ದಕ್ಷಿಣ ಕನ್ನಡ : ಮುಲ್ಕಿ ತಾಲೂಕಿನ ಪ್ರಸಿದ್ಧ ಕ್ಷೇತ್ರವಾದ ದೇವಳದ ಬಪ್ಪನಾಡು ಶ್ರೀದುರ್ಗಾ ಪರಮೇಶ್ವರಿ ರಥೋತ್ಸವದ ವೇಳೆ ಅವಘಡ ಭವಿಸಿದೆ ತೇರು ಮುರಿದು ಬಿದ್ದಿದೆ. ಜಾತ್ರಾ ಸಂಭ್ರಮದ ವೇಳೆ ರಥೋತ್ಸವದಲ್ಲಿ ತೇರು ಮುರಿದು ಬಿದಿದ್ದು, ಭಕ್ತರು ಅಪಶಕುನವೆಂದು ಗಾಬರಿಯಾಗಿದ್ದಾರೆ.
ಕಳೆದ ಶುಕ್ರವಾರ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಳದ ರಥೋತ್ಸವ ಅದ್ಧೂರಿಯಾಗಿ ಸಾಗಿತ್ತು. ರಥ ಬೀದಿಗಳಲ್ಲಿ ರಥೋತ್ಸವ ಸಾಗುತ್ತಿದ್ದ ವೇಳೆ ತೇರಿನ ಮೇಲ್ಭಾಗ ಏಕಾಏಕಿ ಕುಸಿದಿದೆ. ತೇರಿನ ಮೇಲ್ಬಾಗ ಕುಸಿದ ವೇಳೆ ಅರ್ಚಕರು ತೇರಿನಲ್ಲೇ ಇದ್ದರು. ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
ಯಾರೂ ಇಲ್ಲದ ವೇಳೆ ಮನೆಗೆ ಕನ್ನ ಹಾಕಿದ ಖದೀಮರು ; ಲಕ್ಷಾಂತರ ರೂ. ಬಂಗಾರ ಹಣ ಕಳವು
ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ಅವಘಡ ನಡೆದಿದೆ ಎನ್ನಲಾಗ್ತಿದೆ. ರಾತ್ರಿ ವೇಳೆಯೂ ಕೂಡ ರಥತೋತ್ಸವ ನೋಡಲು ಜನ ಸಾಗರವೇ ಹರಿದು ಬಂದಿತ್ತು. ಈ ಅವಘಡದಿಂದ, ಅದೃಷ್ಟವಶಾತ್ ಯಾರಿಗೂ ಗಂಭೀರ ಗಾಯವಾಗಿಲ್ಲ ಎಂದು ತಿಳಿದು ಬಂದಿದೆ.