ಬೆಂಗಳೂರು:- ಮಾಜಿ ಡಿಜಿ ಅಂಡ್ ಐಜಿಪಿ ಓಂ ಪ್ರಕಾಶ್ ರಾವ್ ಅವರ ಶವ ರಕ್ತಸಿಕ್ತವಾಗಿ ಪತ್ತೆಯಾಗಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜರುಗಿದೆ. ಹೆಂಡ್ತಿ ಅಥವಾ ಮಗಳು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಐಹೊಳೆ ಮಗನ ಮದುವೆಯಲ್ಲಿ ರಮೇಶ ಜಾರಕಿಹೊಳಿ ; ರಾಜು ಕಾಗೆ ಜೊತೆಗೆ ಭರ್ಜರಿ ಮಾತುಕತೆ
ಪೊಲೀಸ್ರು ಸ್ಥಳಕ್ಕೆ ಹೋದ್ರು ಹೆಂಡ್ತಿ ಬಾಗಿಲು ತೆಗೆದಿಲ್ಲ. ಇದು ಭಾರೀ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು, ಮನೆಯೆಲ್ಲಾ ರಕ್ತ ಸಿಕ್ತ ವಾಗಿದೆ. ಸದ್ಯ ಪತ್ನಿಯನ್ನು ವಶಕ್ಕೆ ಪಡೆದಿರೋ ಹೆಚ್ ಎಸ್ ಆರ್ ಲೇಔಟ್ ಪೊಲೀಸರು, ತನಿಖೆ ಚುರುಕುಗೊಳಿಸಿದ್ದಾರೆ.
ಇನ್ನೂ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ದಯಾನಂದ್ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಇನ್ನೂ ಓಂ ಪ್ರಕಾಶ್ ಕೊಲೆ ಹಿನ್ನೆಲೆ ರಾಜ್ಯಾ ಪೊಲೀಸ್ ಮಹಾನಿರ್ದೇಶಕರು ದೌಡಾಯಿಸಿದರು. ಘಟನಾ ಸ್ಥಳಕ್ಕೆ ದೌಡಾಯಿಸಿದ ಅಲೋಕ್ ಮೋಹನ್ ಅವರು ಕೂಡ ಭೇಟಿ ನೀಡಿ ಪರಿಶೀಲಿಸಿದರು. ಇನ್ನೂ ಘಟನೆ ಬಗ್ಗೆ ಗೃಹ ಸಚಿವರು ಮಾಹಿತಿ ಪಡೆದುಕೊಂಡಿದ್ದಾರೆ.
ಇನ್ನೂ ಮೃತ ಓಂ ಪ್ರಕಾಶ್ ಗೆ ಒಟ್ಟು ಇಬ್ಬರು ಮಕ್ಕಳು. ಅದರಲ್ಲಿ ಒಂದು ಒಂದು ಹೆಣ್ಣು ಒಂದು ಗಂಡು ಮಗ, ಒಬ್ಬರಿಗು ಮದುವೆ ಆಗಿದೆ. ಕಾರ್ತಿಕೇಶ್ ಮಗ ಆಗಿದ್ದು ಬೆಂಗಳೂರಿನಲ್ಲಿ ನೆಲಸಿದ್ದಾರೆ. ಪತ್ನಿ ಹಾಗು ಓಂ ಪ್ರಕಾಶ್ ನಡುವೆ ಜಗಳ ನಡೆದಿದೆ. ಹಲವು ವರ್ಷಗಳಿಂದ ಕೌಟುಂಬಿಕ ಕಲಹ ಇಬ್ಬರ ನಡುವೆ ಇತ್ತು. ಕೌಟುಂಬಿಕ ಕಲಹದ ಹಿನ್ನೆಲೆ ಓಂ ಪ್ರಕಾಶ್ ಖಿನ್ನತೆಗೆ ಒಳಗಾಗಿದ್ದರು. ಸಾಕಷ್ಟು ಆಸ್ತಿ ಪಾಸ್ತಿ ಯನ್ನು ಓಂ ಪ್ರಕಾಶ್ ಸಂಪಾದಿಸಿದರು. ಆಸ್ತಿ ಸಂಬಂಧ ಕೂಡ ಅಪ್ಪ-ಮಕ್ಕಳ ನಡುವೆ ಭಿನ್ನಾಭಿಪ್ರಾಯ ಇತ್ತು.
ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕುಂದುಕೊರೆತೆ ವಿಭಾಗದಲ್ಲಿ ಓಂ ಪ್ರಕಾಶ್ ಇದ್ದರು. ಈ ವೇಳೆ ಓರ್ವ ಮಹಿಳೆ ವಿಚಾರವಾಗಿ ಕಲಹ ಉಂಟಾಗಿದೆ. ಓಂ ಪ್ರಕಾಶ್ ಮತ್ತು ಪತ್ನಿ ಇದೇ ವಿಚಾರವಾಗಿ ಭಿನ್ನಾಭಿಪ್ರಾಯ ಇತ್ತು. ಇದಾದ ಬಳಿಕ ಪತಿ ಪತ್ನಿ ಅಷ್ಟಕ್ಕೆ ಅಷ್ಟೇ ಎನ್ನುವಂತೆ ಇದ್ರು ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಓಂಪ್ರಕಾಶ್ ಪತ್ನಿಯು, ಸ್ಕಿಜೋಫ್ರೇನಿಯ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. Schizophrenia ಮಾನಸಿಕ ಕಾಯಿಲೆಯಿಂದ 12 ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಈ ಸಮಸ್ಯೆಯಿಂದ ಬಳಲುತ್ತಿರೋ ಸದಾ ಭ್ರಮೆಯ ಸ್ಥಿತಿಯಲ್ಲಿ ಇರ್ತಾರೆ. ಯಾವುದೋ ವಿಚಾರ ಕಲ್ಪಿಸಿಕೊಂಡು ಆತಂಕ ಪಡುತ್ತಾ ಇರ್ತಾರೆ. ಇದೆ ಖಾಯಿಲೆಯಿಂದ ಪತಿಯ ಮೇಲೆ ಇಲ್ಲದ ಸಲ್ಲದ ಊಹೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ. ಗನ್ ಹಿಡಿದುಕೊಂಡು ಭಯ ಪಡಿಸ್ತಾ ಇದ್ದಾರೆ ಅಂತ ಸಂಬಂಧಿಕರಿಗೆ ಹಲವು ಬಾರಿ ಪತ್ನಿ ಹೇಳ್ತಿದ್ದ. ಈ ಬಗ್ಗೆ ಫ್ಯಾಮಿಲಿ ಗ್ರೂಪ್ ನಲ್ಲಿ ಪತ್ನಿ ಮೆಸೇಜ್ ಕೂಡ ಮಾಡಿದ್ದ. ಐಪಿಎಸ್ ಅಧಿಕಾರಿಗಳ ಗ್ರೂಪ್ ನಲ್ಲಿ ಮೆಸೇಜ್ ಮಾಡ್ತಿದ್ದರು ಎನ್ನಲಾಗಿದೆ.
: ಓಂ ಪ್ರಕಾಶ್ ಗೆ ಪತ್ನಿ ಚಾಕು ಇರಿದಿದ್ದು ಎಷ್ಟು ಬಾರಿ..?
ಪ್ರಾಥಮಿಕ ತನಿಖೆಯಲ್ಲಿ ಮಹತ್ವದ ಮಾಹಿತಿ ರಿವಿಲ್ ಆಗಿದೆ. ಪ್ರಾಥಮಿಕ ತನಿಖೆ ವೇಳೆ 8-10 ಬಾರಿ ಚಾಕು ಇರಿದಿರುವುದು ತಿಳಿದು ಬಂದಿದೆ. ಎದೆ, ಹೊಟ್ಟೆ ಹಾಗೂ ಕೈ ಭಾಗಕ್ಕೆ ಚಾಕು ಇರಿಯಲಾಗಿದೆ. ಹೊಟ್ಟೆ ಭಾಗಕ್ಕೆ ಸುಮಾರು ನಾಲ್ಕರಿಂದ ಐದು ಬಾರಿ ಚಾಕು ಇರಿಯಲಾಗಿದೆ. ಹೊಟ್ಟೆ ಭಾಗಕ್ಕೆ ಹೆಚ್ಚು ಚಾಕು ಇರಿದಿರುವ ಕಾರಣ ತೀವ್ರ ರಕ್ತಸ್ರಾವವಾಗಿದೆ. ಕೆಳಗಿನ ಮಹಡಿಯ ಹಾಲ್ ತುಂಬಾ ರಕ್ತ ಹರಿದಿದೆ. ಸುಮಾರು 15-20 ನಿಮಿಷಗಳ ಕಾಲ ಓಂ ಪ್ರಕಾಶ್ ಒದ್ದಾಡುತ್ತಿದ್ದರು.
ಈ ವೇಳೆ ಗಂಡನ ನರಳಾಟ ನೋಡುತ್ತಾ ಪತ್ನಿ ನಿಂತಿದ್ದರು. ಕೊನೆಗೆ ಗಂಡ ಸಾವನ್ನಪ್ಪಿದ ಬಳಿಕ ಐಪಿಎಸ್ ಅಧಿಕಾರಿ ಪತ್ನಿಗೆ ಕಾಲ್ ಮಾಡಿದ್ದಾರೆ. ಕೊಲೆ ಮಾಡಿರೋ ವಿಚಾರವನ್ನು ಪತ್ನಿ ಪಲ್ಲವಿ ತಿಳಿಸಿದ್ದರು. ಗಂಡ ಕೊಲೆಯಾದ ಬಳಿಕ ಹೆಚ್ ಎಸ್ ಆರ್ ಲೇ ಔಟ್ ಪೊಲೀಸರಿಗೆ ಕಾಲ್ ಮಾಡಿದ್ದಾರೆ. ಎರಡನೇ ಮಹಡಿಯಲ್ಲಿ ವಾಸವಿದ್ದರು. ಮೂರನೇ ಮಹಡಿಯಲ್ಲಿ ಮಗ ಹಾಗೂ ಸೊಸೆ ವಾಸವಿದ್ದರು ಎನ್ನಲಾಗಿದೆ.
ಕೆಳಮಹಡಿಯಲ್ಲಿ ಓಂ ಪ್ರಕಾಶ್ ಹಾಗೂ ಪತ್ನಿ ವಾಸ ಮಾಡುತ್ತಿದ್ದರು. ಸೊಸೆ ಹಾಗೂ ಮಗ ಊಟಕ್ಕೆ ಹೋದ ಸಮಯದಲ್ಲಿ ಹತ್ಯೆ ಶಂಕೆ ವ್ಯಕ್ತವಾಗಿದೆ. ಹತ್ಯೆ ನಡೆದ ಮನೆಯಲ್ಲಿ ಐವರ ವಾಸವಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಪ್ರಕರಣ ಸಂಬಂಧ ತನಿಖೆ ಮುಂದುವರೆದಿದೆ.