ಬೆಳಗಾವಿ : ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷಕ್ಕೆ ಮೂರು ತಿಂಗಳ ಹಸುಗೂಸು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ.
ಅಥಣಿ ತಾಲೂಕಿನ ಭರಮಣಕೊಡಿ ಮೂಲದ ದಂಪತಿಗಳ ಮಗುವಿಗೆ ನಿನ್ನೆ ಪೋಲಿಯೋ, ಪೇಂಟಾ 1, ಐ ಪಿ ವಿ 1, ಪಿವಿಸಿ 1,ರೋಟಾ 1, ವೈರಸ್ ಡ್ರಾಪ್ ನೀಡಲಾಗಿತ್ತು, ರಾತ್ರಿ ಮಗುವಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ಅಥಣಿ ಖಾಸಗಿ ಆಸ್ಪತ್ರೆ ಮಗುವನ್ನ ದಾಖಲಿಸಲಾಗಿತ್ತು, ನಂತರ ಮಗುವನ್ನು ಅಥಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ . ಅಷ್ಟರಲ್ಲೇ ಮಗು ಉಸಿರು ಚೆಲ್ಲಿದೆ.
ಮಗು ಕಳೆದುಕೊಂಡ ಕುಟುಂಬಸ್ಥರು ಡೋಸ್ ನೀಡಿದ ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆರೋಪ ಮಾಡಿದ್ದಾರೆ. ಮಗುವಿಗೆ ಪ್ರಮಾಣಕ್ಕಿಂತ ಹೆಚ್ಚು ಲಸಿಕೆ ನೀಡಿದ ಪರಿಣಾಮ ಮಗು ಸಾವನ್ನಪ್ಪಿದೆ ಎಂದು ಮಗು ಕುಟುಂಬಸ್ಥರು ಸರ್ಕಾರಿ ವೈದ್ಯರ ವಿರುದ್ದ ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಏನೂ ಅರಿಯದ ಹಸುಗೂಸು ತಾಯಿಯಿಂದ ದೂರವಾಗಿದ್ದು, ಯಾರದೋ ಎಡವಟ್ಟಿನಿಂದ ಮಗುವಿನ ಕುಟುಂಬ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.