ಬೆಳಗಾವಿ : ಜಾತಿ ಗಣತಿ ವರದಿ ಮೂಲಪ್ರತಿ ಸಿಎಂ ಸಿದ್ದರಾಮಯ್ಯ ಮನೆಯಲ್ಲಿದೆ ಎಂಬ ಆರ್.ಅಶೋಕ್ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದ ಅವರು ಆರ್.ಅಶೋಕ್ ವಿರುದ್ಧ ಗುಡುಗಿದ್ದರು. ಆರ್. ಅಶೋಕ ಯಾವತ್ತು ಸತ್ಯ ಹೇಳಿದ್ದಾನೆ. ಮೂಲಪ್ರತಿ ನಮ್ಮ ಮನೆಯಲ್ಲಿ ಇರೋಕೆ ಹೇಗೆ ಸಾಧ್ಯವಾಗುತ್ತೆ..? ಸೀಲ್ಡ್ ಕವರ್ ನಲ್ಲಿ ಇದ್ದ ವರದಿ ಕ್ಯಾಬಿನೆಟ್ ನಲ್ಲಿ ಎಲ್ಲರ ಎದುರು ಓಪನ್ ಮಾಡಿದ್ದೇವೆ. ಬರೀ ಸುಳ್ಳು ಹೇಳುವುದು. ಬಿಜೆಪಿಯವರು ಸತ್ಯ ಸುಳ್ಳು ಮಾಡ್ತಾರೆ, ಸುಳ್ಳು ಸತ್ಯ ಮಾಡುತ್ತಾರೆ. ಆರ್‌ಎಸ್‌ಎಸ್.ನವರು ಅವರಿಗೆ ಹೇಳಿಕೊಟ್ಟಿದ್ದಾರೆ ಎಂದು.
ಜಾತಿ ಗಣತಿ ಬೇಗ ಜಾರಿ ಮಾಡಿ ಎಂದು ರಾಹುಲ್ ಗಾಂಧಿ ಪತ್ರ ಬರೆದಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ನನಗೆ ಯಾವ ಪತ್ರನೂ ಬರೆದಿಲ್ಲ. ರಾಹುಲ್ ಗಾಂಧಿ ಜೊತೆಗೆ ಚರ್ಚೆ ಮಾಡಿದ್ದೀನಿ. ಚರ್ಚೆ ಮಾಡಿ ಮಂಡಿಸಿದ್ದೇನೆ ಅಂದ್ರೆ ಏನರ್ಥ. ಅವರ ಒಪ್ಪಿಗೆ ಇಲ್ಲದೇ ಮಂಡಿಸಕ್ಕೆ ಆಗುತ್ತಾ ಎಂದರು. ಸಂಪುಟದಲ್ಲಿ ಯಾರೂ ಜಾತಿ ಗಣತಿಗೆ ವಿರೋಧ ಮಾಡಿಲ್ಲ. ಕ್ಯಾಬಿನೆಟ್ ನಲ್ಲಿ ಯಾರು ಜೋರಾಗಿ ಮಾತನಾಡಿಲ್ಲ. ನಿಮ್ಮ ಅಭಿಪ್ರಾಯ ಹೇಳಿ ಎಂದಿದ್ದೇನೆ, ಅಭಿಪ್ರಾಯ ಕೊಟ್ಟಮೇಲೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ಈ ಸರ್ಕಾರ ಯಾವಾಗ ತೊಲಗುತ್ತೊ ಎಂಬ ಆಶಾಭಾವನೆಯಲ್ಲಿ ಜನರಿದ್ದಾರೆ: ಆರ್. ಅಶೋಕ್
ದೇಶದಲ್ಲಿ ಸಮಾನತೆ ಬರಬೇಕು. ಎಲ್ಲಾ ಜಾತಿಯ ಬಡವರಿಗೆ ವಿದ್ಯಾಭ್ಯಾಸ ಸಿಗಬೇಕು. ಬಡವರು ಬಡವರಾಗಿಯೇ ಇರಬೇಕಾ? ಮುಸಲ್ಮಾನರಿಗೆ ಶಿಕ್ಷಣ ಸಿಗಬೇಕಾ ಬೇಡ್ವಾ..? ಎಲ್ಲ ಜಾತಿಯಲ್ಲಿ ಇರುವ ಬಡವರಿಗೆ ಶಿಕ್ಷಣ ಸಿಗಬೇಕಾ ಬೇಡವಾ. ನಾನು ಮೆರಿಟ್ ಮೇಲೆ ಈಗ ಮಾತನಾಡಲ್ಲ, ನೆಕ್ಸ್ಟ್ ಕ್ಯಾಬಿನೆಟ್ ನಲ್ಲಿ ಮಾತನಾಡ್ತೀನಿ ಎಂದರು.