ಬೆಂಗಳೂರು :- ಕರ್ನಾಟಕದಲ್ಲಿ ಜನಿವಾರ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಆರ್ ಆರ್ ಗೆ ಹ್ಯಾಟ್ರಿಕ್ ಸೋಲು: ಲಕ್ನೋ ಸೂಪರ್ ಆಟಕ್ಕೆ ಶರಣಾದ ರಾಯಲ್ಸ್- 2 ರನ್ಗಳ ರೋಚಕ ಜಯ!
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ನನಗೆ ಹೆಚ್ಚು ಮಾಹಿತಿ ಇಲ್ಲ. ನಾನೂ ಕೂಡ ಖಂಡಿಸಿದ್ದೇನೆ. ಯಾಕೆ ಆ ರೀತಿ ಮಾಡಿದ್ರು, ಯಾರ್ ಸೂಚನೆ ಕೊಟ್ರು ಅನ್ನೋದು ಗೊತ್ತಿಲ್ಲ. ಹಿರಿಯ ಅಧಿಕಾರಿಗಳಿಗೆ ತಿಳಿಸಬಹುದಿತ್ತು. ಯಾಕೆ ತೆಗಿಸಿದ್ರು, ಏನ್ ಕಾರಣನೋ ಗೊತ್ತಿಲ್ಲ ಎಂದರು.
ಜಾತಿಜನಗಣತಿ ವರದಿ ಜಾರಿಗೆ ವಿರೋಧ ವಿಚಾರವಾಗಿ ಮಾತನಾಡಿ, ಅವ್ರ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ. ಅಂತಿಮವಾಗಿ ಕ್ಯಾಬಿನೆಟ್ ತೀರ್ಮಾನ ಮಾಡುತ್ತೆ. ಜಟಿಲ ಅಂಥಾ ನನಗೇನೂ ಕಾಣ್ತಿಲ್ಲ. ಕೆಲವು ಸಚಿವರು ಕೇಳಿದ್ದಾರೆ, ಅದನ್ನ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿ ತೀರ್ಮಾನ. ಮೇ 2 ಕ್ಕೆ ಸಭೆ ಕರೆದಿದ್ದಾರೆ ಎಂದರು.
ರಿಕ್ಕಿ ರೈ ಮೇಲೆ ಶೂಡೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ಯಾರ್ ಮಾಡಿದ್ರೂ ಅಂತಾ ತನಿಖೆ ಮಾಡ್ತಿದ್ದಾರೆ. ಸಿಕ್ಕಿದ್ಮೇಲೆ ಗೊತ್ತಾಗುತ್ತೆ. ಇಂಥದ್ರಲ್ಲಿ ಊಹಾಪೋಹ ಮಾಡೋಕೆ ಆಗಲ್ಲ. ಗುಂಡು ಹಾರಿಸಿದವರು ಸಿಕ್ಕಿದ ನಂತ್ರ ಗೊತ್ತಾಗುತ್ತೆ. ರಾಕೇಶ್ ಮಲ್ಲಿ ಭಾಗಿ ಬಗ್ಗೆ ಗೊತ್ತಿಲ್ಲ ಎಂದರು. ಪರಮೇಶ್ವರ್ ಸಿಎಂ ಅವ್ರನ್ನ ಹೊಗಳಿದ ವಿಚಾರವಾಗಿ ಮಾತನಾಡಿ, ಒಂದಿಷ್ಟು ಸತ್ಯ ಹೇಳಿದ್ರೆ ಹೊಗಳೋದು ಏನ್ ಬಂತು. ಅವ್ರು ಹದಿನಾರು ಬಜೆಟ್ ಕೊಟ್ಟಿದ್ದು ಸತ್ಯ ಅಲ್ವಾ. ಆರ್ಥಿಕ ಸಮನ್ವಯತೆ ಸಾಧಿಸಿದ್ದಾರೆ. ಅದನ್ನ ಹೊಗಳಿಕೆ ಅಂದುಕೊಂಡ್ರೆ ಅಂದುಕೊಳ್ಳಲಿ. ಇನ್ನೂ ಸಿಎಂ ಬದಲಾವಣೆ ವಿಚಾರ ಬಗ್ಗೆ ಪ್ರತಿಕ್ರಿಯೆ ಮಾಡಲ್ಲ. ಇನ್ನೂ ಸಿಎಂ ಬದಲಾವಣೆ ಅಪ್ರಸ್ತುತ ಎಂದರು.
ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಬಿಎಂಐಸಿ ಉಪ ಸಮಿತಿ ರಚನೆ ವಿಚಾರವಾಗಿ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಬಗೆಹರಿಯದ ಸಮಸ್ಯೆ. ಸರ್ಕಾರ ಜಮೀನು ಕೊಟ್ಟಿದ್ದು. ಮುನ್ನೂರಕ್ಕೂ ಹೆಚ್ಚು ಪ್ರಕರಣ ಕೋರ್ಟ್ ನಲ್ಲಿದೆ. ಅರ್ಧ ಗಂಟೆಯಲ್ಲಿ ಸಂಪುಟದಲ್ಲಿ ಬಗೆಹರಿಸಲು ಆಗಲ್ಲ. ಹೆಚ್ಚಿನ ಮಾಹಿತಿ ಬಗ್ಗೆ ಚರ್ಚೆ ಆಗಬೇಕು. ಅದಕ್ಕೆ ಸಮಿತಿ ಮಾಡಿದ್ದಾರೆ. ನನ್ನ ಸಿಎಂ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ರಾಮಲಿಂಗಾರೆಡ್ಡಿ, ಹೆಚ್ ಕೆ ಪಾಟೀಲ್ ಸೇರಿ ಹಿರಿಯ ಸಚಿವರೂ ಸದಸ್ಯರು ಇದ್ದಾರೆ. ಜಯಚಂದ್ರ ವರದಿಯನ್ನ ಕೂಡ ನಾವು ಅಧ್ಯಯನ ಮಾಡಿ ಒಂದು ವರದಿ ಕೊಡ್ತೀವಿ ಎಂದರು.