ಬಳ್ಳಾರಿ:- ಹುಡುಗಿಯ ಜೊತೆ ಅಸಭ್ಯ ವರ್ತನೆ ತೋರಿದ ಯುವಕನಿಗೆ ಧರ್ಮದೇಟು ಬಿದ್ದಿರುವ ಘಟನೆ ಗಣಿಜಿಲ್ಲೆ ಬಳ್ಳಾರಿ ನಗರದ ಬೆಂಗಳೂರು ರಸ್ತೆಯಲ್ಲಿ ಜರುಗಿದೆ.
ಆರೋಪಿಯು, ಕುಟುಂಬದವರ ಜೊತೆ ಶಾಪಿಂಗ್ ಬಂದ ಯುವತಿ ಬಳಿ ದುರ್ವರ್ತನೆ ತೋರಿದ್ದಾನೆ. ಇದ್ರಿಂದ ಬೇಸತ್ತ ಹುಡುಗಿ ಕುಟುಂಬದವರಿಗೆ ಮಾಹಿತಿ ನೀಡಿದ್ದಾಳೆ. ಕೂಡಲೇ ಯುವಕನನ್ನು ನಿಲ್ಲಿಸಿ ಧರ್ಮದೇಟು ಕೊಡಲಾಗಿದೆ. ನಗರದ ರಾಯಲ್ ವೃತ್ತದ ಬೆಂಗಳೂರ್ ರಸ್ತೆಯಲ್ಲಿ ಘಟನೆ ಜರುಗಿದೆ.