ರಾಕಿಂಗ್ ಸ್ಟಾರ್ ಯಶ್ ಲಂಕಾಧಿಪತಿ ರಾವಣನಾಗುವ ಮೊದಲು ಮಹತ್ತರ ಕಾರ್ಯವೊಂದನ್ನು ಮಾಡಿದ್ದಾರೆ. ನಾಳೆಯಿಂದ ರಾಮಾಯಾಣ 2 ಸಿನಿಮಾದ ಶೂಟಿಂಗ್ ಆರಂಭಗೊಳ್ಳಲಿದೆ. ಹೀಗಾಗಿ ಶೂಟಿಂಗ್ ಆರಂಭಕ್ಕೂ ಮುನ್ನ ಯಶ್ ಉಜ್ಜನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇದೇ ವೇಳೆ ಯಶ್, ಶಿವನ ಆಶೀರ್ವಾದ ಪಡೆಯಲು ಬಂದೆ. ಬಹಳ ಖುಷಿ ಆಗುತ್ತಿದೆ. ನಾನು ಚಿಕ್ಕಂದಿನಿಂದ ಶಿವನ ದೊಡ್ಡ ಭಕ್ತ. ನಾವು ಮನೆದೇವರು ಎಂದು ಕರೆಯುತ್ತೇನೆ. ಕುಲದೇವರು ಶಿವ. ಇಲ್ಲಿಗೆ ಬಂದಿರುವುದು ಸಂತಸ ತಂದಿದೆ. ದೇವರ ಸನ್ನಿಧಿಯಲ್ಲಿ ಧ್ಯಾನ ಮಾಡುತ್ತಾ ಕುಳಿತಾಗ ಸಮಯ ಕಳೆದಿದ್ದೇ ಗೊತ್ತಾಗಲಿಲ್ಲ. ಅದ್ಭುತ ಅನುಭವ ಸಿಕ್ಕಿದೆ” ಎಂದು ಹೇಳಿದ್ದಾರೆ.
ರಾಕಿಭಾಯ್ ತಮ್ಮ ಬ್ಯಾನರ್, ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ಮಲ್ಹೋಟಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್ ಜೊತೆಗೆ ರಾಮಾಯಣ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರ ನಿರ್ಮಾಣದ ಜೊತೆಗೆ ರಾವಣಾಸುರನಾಗಿ ಗಹಗಹಿಸಲಿದ್ದಾರೆ. ಅದಕ್ಕೂ ಮುನ್ನ ಶಿವನಿಗೆ ನಮಿಸಿದ್ದಾರೆ. ಪ್ರತಿ ಸಿನಿಮಾ ಆರಂಭಕ್ಕೂ ಮುನ್ನ ಯಶ್ ಟೆಂಪಲ್ ರನ್ ಮಾಡೋದು ವಾಡಿಕೆ. ಅದರಂತೆ ಇಂದು ಉಜ್ಜನಿಯ ಮಹಾಕಾಳೇಶ್ವರ ನಮಿಸಿದ್ದಾರೆ.
ಮಧ್ಯಪ್ರದೇಶದ ಸಿಎಂ ಭೇಟಿಯಾದ ಯಶ್!
ಉಜ್ಜನಿಯ ಮಹಾಕಾಳೇಶ್ವರ ದರ್ಶನ ಪಡೆದ ಬಳಿಕ ಯಶ್ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಭೇಟಿ ಮಾಡಿದ್ದಾರೆ. ಇದೊಂದು ಆತ್ಮೀಯ ಭೇಟಿಯಾಗಿದ್ದು, ಯಶ್ ಅವರನ್ನು ಮೋಹನ್ ಯಾದವ್ ಆತ್ಮೀಯವಾಗಿ ಸ್ವಾಗತಿಸಿದ್ದಾರೆ.
ರಣ್ಬೀರ್ ರಾಮ, ಸಾಯಿಪಲ್ಲವಿ ಸೀತೆ!
ರಾಮಯಣ ಸಿನಿಮಾದಲ್ಲಿ ರಣ್ಬೀರ್ ಕಪೂರ್ ರಾಮನಾಗಿ ಸಾಯಿಪಲ್ಲವಿ ಸೀತೆಯಾಗಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಆದ್ರೆ ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿಯನ್ನು ರಿವೀಲ್ ಮಾಡಿಲ್ಲ. ನಿತಿಶ್ ತಿವಾರಿ ಸಾರಥ್ಯದಲ್ಲಿ ರಾಮಾಯಣ ಸಿನಿಮಾದ ಎರಡು ಭಾಗಗಳಾಗಿ ತೆರೆ ಬರ್ತಿದ್ದು, ಈ ಚಿತ್ರದ ಮುಂದಿನ ವರ್ಷ ರಾಮಾಯಣ 1 ಸಿನಿಮಾದ ದರ್ಶನವಾಗಲಿದೆ.
2026ಕ್ಕೆ ಯಶ್ ಡಬಲ್ ಧಮಾಕ!
ಮುಂದಿನ ವರ್ಷ ರಾಕಿಭಾಯ್ ಫ್ಯಾನ್ಸ್ ಗೆ ಡಬಲ್ ಧಮಾಕ. ಒಂದ್ಕಡೆ ಟಾಕ್ಸಿಕ್ ಸಿನಿಮಾ ಮಾರ್ಚ್ 19ಕ್ಕೆ ತೆರೆಗೆ ಬರ್ತಿದೆ. ಆದಾದ ಬಳಿಕ ರಾಮಾಯಣ ಬಿಡುಗಡೆಯಾಗಲಿದೆ. ಈ ಮೂಲಕ ಯಶ್ ತಮ್ಮ ಎರಡು ಬಹುನಿರೀಕ್ಷಿತ ಸಿನಿಮಾಗಳ ಮೂಲಕ ಮುಂದಿನ ವರ್ಷ ಬೆಳ್ಳಿತೆರೆ ಅಖಾಡದಲ್ಲಿ ಧೂಳ್ ಎಬ್ಬಿಸಲಿದ್ದಾರೆ.