ಬೆಂಗಳೂರು: ಮಿಸ್ಟರ್ ಡಿ.ಕೆ.ಶಿವಕುಮಾರ್ ಅವರೇ.. ಖಾಲಿ ಸಿಲಿಂಡರ್ ಎತ್ತೋಕೆ ನೀವೇ ಬೇಕಾ? ಒಳ್ಳೆ ನಟನೆ ಕಣ್ರಿ ನಿಮ್ದು ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ವೈಜ್ಞಾನಿಕವಾಗಿ ಸಮೀಕ್ಷೆ ಮಾಡೋಕೆ ಆಗಿಲ್ಲ ಅಂದರೆ ಹೇಗೆ? ಯಾರೋ ಅಮಾಯಕರ ಕೈಯಲ್ಲಿ ಪೆನ್ನು ಕೊಟ್ಟು ವರದಿ ಬರೆಸಿದ್ದೀರಾ. ಡಿಸಿಎಂ ಡಿಕೆಶಿ ಅವರೇ ಪೆನ್ನು ಪೇಪರ್ ಕೇಳಿದ್ರು ಕೊಟ್ಟಿದ್ದಾರೆ. ನೀವು ಯಾವುದಕ್ಕೆ ಉಪಯೋಗ ಮಾಡ್ತಿದ್ದೀರಾ.
Saffron Milk: ಬಿಸಿ ಬಿಸಿ ಹಾಲಿಗೆ ನೀವು ಕೇಸರಿ ಬೆರೆಸಿ ಕುಡಿದ್ರೆ ಏನಾಗುತ್ತೆ ಗೊತ್ತಾ..?
ನಿಮ್ಮ ಆತ್ಮಸಾಕ್ಷಿಯನ್ನು ನೀವೇ ಪ್ರಶ್ನೆ ಮಾಡಿಕೊಳ್ಳಿ ಮಿಸ್ಟರ್ ಡಿ.ಕೆ.ಶಿವಕುಮಾರ್ ಅವರೇ. ಬನ್ನಿ ಸಮಾಜದ ಪರವಾಗಿ ಪೆನ್ನು, ಪೇಪರ್ ಇಟ್ಟುಕೊಳ್ಳಿ. ಬನ್ನಿ ಸಮಾಜ ಕಟ್ಟೋಣ. ಕೊಟ್ಟಿರೋ ಪೆನ್ನು ಪೇಪರ್ ಅನ್ನು ಸರಿಯಾದ ಕೆಲಸಕ್ಕೆ ಬಳಸಿಕೊಳ್ಳಿ. ಮೊನ್ನೆ ಖಾಲಿ ಸಿಲಿಂಡರ್ ಎತ್ತಿಕೊಂಡು ಪೋಸ್ ಕೊಡ್ತೀರಾ. ಖಾಲಿ ಸಿಲಿಂಡರ್ ಎತ್ತೋಕೆ ನೀವೇ ಬೇಕಾ? ಭಾರವನ್ನ ಜನರ ಮೇಲೆ ಹಾಕಿರೋದು ನೀವು. ಒಳ್ಳೆ ನಟನೆ ಕಣ್ರಿ ನಿಮ್ದು ಎಂದು ವಾಗ್ದಾಳಿ ನಡೆಸಿದರು.
ಸಾಮಾನ್ಯವಾಗಿ ನಾಗರಿಕನಾಗಿ ನಾನು ಸಿಎಂ ಅವರಿಗೆ ಪ್ರಶ್ನೆ ಮಾಡ್ತಿದ್ದೇನೆ. ಜಾತಿಗಣತಿ ವರದಿ ಉದ್ದೇಶ ಏನು? ಇದರ ಹಿಡನ್ ಅಜೆಂಡಾ ಏನು? ಎಷ್ಟು ವ್ಯವಸ್ಥಿತವಾಗಿ ಸಂಚು ಮಾಡಿದ್ದೀರಾ ಸಿದ್ದರಾಮಯ್ಯ ಅವರೇ ಎಂದು ಆಕ್ರೋಶ ಹೊರಹಾಕಿದರು.