ಬೆಂಗಳೂರು:- ನಿವೃತ್ತ ಡಿಜಿಪಿ ಓಂಪ್ರಕಾಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ವಿಚಾರಣೆಯಲ್ಲಿ ಸ್ಫೋಟಕ ಮಾಹಿತಿ ಬಯಲಾಗುತ್ತಿದೆ. ಪೊಲೀಸರ ಮುಂದೆ ಕೊಲೆ ಆರೋಪಿ ಪಲ್ಲವಿ ಹೇಳಿಕೆ ನೀಡಿದ್ದು, ಕಳೆದ ಒಂದು ವಾರದಿಂದ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಪದೇ ಪದೇ ಗನ್ ತಂದು ನನಗೆ ಮತ್ತು ನನ್ನ ಮಗಳಿಗೆ ಶೂಟ್ ಮಾಡೋದಾಗಿ ಬೆದರಿಕೆ ಹಾಕುತ್ತಿದ್ರು.
ಬೆಳಗ್ಗೆಯಿಂದ ಬೇರೆ ಬೇರೆ ವಿಚಾರಕ್ಕೆ ಮನೆಯಲ್ಲಿ ಜಗಳ ಶುರುವಾಗಿತ್ತು. ಮಧ್ಯಾಹ್ನ ಜಗಳ ವಿಕೋಪಕ್ಕೆ ಹೋದಾಗ ನಮ್ಮನ್ನೇ ಕೊಲೆ ಮಾಡಲು ಓಂಪ್ರಕಾಶ್ ಯತ್ನ ನಡೆಸಿದ್ರು. ಈ ವೇಳೆ ನಮ್ಮನ್ನು ಉಳಿಸಿಕೊಳ್ಳಲು ನಾವು ಹೋರಾಟ ಮಾಡಿದ್ವೀ. ನಂತರ ಓಂಪ್ರಕಾಶ್ ಮೇಲೆ ಖಾರದ ಪುಡಿ ಹಾಗು ಅಡುಗೆ ಆಯಿಲ್ ಸುರಿದಿದ್ದರು. ನಂತರ ಓಂಪ್ರಕಾಶ್ ಕೈಕಾಲು ಕಟ್ಟಿ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಪಲ್ಲವಿ ಚುಚ್ಚಿದ್ದಾರೆ. ನಂತರ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ.
ಸಂಜೆ ಸ್ಥಳೀಯ ಪೊಲೀಸರಿಗೆ ಪಲ್ಲವಿ ಮಾಹಿತಿ ನೀಡಿದ್ದಾರೆ. ಪ್ರಕರಣದಲ್ಲಿ ಪತ್ನಿ ಪಲ್ಲವಿ A-1 ಆರೋಪಿ ಆಗಿದ್ದಾರೆ. ಪ್ರಕರಣ ದಾಖಲಾದ ಕೂಡಲೇ ಪೊಲೀಸರು, ಅರೆಸ್ಟ್ ಪ್ರೋಸೆಸ್ ಮಾಡಲಿದ್ದಾರೆ. ಪ್ರಕರಣದಲ್ಲಿ ಓಂಪ್ರಕಾಶ್ ಮಗಳ ಪಾತ್ರದ ಬಗ್ಗೆ ವಿಚಾರಣೆ ಮಾಡಲಾಗುತ್ತಿದೆ. ಪ್ರಕರಣ ಸಂಬಂಧ ಓಂಪ್ರಕಾಶ್ ಪತ್ನಿ ಪಲ್ಲವಿ ಹಾಗು ಪುತ್ರಿ ಪೊಲೀಸರ ವಶಕ್ಕೆ ಪಡೆಯಲಾಗಿದೆ.
ವಶಕ್ಕೆ ಪಡೆದು ವಿಚಾರಣೆ ಡಿಸಿಪಿ ಸಾ.ರಾ ಫಾತೀಮಾ ವಿಚಾರಣೆ ಮಾಡುತ್ತಿದ್ದಾರೆ. ಇನ್ನೂ ಮತ್ತೊಂದೆಡೆ ಪೊಲೀಸರು, ಮನೆಯ ಗ್ರೌಂಡ್ ಫ್ಲೋರ್ ಸೀಜ್ ಮಾಡಿದ್ದಾರೆ. ನಿವೃತ್ತ ಡಿಜಿಪಿ ಓಂಪ್ರಕಾಶ್ ಮರ್ಡರ್ ನಡೆದಿದ್ದ ಗ್ರೌಂಡ್ ಫ್ಲೋರ್ ಸೀಜ್ ಮಾಡಿದ್ದಾರೆ. ಮನೆಯ ಮೊದಲ ಫ್ಲೋರ್ ನಲ್ಲಿ ಓಂ ಪ್ರಕಾಶ್ ಮಗ ಮತ್ತು ಸೊಸೆ ವಾಸವಾಗಿದ್ದರು. ಸಾಕ್ಷಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಗ್ರೌಂಡ್ ಫ್ಲೋರ್ ಸೀಜ್ ಮಾಡಲಾಗಿದೆ.