ಇಂದು ನೆನಪಿರಲಿ ಪ್ರೇಮ್ ಹುಟ್ಟುಹಬ್ಬ. ಅವರ ಹುಟ್ಟುಹಬ್ಬದ ವಿಶೇಷವಾಗಿ ಸ್ಪಾರ್ಕ್ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈ ಪೋಸ್ಟರ್ ವಿರುದ್ಧ ನಟಿ ನಿರ್ಮಾಪಕಿ ಶೃತಿ ನಾಯ್ಡು ಗರಂ ಆಗಿದ್ದಾರೆ. ನಟ ಪ್ರೇಮ್ ಹಾಗೂ ಚಿತ್ರತಂಡಕ್ಕೆ ನೋಟೀಸ್ ಕಳಿಸುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.
ಆಗಿದ್ದೇನು?
ಶ್ರುತಿ ನಾಯ್ಡು ನೆನಪಿರಲಿ ಪ್ರೇಮ್ ನಟಿಸುತ್ತಿರುವ ಸ್ಪಾರ್ಕ್ ಸಿನಿಮಾದ ಪೋಸ್ಟ್‌ವೊಂದನ್ನ ಶೇರ್ ಮಾಡಿ ಸುಧೀರ್ಘ ಬರಹವೊಂದನ್ನು ಬರೆದು, ಕಾನೂನು ನೋಟಿಸ್ ಕಳುಹಿಸುವುದಾಗಿ ತಿಳಿಸಿದ್ದಾರೆ. ನಮಸ್ಕಾರ, ಈ ಚಿತ್ರ ತಂಡದವರು ಅನೈತಿಕವಾಗಿ ನಡೆದುಕೊಂಡಿದ್ದಾರೆ. ಪತ್ರಿಕೆಗಳು ಮತ್ತು ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಪ್ರಕಟವಾಗಿರುವ ಈ ಚಿತ್ರದ ಬಗ್ಗೆ, ಪತ್ರಿಕೆಯ ಕಟಿಂಗ್‌ನಲ್ಲಿರುವ ಈ ಚಿತ್ರದಲ್ಲಿ ನಟನ ಅನುಮತಿ ಪಡೆಯದೇ ಪೋಸ್ಟ್ ಮಾಡಿದ್ದಾರೆ. ನಟ ಹಿಡಿದುಕೊಂಡ ಪೋಸ್ಟರ್‌ನಲ್ಲಿ ಬಳಸಲಾದ ಈ ಚಿತ್ರವು ರಮೇಶ್ ಇಂದಿರಾ ಅವರು ರಾಜಕಾರಣಿಯ ಪಾತ್ರವನ್ನು ನಿರ್ವಹಿಸಿದ ಭೀಮಾ ಚಿತ್ರದ್ದು.ಅದರಲ್ಲಿರೋ ಫೋಟೋವನ್ನು ಭೀಮಾ ಚಿತ್ರಕ್ಕಾಗಿ ತೆಗೆದುಕೊಳ್ಳಲಾಗಿತ್ತು. ಆದರೆ ಈ ಫೋಟೋವನ್ನು ಅನುಮತಿ ಇಲ್ಲದೇ ಬಳಸಿಕೊಂಡಿದ್ದಾರೆ. ರಮೇಶ್ ಇಂದಿರಾ ಪರವಾಗಿ ಈ ಚಿತ್ರ ತಂಡ ಮತ್ತು ನಟನಿಗೆ ಕಾನೂನು ನೋಟಿಸ್ ಕಳುಹಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಸ್ಪಾರ್ಕ್ ಸಿನಿಮಾದಲ್ಲಿ ಉಪೇಂದ್ರ ಅಣ್ಣನ ಮಗ ನಿರಂಜನ್ ಹೀರೋ ಆಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಒಂದು ಸ್ಪೆಷಲ್ ರೋಲ್ ನಲ್ಲಿ ನೆನಪಿರಲಿ ಪ್ರೇಮ್ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ದೇಶಕ ಮಹಾಂತೇಶ್ ಹಂದ್ರಾಳ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸದ್ಯ ಚಿತ್ರತಂಡ ಈ ಕಾನೂನು ತೊಡಕನ್ನು ಹೇಗೆ ಎದುರಿಸುತ್ತೋ ಕಾದು ನೋಡಬೇಕಿದೆ.