ಬೆಂಗಳೂರು: ಬಿ.ವೈ. ರಾಘವೇಂದ್ರ ಅವರ ಪುತ್ರನ ಮದುವೆ ನಿಶ್ಚಯವಾಗಿದ್ದು, ಈ ಹಿನ್ನೆಲೆ ಮಗನ ಮದುವೆ ವಿವಾಹ ಆಮಂತ್ರಣ ನೀಡಲೆಂದು ಶಿವಮೊಗ್ಗ ಬಿಜೆಪಿ ಸಂಸದ ಮತ್ತು ಬಿಎಸ್ ಯಡಿಯೂರಪ್ಪನವರ ಮಗ ಬಿವೈ ರಾಘವೇಂದ್ರ ಇಂದು ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ರಾಘವೇಂದ್ರ ಅವರು ಡಿಕೆಶಿ ಅವರನ್ನು ಭೇಟಿಯಾಗಿ ಮಗನ ಮದುವೆ ಆಮಂತ್ರಣ ನೀಡಿ ವಾಪಸ್ ಆಗಿದ್ದಾರೆ.
Saffron Milk: ಬಿಸಿ ಬಿಸಿ ಹಾಲಿಗೆ ನೀವು ಕೇಸರಿ ಬೆರೆಸಿ ಕುಡಿದ್ರೆ ಏನಾಗುತ್ತೆ ಗೊತ್ತಾ..?
ಡಿಕೆಶಿ ಮನೆಯಿಂದ ಹೊರಬಂದ ಬಳಿಕ ಮಾಧ್ಯಮಗಳ ಜೊತೆ ಬಿಜೆಪಿ ಸಂಸದ ಬಿ.ವೈ. ರಾಘವೇಂದ್ರ ಮಾತಾಡಿದ್ರು. “ನಮ್ಮ ಮನೆಯಲ್ಲೊಂದು ಕಾರ್ಯಕ್ರಮವಿದ್ದು, ಅದು ನನ್ನ ಮಗನ ವಿವಾಹ ಕಾರ್ಯಕ್ರಮ ಆಗಿದೆ. ಇದಕ್ಕಾಗಿ ಡಿಕೆಶಿ ಅವರಿಗೆ ಆಮಂತ್ರಣ ಕೊಡಲು ಬಂದಿದ್ದೇನೆ ಎಂದ್ರು. ಇದನ್ನು ಬಿಟ್ಟು ಬೇರೆ ಯಾವುದರ ಬಗ್ಗೆ ಕೂಡ ನಾನು ಮಾತನಾಡಿಲ್ಲ ಎಂದಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚಿಸಿದ್ದೇವೆ. ರಾಜಕಾರಣದ ಬಗ್ಗೆ ಯಾವುದೇ ಮಾಡಿಲ್ಲ ಎಂದು ತಿಳಿಸಿದ್ದಾರೆ.