ಹೆಡ್ ಲೈನ್ ನೋಡಿ ಕಾನ್ಫೂಷನ್ ಬೇಡ. ದರ್ಶನ್ ಮುಖ್ಯಮಂತ್ರಿಯಾಗಿದ್ದು ನಿಜವಾ? ಎಲೆಕ್ಷನ್ ನಡೆಲಿಲ್ಲ. ಜನ ವೋಟು ಮಾಡಿಲ್ಲ. ಯಾವಾ ಪಕ್ಷದಿಂದ ಡಿಬಾಸ್ ಸಿಎಂ ಆಗಿಬಿಟ್ರು ಎಂಬ ಪ್ರಶ್ನೆ ನಿಮ್ಮನ್ನು ಕಾಡ್ತಿರಬಹುದು. ಅಸಲಿಗೆ ದರ್ಶನ್ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದೇನೋ ನಿಜ. ಆದರೆ ರಿಯಲ್ ಆಗಿ ಅಲ್ಲ ರೀಲ್ನಲ್ಲಿ.
ರಾಜಸ್ಥಾನದ ಜೈಪುರದಲ್ಲಿ 3ನೇ ಹಂತದ ಡೆವಿಲ್ ಶೂಟಿಂಗ್ ಮುಗಿಸಿಕೊಂಡು ಬಂದ ದರ್ಶನ್ ಟೀಂ ಸೈಲೆಂಟ್ ಆಗಿ 4ನೇ ಹಂತದ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ನಡೆಸುತ್ತಿದೆ. ಈ ಚಿತ್ರದ ಫೋಟೋಗಳು ಲೀಕ್ ಆಗಿದ್ದು, ಅದರಲ್ಲಿ ದರ್ಶನ್ ಪಾತ್ರದ ಹೆಸರು ಕೂಡ ರಿವೀಲ್ ಆಗಿದೆ. ದರ್ಶನ್ ಕೈ ಮುಗಿದಿರುವ ಫೋಟೋ ಹಾಕಿ ಅದರಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಧನುಶ್ ರಾಜಶೇಖರ್ ಎಂದು ಬರೆಯಲಾಗಿದೆ. ಹಾಗಿದ್ರೆ ಡೆವಿಲ್ ನಲ್ಲಿ ದರ್ಶನ್ ಮುಖ್ಯಮಂತ್ರಿಯಾಗಿ ನಟಿಸುತ್ತಿದ್ದಾರೆ ಎಂಬ ಪ್ರಶ್ನೆ ಈಗ ಹುಟ್ಟಿಕೊಂಡಿದೆ.
ಪ್ರಕಾಶ್ ವೀರ್ ನಿರ್ದೇಶನದಲ್ಲಿ ಡೆವಿಲ್ ಸಿನಿಮಾ ಮೂಡಿ ಬರ್ತಿದೆ. ಹೈವೋಲ್ಟೇಜ್ ಆಕ್ಷನ್ ಎಂಟರ್ ಟೈನರ್ ನಲ್ಲಿ ದರ್ಶನ್ ಹೊಸ ಅವತಾರವೆತ್ತಿದ್ದಾರೆ. ಈ ನಡುವೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ನಡಿ ಜಾಮೀನು ಪಡೆದು ಜೈಲಿನಿಂದ ಹೊರಬಂದು ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಡೆವಿಲ್ ಶೂಟಿಂಗ್ ಫೋಟೋಗಳನ್ನು ವೈರಲ್ ಮಾಡದಂತೆ ಅಭಿಮಾನಿಗಳಲ್ಲಿ ಚಿತ್ರತಂಡ ಮನವಿ ಮಾಡಿಕೊಳ್ಳುತ್ತಿದೆ. ಆದರೂ ಅದೇಗೋ ಶೂಟಿಂಗ್ ಫೋಟೋಗಳೋ ವೈರಲ್ ಆಗುತ್ತಿವೆ.