ಕಲಬುರಗಿ: ಲಿವಿಂಗ್ ಟುಗೆದರ್ಗೆ ಮನೆಯವರು ವಿರೋಧಿಸಿದ್ದಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ನಗರದ ನಾಗನಹಳ್ಳಿಯಲ್ಲಿ ನಡೆದಿದೆ. ಕುಮಸಿ ಗ್ರಾಮದ ಶಿವಕುಮಾರ್ (28) ಮೃತ ಯುವಕನಾಗಿದ್ದು. ರೈಲು ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಶಿವಕುಮಾರ್ ಮಹಿಳೆಯೊಂದಿಗೆ ಲಿವಿಂಗ್ ಟುಗೆದರ್ ರಿಲೇಷನ್ ನಲ್ಲಿದ್ದ. ಈ ಬಗ್ಗೆ ತಮ್ಮ ಮನೆಯವರಿಗೆ ತಿಳಿಸಿದ್ದ. ಆದರೆ ಇದಕ್ಕೆ ಮನೆಯವರು ನಿರಾಕರಿಸಿದ್ದಕ್ಕೆ, ಲಿವಿಂಗ್ ಟುಗೆದರ್ನಲ್ಲಿದ್ದ ಮಹಿಳೆಗೆ ಕರೆಮಾಡಿ ಬಳಿಕ ನಾಗನಹಳ್ಳಿ ರೈಲ್ವೆ ಹಳಿಯ ಬಳಿ ತೆರಳಿ ರೈಲು ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವೇಳೆ ಸ್ಥಳಕ್ಕೆ ಬಂದು ಆತನ ರಕ್ಷಣೆಗೆ ಮುಂದಾಗಿದ್ದ ಯುವತಿ ಕೂಡ ಗಾಯಗೊಂಡಿದ್ದು, ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯ ಈ ಸಂಬಂಧ ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.