ಇನ್ಸ್ಟಾಗ್ರಾಮ್ ಸದ್ಯ ವಿಶ್ವದ ಹೆಚ್ಚಿನ ಯುವಕ ಯುವತಿಯರನ್ನ ಆವರಿಸುವ ಸಾಮಾಜಿಕ ಜಾಲತಾಣವಾಗಿದೆ. ಕೆಲವರಂತೂ ಇದನ್ನೇ ಬಂಡವಾಳ ಮಾಡಿಕೊಂಡು ಹಣ ಸಂಪಾದನೆ ಮಾಡುತ್ತಿದ್ದಾರೆ. ಈ ಇನ್ಸ್ಟಾದಲ್ಲಿ ಕ್ರಿಕೆಟರ್ಸ್, ಬಾಲಿವುಡ್ ಸೆಲೆಬ್ರೆಟಿಗಳು, ಖ್ಯಾತ ಉದ್ಯಮಿಗಳು ಮಿಲಿಯನ್ ಗಟ್ಟಲೇ ಫಾಲೋವರ್ಸ್ ಹೊಂದಿದ್ದಾರೆ. ಎಷ್ಟು ಜನರನ್ನ ಫಾಲೋವರ್ಸ್ ಹೊಂದಿದ್ದಾರೋ ಅದಕ್ಕಿಂತ ಡಬಲ್ ಸಂಪಾದನೆ ಮಾಡ್ತಿದ್ದಾರೆ ಎನ್ನಬಹುದು.
ಲಿವಿಂಗ್ ಟುಗೆದರ್ಗೆ ಒಪ್ಪದ ಪೋಷಕರು ; ರೈಲು ಹಳಿಗೆ ಹಾರಿ ಯುವಕ ಆತ್ಮಹತ್ಯೆ
ವಿರಾಟ್ ಕೊಹ್ಲಿ ಕೂಡ ಇನ್ಸ್ಟಾದಲ್ಲಿ 271 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಅಂದರೆ ಕೊಹ್ಲಿ ಅವರ ಇನ್ಸ್ಟಾವನ್ನು 27,10,00,000 ಜನರು ಫಾಲೋ ಮಾಡುತ್ತಿರುವುದು ವಿಶೇಷ. ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಸ್ಟಾರ್ ಕ್ರಿಕೆಟರ್ ಕೊಹ್ಲಿ ಆಗಿದ್ದಾರೆ. ಹೀಗಾಗಿ ಇವರ ಇನ್ಸ್ಟಾ ಖಾತೆಯಲ್ಲಿ ಒಂದು ಪೋಸ್ಟ್ ಶೇರ್ ಮಾಡಿದ್ರೆ ಫಾಲೋವರ್ಸ್ಗೆಲ್ಲಾ ತಲುಪುತ್ತದೆ ಎಂದು ದೊಡ್ಡ ದೊಡ್ಡ ಕಂಪನಿಗಳು ಕೊಹ್ಲಿ ಹಿಂದೆ ಬೀಳುತ್ತಿವೆ.
ತಮ್ಮ ಬ್ರ್ಯಾಂಡ್ ಪ್ರಚಾರ ಮಾಡುವುದಕ್ಕಾಗಿ ವಿರಾಟ್ ಕೊಹ್ಲಿ ಅವರಿಗೆ ಭಾರೀ ಮೊತ್ತದಲ್ಲಿ ಹಣ ಪಾವತಿ ಮಾಡಿ ಅವರ ಇನ್ಸ್ಟಾದಲ್ಲಿ ಜಾಹೀರಾತು ಶೇರ್ ಮಾಡುತ್ತಾರೆ ಎಂದು ಹೇಳಲಾಗುತ್ತದೆ. ಹೀಗಾಗಿಯೇ ವಿರಾಟ್ ಕೊಹ್ಲಿ ಅವರು ಒಂದು ಬ್ರ್ಯಾಂಡ್ ಪ್ರಚಾರ ಮಾಡಲು ಬರೋಬ್ಬರಿ 14 ಕೋಟಿ ರೂಪಾಯಿ ತೆಗೆದುಕೊಳ್ಳುತ್ತಾರೆ ಎನ್ನಲಾಗಿದೆ