ಕರಾವಳಿ ಕುವರಿ ಪೂಜಾ ಹೆಗ್ಡೆ ವಿಂಟೇಜ್ ಲುಕ್ ನಲ್ಲಿ ಕ್ಯಾಮೆರಾಗೆ ಕಣ್ಣು ಹೊಡೆದಿದ್ದಾರೆ.
ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ರೆಟ್ರೋ ಸಿನಿಮಾದಲ್ಲಿ ಪೂಜಾ ಹೆಗ್ಡೆ ಸೂರ್ಯ ಅವರಿಗೆ ಜೋಡಿಯಾಗಿ ಅಭಿನಯಿಸಿದ್ದಾರೆ.
ಈ ಚಿತ್ರ ಪ್ರಚಾರದ ವೇಳೆ ಸೀರೆಯಲ್ಲಿ ಪೂಜಾ ಸೊಗಸಾಗಿ ಕಾಣಿಸಿಕೊಂಡಿದ್ದಾರೆ.
ಪೂಜಾ ಹೆಗ್ಡೆ ಮೂಲತಃ ತುಳು ಕುವರಿ. ಆದರೆ ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ. ಮಾಡೆಲಿಂಗ್ ಕ್ಷೇತ್ರದಲ್ಲಿ ಗುರ್ತಿಸಿಕೊಂಡಿದ್ದ ಚೆಲುವೆಗೆ ತೆಲುಗು ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ.
ಇತ್ತೀಚೆಗೆ ಸಂದರ್ಶವೊಂದರಲ್ಲಿ ಕನ್ನಡದಿಂದ ಒಳ್ಳೆ ಕಥೆ ಬಂದರೆ ನಟಿಸುವ ಎಂದು ಡಿಜೆ ಸುಂದರಿ ಹೇಳಿದ್ದಾರೆ. ಸದ್ಯ ಅವರ ರೆಟ್ರೋ ಲುಕ್ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ.