿಯರೆನ್ಸ್ ಮಾಡಿದ್ದು, ಇದೊಂದು ಸ್ಪೆಷಲ್ ಹಾಡಾಗಿದ್ದು, ಕಾವಾಲಯ್ಯ ಹಾಡಿಗಿಂತ ವಿಭಿನ್ನವಾದ ಫೀಲ್ ನೀಡಲಿದೆ ಅಂತಾ ತಿಳಿಸಿದ್ದಾರೆ.