ತಮ್ಮ ಅಭಿನಯ ಹಾಗೂ ಸೌಂದರ್ಯದಲ್ಲಿ ಸಿನಿಪ್ರೇಕ್ಷಕರನ್ನು ಮೋಡಿ ಮಾಡಿದ ಬಹುಭಾಷಾ ನಟಿ ತ್ರಿಷಾ ಕೃಷ್ಣನ್. ವಯಸ್ಸು 41 ಆಗಿದ್ದರೂ ಇಂದಿಗೂ ಮದುವೆಯಾಗದ ತ್ರಿಷಾ ಇತ್ತೀಚೆಗೆ ಸೀಕ್ರೆಟ್ ಆಗಿ ಎಂಗೇಜ್ ಆಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಅಭಿಮಾನಿಗಳು ಕೂಡ ಈ ವಿಷಯ ಕೇಳಿ ಸಂತಸಪಟ್ಟಿದ್ದರು. ಆದರೀಗ ತ್ರಿಷಾ ಕೃಷ್ಣನ್ ಮದುವೆ ಬಗ್ಗೆ ಶಾಕಿಂಗ್ ಕಮೆಂಟ್ ಮಾಡಿದ್ದಾರೆ.
ಸಿನಿಮಾಗಳಲ್ಲಿ ಸಕ್ಸಸ್ ಕಂಡಿರುವ ತ್ರಿಷಾಗೆ ಮದುವೆ ಬಗ್ಗೆ ಆಸಕ್ತಿ ಇದ್ದಂತೆ ಕಾಣ್ತಿಲ್ಲ. ಹಾಗಂತ ನಾವು ಹೇಳ್ತಿಲ್ಲ. ಅವರೇ ಮಾತೇ ಅದನ್ನು ತಿಳಿಸುತ್ತಿದ್ದೆ. ಇತ್ತೀಚೆಗೆ ಥಗ್ ಲೈಫ್ ಸಿನಿಮಾದ ಕಾರ್ಯಕ್ರಮದಲ್ಲಿ ಮದುವೆ ಬಗ್ಗೆ ಪವರ್ ಬ್ಯೂಟಿ ಮುಕ್ತಾವಾಗಿ ಮಾತನಾಡಿದ್ದಾರೆ.
ತ್ರಿಷಾ ಅವರು ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಇದೆ ಎಂದು ಕೇಳಿದಕ್ಕೆ ನಟಿ, “ನನಗೆ ಮದುವೆಯಲ್ಲಿ ನಂಬಿಕೆ ಇಲ್ಲ. ಅದು ಆದರೂ ಪರವಾಗಿಲ್ಲ, ಆಗದಿದ್ದರೂ ಪರವಾಗಿಲ್ಲ” ಎಂದ ಉತ್ತರ ಕೊಟ್ಟಿದ್ದಾರೆ.
ದಳಪತಿ ಜೊತೆ ತ್ರಿಷಾ ಡೇಟಿಂಗ್!?
ತ್ರಿಶಾ ಮದುವೆ ಜೊತೆಗೆ ಅವರ ಡೇಟಿಂಗ್, ಲವ್ ಬಗೆಗಿನ ಗಾಸಿಪ್ಗಳು ಹೆಚ್ಚಾಗಿ ಸುದ್ದಿಯಾಗುತ್ತಲೇ ಇರುತ್ತವೆ. ತ್ರಿಶಾ ಜೊತೆ ಹಲವು ನಟರ ಹೆಸರು ತಳುಕು ಹಾಕಿಕೊಂಡಿತ್ತು. ಅದರಲ್ಲೂ ದಳಪತಿ ವಿಜಯ್ ಅವರನ್ನು ತ್ರಿಷಾ ಮದುವೆಯಾಗುತ್ತಾರೆ ಎಂಬ ಸುದ್ದಿ ಜೋರಾಗಿ ಹರಿದಾಡಿತ್ತು.