ಬೆಂಗಳೂರು:- ಮೆಡಿಕಲ್ ಸ್ಟೋರ್ ಒಂದರಲ್ಲಿ ಬೆಂಕಿ ಅವಘಡ ಸಂಭವಿಸಿರುವ ಘಟನೆ ಬೆಂಗಳೂರಿನ ಗಾಯತ್ರಿನಗರ ಮುಖ್ಯರಸ್ತೆಯ ಮೆಡಿಕಲ್ ನಲ್ಲಿ ಜರುಗಿದೆ.
ಇಲ್ಲಿನ ಹೆಲ್ತ್ ಕೇರ್ ಫಾರ್ಮಾ & ಜನರಲ್ ಸ್ಟೋರ್ ನಲ್ಲಿ ಘಟನೆ ಜರುಗಿದೆ. ಕೂಡಲೇ ಮಾಹಿತಿ ಆಧರಿಸಿ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಬೆಂಕಿ ನಂದಿಸೋ ಕಾರ್ಯ ನಡೆದಿದೆ, ಘಟನೆಯಲ್ಲಿ ಯಾವುದೇ ಪ್ರಣಾಪಾಯವಾಗಿಲ್ಲ. ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೆಡಿಸಿನ್ ಬೆಂಕಿಗಾಹುತಿಯಾಗಿದೆ.
ಸುಬ್ರಮಣ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.