ಬೀದರ್: ಸ್ವಿಮ್ಮಿಂಗ್ ಮಾಡುವಾಗ ಪಲ್ಟಿ ಹೊಡೆಯುವ ವೇಳೆ ಯುವಕನ ತಲೆಗೆ ಪೆಟ್ಟಾಗಿ ಸಾವನ್ನಪ್ಪಿರುವ ಘಟನೆ ಬೀದರ್ನ ನರಸಿಂಹ ಝರಣಿ ದೇವಸ್ಥಾನದ ಹತ್ತಿರವಿರುವ ಖಾಸಗಿ ಈಜುಕೊಳದಲ್ಲಿ ನಡೆದಿದೆ.
ಫೈಜ್ದರ್ಗಾ ಕಾಲೋನಿಯ ನಿವಾಸಿ ಸೈಯದ್ ಅಫಾನ್ (19) ಮೃತ ಯುವಕನಾಗಿದ್ದು, ಸೈಯದ್ ತನ್ನ ಸ್ನೇಹಿತರೊಂದಿಗೆ ಈಜುಲು ಹೋಗಿದ್ದಾಗ ಈ ಅವಘಡ ಸಂಭವಿಸಿದೆ. ಈಜುಕೊಳದಲ್ಲಿ ಪಲ್ಟಿ ಹೊಡೆಯುವ ವೇಳೆ ತಲೆಗೆ ಪೆಟ್ಟಾಗಿದ್ದು, ಸಾವನ್ನಪ್ಪಿದ್ದಾನೆ ಎನ್ನಲಾಗುತ್ತಿದೆ.
ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ KSRTC ಚಾಲಕ: ಡೆತ್ ನೋಟ್ ನಲ್ಲಿ ಬರೆದಿದ್ದೇನು?
ಇನ್ನೂ ಈಜುಕೊಳ ಮಾಲೀಕರ ನಿರ್ಲಕ್ಷ್ಯದಿಂದಲೇ ಅವಘಡ ಸಂಭವಿಸಿದೆ ಎಂದು ಮೃತ ಯುವಕನ ಕುಟುಂಬಸ್ಥರು ನಿರ್ಲಕ್ಷ್ಯ ಆರೋಪಿಸಿದ್ದು, ಈಜುಕೊಳದ ಮಾಲೀಕ ಡಾ.ವೈಜಿನಾಥ ಮದನಾ ಎಂಬವರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಸಂಬಂಧ ಬೀದರ್ನ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.