ನಮ್ಮ ಆಹಾರದಲ್ಲಿ ಬಳಸಲಾಗುವ ಅನೇಕ ಪದಾರ್ಥಗಳು ಔಷಧೀಯ ಗುಣಗಳನ್ನು ಹೊಂದಿದ್ದು, ಅದು ನಮಗೆ ಲೆಕ್ಕವಿಲ್ಲದಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಅದರಲ್ಲಿಯೂ ಅನೇಕ ಮಂದಿ ಪುದೀನಾ ತಿನ್ನಲು ಇಷ್ಟಪಡುತ್ತಾರೆ. ಇದು ನಮ್ಮ ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. ನಿರ್ದಿಷ್ಟವಾಗಿ ಪುದೀನ ಎಲೆಗಳನ್ನು ಅವುಗಳ ರಿಫ್ರೆಶ್ ಪರಿಮಳ ಮತ್ತು ಉತ್ತಮ ರುಚಿಗಾಗಿ ಅನೇಕ ಭಕ್ಷ್ಯಗಳಲ್ಲಿ ಸಂಯೋಜಕವಾಗಿ ಬಳಸಲಾಗುತ್ತದೆ. ಅನೇಕ ಮಂದಿ ತಮ್ಮ ಆಹಾರದಲ್ಲಿ ವಾರಕ್ಕೆ ಒಂದು ಅಥವಾ ಎರಡು ಬಾರಿ ಪುದೀನಾವನ್ನು ಸೇರಿಸುತ್ತಾರೆ.
ಪುದೀನದಲ್ಲಿ ಉತ್ಕರ್ಷಣ ನಿರೋಧಕಗಳು, ಮೆಂಥಾಲ್ ಮತ್ತು ಫೈಟೊನ್ಯೂಟ್ರಿಯಂಟ್ಗಳಿವೆ. ಇವು ಕಿಣ್ವಗಳಿಗೆ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತವೆ. ಪುದೀನದಲ್ಲಿ ಇರುವ ಸಾರಭೂತ ತೈಲಗಳು ಬಲವಾದ ಆಂಟಿಬ್ಯಾಕ್ಟೀರಿಯಾ ಮತ್ತು ನಂಜು ನಿರೋಧಕ ಪರಿಣಾಮಗಳನ್ನು ಹೊಂದಿರುತ್ತವೆ. ಅವು ಹೊಟ್ಟೆಯ ಸೆಳೆತವನ್ನು ಶಾಂತಗೊಳಿಸುತ್ತದೆ. ಆಮ್ಲೀಯತೆ ಮತ್ತು ವಾಯುವನ್ನು ಹಿಡಿತದಲ್ಲಿ ಇಡಲು ಸಹಾಯ ಮಾಡುವುದು.
ನಿಯಮಿತವಾಗಿ ಪುದೀನ ರಸ ಅಥವಾ ಪುದೀನ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಎದೆಯ ದಟ್ಟಣೆ ಕಡಿಮೆಯಾಗುತ್ತದೆ. ಪುದೀನದಲ್ಲಿ ಇರುವ ಮೆಂಥಾಲ್ ಡಿಕೊಂಗಸ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಶ್ವಾಸಕೋಶದಲ್ಲಿ ಸಂಗ್ರಹಿಸಿದ ಲೋಳೆಯನ್ನು ಸಡಿಲಗೊಳಿಸಲು ಸಹಾಯ ಮಡುತ್ತದೆ. ಮೂಗಿನಲ್ಲಿ ಕಟ್ಟಿಕೊಂಡ ಪೊರೆಗಳನ್ನು ಕುಗ್ಗಿಸಿ ಸುಲಭವಾಗಿ ಉಸಿರಾಡಲು ಸಹಾಯ ಗುವಂತೆ ಮಾಡುವುದು. ಪುದೀನವನ್ನು ಮಿತಿ ಮೀರಿ ಸೇವಿಸಬಾರದು. ಮಿತವಾಗಿ ಬಳಸಿದಾಗ ಸಮಸ್ಯೆಯನ್ನು ಆರೋಗ್ಯಕರ ರೀತಿಯಲ್ಲಿ ನಿಯಂತ್ರಣದಲ್ಲಿ ಇಡಬಹುದು.
ಪುದೀನದಲ್ಲಿ ಇರುವ ಮೆಂಥಾಲ್ ಅಂಶವು ಸ್ನಾಯುಗಳನ್ನು ಸಡಿಲಗೊಳಿಸಿ, ನೋವುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪುದೀನ ರಸವನ್ನು ಹಣೆಯ ಮೇಲೆ ಅನ್ವಯಿಸಿಕೊಂಡರೆ ತಲೆನೋವು ನಿವಾರಣೆಯಾಗುವುದು. ತಲೆನೋವು ನಿವಾರಣೆಗೆ ಪುದೀನವನ್ನು ಬಳಸಿ ತಯಾರಿಸಲಾದ ಮುಲಾಮು ಅಥವಾ ಎಣ್ಣೆಯನ್ನು ಸಹ ಹಣೆ ಮತ್ತು ಪೀಡಿತ ಪ್ರದೇಶದಲ್ಲಿ ಅನ್ವಯಿಸಿಕೊಳ್ಳಬಹುದು. ಉತ್ತಮವಾದ ಫಲಿತಾಂಶ ನೀಡುವುದು
ಪುದೀನದಲ್ಲಿ ಇರುವ ಔಷಧೀಯ ಗುಣ ಹಾಗೂ ಅದರ ಪರಿಮಳವು ಅರೋಮಾ ಥೆರಪಿಗಳಿಗೆ ಸಹಾಯ ಮಾಡುವುದು. ಪುದೀನ ಉಲ್ಲಾಸಕರವಾದ ವಾಸನೆಯನ್ನು ಒಳಗೊಂಡಿರುವುದರಿಂದ ಅದು ಬಹು ಬೇಗ ಶಾಂತ ಹಾಗೂ ಉಲ್ಲಾಸದ ಭಾವನೆಯನ್ನು ನೀಡುತ್ತವೆ. ಪುದೀನದ ರಸ ಮತ್ತು ಅದರ ಪರಿಮಳವು ಮಾನಸಿಕ ಒತ್ತಡ ಹಾಗೂ ಖಿನ್ನತೆಯ ಭಾವನೆಯನ್ನು ಬಹುಬೇಗ ನಿವಾರಿಸುವುದು. ರಕ್ತದಲ್ಲಿ ಸಿರೋಟಿನ್ ಅನ್ನು ತಕ್ಷಣ ಬಿಡುಗಡೆಮಾಡುವುದು. ಆಗ ಒತ್ತಡ ಹಾಗೂ ಖಿನ್ನತೆಯು ಸರಾಗವಾಗಿ ನಿವಾರಣೆಯಾಗುವುದು
ಪುದೀನದಲ್ಲಿ ಉರಿಯೂತ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಒಳಗೊಂಡಿದ್ದೆ. ಇದು ಚರ್ಮದ ಮೇಲೆ ಮೊಡವೆ ಮತ್ತು ಗುಳ್ಳೆಗಳಂತಹ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುವುದು. ಪುದೀನದಲ್ಲಿ ಸ್ಯಾಲಿಸಿಲಿಕ್ ಆಮ್ಲವಿರುತ್ತದೆ. ಇದು ಮೊಡವೆ ವಿರೋಧಿüಗಳಾಗಿ ಕಾರ್ಯನಿರ್ವಹಿಸುತ್ತದೆ. ಗಣನೀಯವಾಗಿ ಪುದೀನ ರಸವನ್ನು ಮುಖಕ್ಕೆ ಅನ್ವಯಿಸುವುದರಿಂದ ಚರ್ಮ ಸಂಬಂಧಿ ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸುವುದು.
ಪುದೀನ ಎಲೆಯನ್ನು ಅಗಿಯುವುದರಿಂದ ಬಾಯಿಯ ನೈರ್ಮಲ್ಯ ಮತ್ತು ಹಲ್ಲಿನ ಆರೋಗ್ಯವನ್ನು ಸುಧಾರಿಸಲು ಸಹಾಯವಾಗುವುದು. ಪುದೀನದಲ್ಲಿನ ಸಾರಭೂತ ತೈಲಗಳು ತಾಜಾತನದ ಉಸಿರಾಟವನ್ನು ಪಡೆಯಲು ಸಹಾಯವಾಗುತ್ತದೆ. ಪುದೀನ ಎಣ್ಣೆಯನ್ನು ಹೊಂದಿರುವ ಮೌತ್ವಾಶ್ವನ್ನು ಬಳಸುವುದರಿಂದ ಬಾಯಿಗೆ ಸಂಬಂಧಿಸಿದ ಅನಾರೋಗ್ಯಗಳನ್ನು ಸುಧಾರಿಸಲು ಸಹಾಯವಾಗುವುದು. ಬ್ಯಾಕ್ಟೀರಿಯಾ ಕೊಲ್ಲಲು, ಆರೋಗ್ಯಕರ ಒಸಡುಗಳು ಮತ್ತು ಹಲ್ಲುಗಳನ್ನು ಹೊಂದಲು ಸಹಾಯವಾಗುತ್ತದೆ.
ಕೆಲವು ಅಧ್ಯಯನ ಹಾಗೂ ಸಂಶೋಧನೆಯ ಪ್ರಕಾರ ಪುದೀನ ನೆನಪಿನ ಶಕ್ತಿಯನ್ನು ಸುಧಾರಿಸುತ್ತದೆ. ಮಿದುಳಿನ ಅರಿವಿನ ಕಾರ್ಯವನ್ನು ಸುಧಾರಿಸುತ್ತದೆ. ಪುದೀನವನ್ನು ನಿಯಮಿತವಾಗಿ ಸೇವಿಸುವಾಗ ಮಿತವಾಗಿ ಹಾಗೂ ಹಿತವಾಗಿ ಸೇವಿಸಬೇಕು. ಆಗ ಮಿದುಳಿನ ಆರೋಗ್ಯ ಉತ್ತಮವಾಗಿ ಸುಧಾರಿಸುತ್ತದೆ.
ಆರೊಮ್ಯಾಟಿಕ್ ಮೂಲಿಕೆ ಪುದೀನ. ತೂಕ ನಷ್ಟಕ್ಕೆ ಸಹಾಯ ಮಾಡುವ ನೈಸರ್ಗಿಕ ಉತ್ಪನ್ನಗಳಲ್ಲಿ ಪುದೀನ ಸಹ ಒಂದು. ಪುದೀನದಲ್ಲಿ ಇರುವ ಸಾರಭೂತ ತೈಲ ಮತ್ತು ಪಿತ್ತರಸವು ಜೀರ್ಣ ಕ್ರಿಯೆಯನ್ನು ಉತ್ತೇಜಿಸುತ್ತದೆ. ಜೀರ್ಣಕಾರಿ ಕಿಣ್ವಗಳು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದಾಗಿ ಚಯಾಪಚಯ ಕ್ರಿಯೆಯು ಉತ್ತಮವಾಗುತ್ತದೆ. ಉತ್ತಮ ಜೀರ್ಣ ಕ್ರಿಯೆಯಿಂದ ಸುಲಭವಾಗಿ ತೂಕ ಇಳಿಸಬಹುದು. ಆಕರ್ಷಕ ದೇಹವನ್ನು ಹೊಂದಲು ಸಹಾಯ ಮಾಡುವುದು.
ಆಗಾಗ ನೆಗಡಿ ಅಥವಾ ಶೀತದ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಪುದೀನ ರಸವನ್ನು ಸೇವಿಸಬೇಕು. ಪುದೀನ ರಸವು ನೈಸರ್ಗಿಕವಾಗಿಯೇ ಮೂಗು, ಗಂಟಲು, ಶ್ವಾಸನಾಳ ಮತ್ತು ಶ್ವಾಸಕೋಶದ ದಟ್ಟಣೆಯನ್ನು ತೆರವುಗೊಳಿಸುತ್ತದೆ. ಉಸಿರಾಟದ ಚಾನಲ್ಗಳು ಆರೋಗ್ಯಕರವಾಗಿ ಕಾರ್ಯನಿರ್ವಹಿಸುತ್ತವೆ. ದೀರ್ಘಕಾಲದ ಕೆಮ್ಮಿನಿಂದ ಉಂಟಾಗುವ ಕಿರಿಕಿರಿಯನ್ನು ಸಹ ಸರಾಗೊಳಿಸುತ್ತವೆ
ಪುದೀನಾ ವಾಕರಿಕೆ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುವುದು. ಇದು ಮುಂಜಾನೆಯ ಕಾಯಿಲೆಯಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಗರ್ಭಾವಸ್ಥೆಯಲ್ಲಿ ಇರುವ ಮಹಿಳೆಯರು ಮುಂಜಾನೆಯ ವಾಕರಿಕೆಯ ಸಮಸ್ಯೆಗೆ ಪುದೀನಾದ ಆರೈಕೆ ಮಾಡಬುಹುದು. ವಾಕರಿಕೆಯ ಸಂವೇದನೆ ಉಂಟಾಗಾದ ಪುದೀನದ ಪರಿಮಳವನ್ನು ಸೇವಿಸಿದರೆ ಸಮಸ್ಯೆ ನಿಯಂತ್ರಣಕ್ಕೆ ಬರುವುದು.