ಕೋಲಾರ : ಜಾತಿಗಣತಿ ಸಮೀಕ್ಷಾ ವರದಿಯನ್ನು ನಾನು ಓದಿದ್ದೇನೆ ರಾಜ್ಯದ ಶೇ.98 ರಷ್ಟು ಜನರಿಗೆ ಈ ವರದಿ ಅನುಕೂಲವಾಗಲಿದೆ. ಇನ್ನೂ ಶೇ.70 ಪರ್ಸೆಂಟ್ ಒಕ್ಕಲಿಗ ಹಾಗೂ ಲಿಂಗಾಯತರಿಗೆ ಅನುಕೂಲವಾಗಲಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸತ್ಯದ ಆಧಾರದ ಮೇಲೆ ಚರ್ಚೆಗೆ ಸಿದ್ದ ಸಮೀಕ್ಷೆ ವರದಿ ಅನುಷ್ಟಾನವಾದರೆ ಎಲ್ಲರಿಗೂ ರಿಸವರ್ವೇಷನ್ ಹೆಚ್ಚಾಗಲಿದೆ. ಆದ್ರೆ ಕೆಲವರು ನಮ್ಮದೆ ಜಾಸ್ತಿ ಎನ್ನಲು ಹೊರಟಿದ್ದಾರೆ. ವಕ್ಕಲಿಗರಿಗೆ 3ಎ ನಲ್ಲಿ ಮೀಸಲಾತಿ ಇರುವುದು ಶೇ.4 ಮಾತ್ರ ಆದ್ರೆ ಶೇ.7 ಕ್ಕೆ ಏರಿಕೆಯಾಗಲಿದೆ. ಲಿಂಗಾಯತರಿಗೆ 3 ಬಿಯಲ್ಲಿ ಶೇ.5ರಷ್ಟಿದೆ ಆದರೆ 8ಕ್ಕೆ ಹೆಚ್ಚು ಮಾಡಲು ಶಿಫಾರಸು ಮಾಡಲಾಗಿದೆ. ವರದಿ ಅನುಷ್ಟಾನವಾದರೆ ಎಲ್ಲರಿಗೂ ರಿಸವರ್ವೇಷನ್ ಹೆಚ್ಚಾಗಲಿದೆ. ವಕ್ಕಲಿಗರು ಹಾಗೂ ಲಿಂಗಾಯತರಿಗೆ ಶೇ 3 ರಷ್ಟು ಹೆಚ್ವಾಗಿದೆ. ಹಿಂದುಳಿದ ವರ್ಗ, ಅತಿ ಹಿಂದುಳಿದ ವರ್ಗ, ಅತ್ಯಂತ ಹಿಂದುಳಿದ ಮೂರು ವರ್ಗಗಳಿಗೂ ಅನುಕೂಲವಾಗಲಿದೆ ಕಾನೂನಿನ ಚೌಕಟ್ಟಿನಲ್ಲಿ ಎಲ್ಲರೂ ವಾದ ಮಾಡಬಹುದು ಎಂದರು.
ಒಂದು ಜಾತಿ ಜನಾಂಗದ ಹೆಸರು ಹೇಳಲ್ಲ ಆದರೆ ಅನೇಕ ಜಾತಿಗಳೇ ಹೇಳುತ್ತಿದ್ದಾರೆ ನಮ್ಮ ಜನ ಸಂಖ್ಯೆ ಕಡಿಮೆಯಾಗಿದೆ ಎಂದು ಎಲ್ಲಾ ಜಾತಿಯವರಿಗೂ ಸಂಘಗಳನ್ನ ಕೇಳಿ ಅವರ ಪ್ರಕಾರ 20 ಕೋಟಿ ಜನಸಂಖ್ಯೆ ಮೀರಲಿದೆ. ಇದೊಂದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯಷ್ಟೆ ಜಯಪ್ರಕಾಶ್ ಹೆಗ್ಡೆ ಅವರು ಕೊಟ್ಟಿರುವ ಮುಖ ಪುಟದಲ್ಲಿ ಸಮೀಕ್ಷೆ ಅಂತ ಇದೆ, ಆದ್ರೆ ಕೆಲವರು ಇದನ್ನ ಜಾತಿ ಗಣತಿಯಂತೆ ಬಿಂಬಿಸುತ್ತಿದ್ದಾರೆ. ಯಾರು ಎಷ್ಟು ಹಿಂದುಳಿದಿದ್ದಾರೆ ಅನ್ನೋ ಸಮೀಕ್ಷೆಯನ್ನ ಮಾಡಲಾಗಿದೆ, ಇದು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಮಾಡಲಾಗಿರುವ ಸಮೀಕ್ಷೆ ಅದನ್ನೆ ಕೆಲವರು ಸುಳ್ಳು ಎನ್ನುತ್ತಿದ್ದಾರೆ ಇದು ಎಷ್ಟು ಸರಿ ಎಂದರು.