ಹಲವರು ಹೆಚ್ಚುತ್ತಿರುವ ತೂಕವನ್ನು ಕಡಿಮೆ ಮಾಡಲು ಕಷ್ಟಪಟ್ಟು ಪ್ರಯತ್ನಿಸುತ್ತಾರೆ. ಆದರೆ ಎಷ್ಟೇ ಪ್ರಯತ್ನಪಟ್ಟರೂ ಅಪೇಕ್ಷಿತ ಫಲಿತಾಂಶ ಸಿಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ವ್ಯಾಯಾಮದ ಜೊತೆಗೆ ಹೊಟ್ಟೆ ಮತ್ತು ಸೊಂಟದ ಸುತ್ತಲಿನ ಕೊಬ್ಬನ್ನು ಕಡಿಮೆ ಮಾಡುವ ಕೆಲವು ಆಹಾರಗಳನ್ನು ಸಹ ಸೇವಿಸಲು ಪ್ರಾರಂಭಿಸುವುದು ಮುಖ್ಯ. ಮೊಸರಿನ ಸಹಾಯದಿಂದ ತೂಕ ಇಳಿಸಿಕೊಳ್ಳುವುದು ಮಾತ್ರವಲ್ಲದೆ ದೇಹದಲ್ಲಿ ಇರುವ ಇತರ ಅನೇಕ ಸಮಸ್ಯೆಗಳನ್ನು ಸಹ ಗುಣಪಡಿಸಬಹುದು.
ರಾಜ್ಯದಲ್ಲಿ ಮುಸ್ಲಿಮರು ಬಿಟ್ಟು ಬೇರೆ ಯಾರು ಸುರಕ್ಷಿತ ಇಲ್ಲ- ಅರವಿಂದ ಬೆಲ್ಲದ್
ಹಾಲಿನ ಉಪ ಉತ್ಪನ್ನ ಎಂದೇ ಕರೆಯಲಾಗುವ, ಮೊಸರಿನಲ್ಲಿ ಮನುಷ್ಯನ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳು ಕಂಡು ಬರುತ್ತದೆ.ವಿಶೇಷವಾಗಿ ಮನೆಯಲ್ಲೇ ರೆಡಿ ಮಾಡಿದ ಮೊಸರಿನಲ್ಲಿ ಅಧಿಕ ಪ್ರಮಾಣದ ಪ್ರೋಟೀನ್, ಮೂಳೆಗಳ ಆರೋಗ್ಯ ವೃದ್ಧಿಗೆ ಬೇಕಾಗು ವಂತಹ ಕ್ಯಾಲ್ಸಿಯಂ ಅಂಶಗಳು, ವಿಟಮಿನ್ಸ್ ಗಳಾದ ವಿಟಮಿನ್ ಬಿ2, ವಿಟಮಿನ್ ಬಿ12 ಹಾಗೂ ಹೃದಯಕ್ಕೆ ಸಹಕಾರಿಯಾಗಿರುವ ಪೊಟ್ಯಾಶಿಯಮ್ ಮತ್ತು ಮೆಗ್ನೀಸಿಯಮ್ ಅಂಶಗಳು ಕೂಡ ಅಗಾಧ ಪ್ರಮಾಣದಲ್ಲಿ ಕಂಡು ಬರುತ್ತದೆ.
ಒಟ್ಟಿನಲ್ಲಿ ಹೇಳಬೇಕೆಂದರೆ ಮೊಸರಿನಲ್ಲಿ ಹಾಲಿನಲ್ಲಿ ಇರುವಷ್ಟೇ ಪೌಷ್ಟಿಕ ಸತ್ವಗಳು ಕಂಡು ಬರುತ್ತದೆ. ಆದರೆ ನೆನಪಿಡಿ ಅತಿಯಗಿ ಮೊಸರನ್ನು ಸೇವನೆ ಮಾಡಲು ಹೋಗಬಾರದು ಇಲ್ಲಾಂದ್ರೆ ಅಜೀರ್ಣ ಸಮಸ್ಯೆ,ತೂಕ ಹೆಚ್ಚಳ ಮತ್ತು ಲ್ಯಾಕ್ಟೋಸ್ ಅಸಹಿಷ್ಣುತೆ ಕೂಡ ಕಂಡು ಬರುವ ಸಾಧ್ಯತೆ ಇರುತ್ತದೆ! ಇಂದಿನ ಲೇಖನದಲ್ಲಿ ಬೇಸಿಗೆಯಲ್ಲಿ ಮೊಸರು ಸೇವನೆ ಮಾಡುವಾಗ ಏನೆಲ್ಲಾ ಮುನ್ನೆಚ್ಚರಿಕೆಗಳನ್ನು ಮಾಡಬೇಕು? ಈ ಬಗ್ಗೆ ಆರೋಗ್ಯ ತಜ್ಞರು ಏನು ಹೇಳುತ್ತಾರೆ ನೋಡೋಣ ಬನ್ನಿ
ಮೊಸರು ಸ್ವಾಭಾವಿಕವಾಗಿ ಹುಳಿ ರುಚಿ ಹೊಂದಿದ್ದು, ದೇಹಕ್ಕೆ ಉಷ್ಣ ಪ್ರಭಾವವನ್ನು ಉಂಟುಮಾಡುತ್ತದೆ. ಹೀಗಾಗಿ ಮೊಸರಿಗೆ ಸ್ವಲ್ಪ ನೀರು ಬೆರೆಸಿ ಕುಡಿಯುವುದ ರಿಂದ ದೇಹವನ್ನು ಸಮತೋಲನದಲ್ಲಿಡಲು ನೆರವಾಗುತ್ತದೆ. ಅಲ್ಲದೆ ಈಗಾಗಲೇ ಕಫ, ರಕ್ತಸ್ರಾವ ಮತ್ತು ಉರಿಯುತ ಸಮಸ್ಯೆಗಳ ಸಮಸ್ಯೆ ಇರು ವವರು ಮೊಸರು ಸೇವನೆಯನ್ನು ಮಾಡಬಾರದು ಎಂದು ಕೂಡ ಸಲಹೆ ನೀಡುತ್ತಾರೆ.
ನಮ್ಮಲ್ಲಿ ಹೆಚ್ಚಿನವರು ಮೊಸರಿಗೆ ಜೀರಿಗೆ ಪುಡಿ ಮತ್ತು ಉಪ್ಪು ಸೇರಿಸಿ ತಿನ್ನಲು ಇಷ್ಟಪಡುತ್ತಾರೆ. ಆದರೆ ಆಯುರ್ವೇದದ ಪ್ರಕಾರ ಹಾಗೆ ಮಾಡು ವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಮೊಸರನ್ನು ಉಪ್ಪಿನೊಂದಿಗೆ ತಿನ್ನಬಾರದು, ಉಪ್ಪು ಸೇರಿಸಿದರೂ ಅದನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಸೇರಿಸಿ. ಅದೇ ರೀತಿ, ಮೊಸರಿಗೆ ಸಕ್ಕರೆ ಸೇರಿಸುವುದು ಸಹ ಸರಿಯಲ್ಲ ಎಂದು ಪರಿಗಣಿಸಲಾಗಿದೆ.
ಹುಳಿ ಇರುವ ಹಣ್ಣುಗಳೊಂದಿಗೆ ಅಂದರೆ ಸಿಟ್ರಸ್ ಜಾತಿಗೆ ಸೇರಿರುವ ಹಣ್ಣು ಗಳ ಜೊತೆಗೆ ಮೊಸರು ಸೇವನೆ ಮಾಡಬೇಡಿ. ಅಲ್ಲದೆ ಮಸಾಲೆ ಯುಕ್ತ ಆಹಾರದೊಂದಿಗೆ ಕೂಡ ಮೊಸರನ್ನು ಸೇವನೆ ಮಾಡುವ ಅಭ್ಯಾಸ ಬಿಟ್ಟುಬಿಡಿ. ಯಾಕೆಂದ್ರೆ ಇದರಿಂದ ಕರುಳಿನ ಆರೋಗ್ಯಕ್ಕೆ ಹಾನಿ ಉಂಟಾ ಗುತ್ತದೆ.ಇದರ ಬದಲು ಮೊಸರಿನೊಂದಿಗೆ ನೆಲ್ಲಿಕಾಯಿ ಪುಡಿ ಮತ್ತು ಜೇನು ತುಪ್ಪವನ್ನು ಬೆರೆಸಿ ತಿನ್ನಬಹುದು. ಇದು ದೇಹಕ್ಕೆ ಪೋಷಕಾಂಶ ಗಳನ್ನು ಒದಗಿಸುತ್ತದೆ.
ಪಾಲಕ್ ಸೊಪ್ಪಿನಂತಹ ತರಕಾರಿಗಳೊಂದಿಗೆ ಕೂಡ ಮೊಸರನ್ನು ಎಂದಿಗೂ ಸೇವಿಬೇಡಿ. ಏಕೆಂದರೆ ಈ ಸೊಪ್ಪಿನಲ್ಲಿ ಕಂಡುಬರುವ ಅಧಿಕ ಪ್ರಮಾಣದ ಆಕ್ಸಲೇಟ್ ಪ್ರಮಾಣ ಮತ್ತು ಮೊಸರಿನಲ್ಲಿ ಕಂಡುಬರುವ ಅಧಿಕ ಪ್ರಮಾಣ ಕ್ಯಾಲ್ಸಿಯಂ ಅಂಶದಿಂದಾಗಿ, ಜೀರ್ಣಕ್ರಿಯೆಯ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಹೀಗಾಗಿ ಪಾಲಕ್ ಸೊಪ್ಪು ಹಾಗೂ ಮೊಸರು ಒಟ್ಟಿಗೆ ಸೇವನೆ ಮಾಡುವುದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಹಾಗಂತ ಕೇವಲ ಪಾಲಕ್ ಸೊಪ್ಪು ಮಾತ್ರವಲ್ಲ, ಎಲೆಗಳ ತರಕಾರಿಗಳೊಂದಿಗೆ ಕೂಡ ಮೊಸರನ್ನು ತಿನ್ನಬಾರದು.
ಯಾವುದೇ ಕಾರಣಕ್ಕೂ ಮೊಸರನ್ನು ಮೀನಿನ ಪದಾರ್ಥಗಳ ಜೊತೆಗೆ ಇಲ್ಲಾಂದ್ರೆ ನಾನ್-ವೆಜ್ ಜೊತೆಗೆ ಸೇವನೆ ಮಾಡಬಾರದು ಎನ್ನುತ್ತಾರೆ ಆಯುರ್ವೇದ ತಜ್ಞರು. ಇದಕ್ಕೆ ಕಾರಣವಿದೆ, ಅದೇನೆಂ ದರೆ ಮೊಸರು ಮತ್ತು ಮೀನು.
ಪ್ರೋಟೀನ್ ಅಂಶದಲ್ಲಿ ತುಂಬಾ ಹೆಚ್ಚಿನ ಪ್ರಭಾವ ಹೊಂದಿದೆ. ಇದೇ ಕಾರಣಕ್ಕೆ ತಜ್ಞರು, ಮೊಸರನ್ನು ಯಾವುದೇ ನಾನ್-ವೆಜ್ ಆಹಾರಗಳ ಜೊತೆಗೆ ಅದರಲ್ಲೂ ಮೂಖ್ಯವಾಗಿ ಮೀನಿನೊಂದಿಗೆ ಸೇವನೆ ಮಾಡಲು ಹೋಗಲೇಬಾರದು ಎಂದು ಸಲಹೆ ನೀಡುತ್ತಾರೆ. ಈ ಬಗ್ಗೆ ತಜ್ಞರು ಹೇಳುವ ಒಂದು ಸಸ್ಯಹಾರ ಪ್ರೋಟಿನ್ ಮತ್ತು ಮಾಂಸಾಹಾರ ಪ್ರೋಟೀನ್ ಜೊತೆ ಗೂಡಿದರೆ ಅದರಿಂದ ಅಜೀರ್ಣತೆ ಮತ್ತು ಹೊಟ್ಟೆಗೆ ಸಂಬಂಧಪಟ್ಟಂತೆ ಇನ್ನಿತರ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತದೆ.
ಮೊಸರನ್ನು ಯಾವುದೇ ಕಾರಣಕ್ಕೂ ಬಿಸಿ ಮಾಡಿ ಸೇವನೆ ಮಾಡಬಾರದು ಎನ್ನುತ್ತಾರ ತಜ್ಞರು, ಮೊಸರನ್ನು ಬಿಸಿ ಮಾಡಿದರೆ ಮೊಸರು ತನ್ನ ಗುಣ ಲಕ್ಷಣಗಳನ್ನು ಕಳೆದುಕೊಳ್ಳುತ್ತದೆ ಅಂದರೆ ಮೊಸರಿನಲ್ಲಿ ಕಂಡುಬರುವ ಎಲ್ಲಾ ಪೋಷಕಾಂಶಗಳು ಕೂಡ ನಾಶವಾಗುತ್ತವೆ.
ಆಯುರ್ವೇದ ವೈದ್ಯರು ವೈದ್ಯರು ಹೇಳುವ ಪ್ರಕಾರ ಮೊಸರನ್ನು ಸೇವನೆ ಮಾಡ ಬೇಕು ಎಂದುಕೊಂಡರೆ ಆಗಾಗ ಸೇವನೆ ಮಾಡಿ, ಆದರೆ ನಿರಂತರವಾಗಿ ಬೇಡ. ಮಧ್ಯಾಹ್ನದ ಸಮಯದಲ್ಲಿ ಮಿತಿಯಲ್ಲಿ ಸೇವನೆ ಮಾಡಬಹುದು.