ಹುಬ್ಬಳ್ಳಿ: ಲೋಕೋ ಪೈಲಟ್‌ಗಳು, ಸಹ ಲೋಕೋ ಪೈಲಟ್‌ಗಳು ಹಾಗೂ ರೈಲ್ವೆ ವ್ಯವಸ್ಥಾಪಕರಿಗೆ ಅವರ ವಿಶ್ರಾಂತಿ ಅವಧಿಯಲ್ಲಿ ವಾಸ್ತವ್ಯಕ್ಕೆ ರನ್ನಿಂಗ್ ರೂಮ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ನೈರುತ್ಯ ರೈಲ್ವೆ ಹೆಚ್ಚುವರಿ ರೈಲ್ವೆ ವ್ಯವಸ್ಥಾಪಕ ಟಿ.ವಿ. ವಿಷ್ಣುಭೂಷಣ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ನೈರುತ್ಯ ರೈಲ್ವೇಯ ಹುಬ್ಬಳ್ಳಿ ವಿಭಾಗದಲ್ಲಿ 9, ಬೆಂಗಳೂರು ವಿಭಾಗದಲ್ಲಿ 4, ಮೈಸೂರು ವಿಭಾಗದಲ್ಲಿ 9 ಸೇರಿದಂತೆ ಒಟ್ಟು 22 ರನ್ನಿಂಗ್ ರೂಮ್‌ಗಳು ಕಾರ್ಯ ನಿರ್ವಹಿಸುತ್ತಿವೆ. ರನ್ನಿಂಗ್ ರೂಮ್‌ನಲ್ಲಿ ಧ್ಯಾನ, ಯೋಗಾಸನ ಹಾಗೂ ಒಳಾಂಗಣ ಕ್ರೀಡೆಗಳಿಗೂ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ, ಗ್ರಂಥಾಲಯ ನಿರ್ಮಿಸಲಾಗಿದೆ. ಸುರಕ್ಷತೆಗಾಗಿ ಎಲ್ಲೆಡೆ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಒಂದು ಕೊಠಡಿಯಲ್ಲಿ ಎರಡು ಬೆಡ್, ಶೌಚಾಲಯ, ಕುಡಿಯುವ ನೀರು, ಸ್ವಚ್ಛ ಹೊದಿಕೆ, ಸೊಳ್ಳೆ ಪರದೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಹಾಸನದಲ್ಲಿ ಗಾಳಿಮಳೆ ; ತುಂಡಾಗಿ ಬಿದಿದ್ದ ವಿದ್ಯುತ್ ತಂತಿ ತುಳಿದು ಕೆಎಸ್ಆರ್‌ಟಿಸಿ ನೌಕರ ಸಾವು
ಲೋಕೋ ಪೈಲಟ್‌ಗಳಿಗೆ ಕೇವಲ ₹5ಗೆ ಊಟ, ಉಪಾಹಾರ ಒದಗಿಸಲಾಗುತ್ತಿದೆ. ಒಂದು ಬಾರಿ ಊಟಕ್ಕೆ ₹65 ವೆಚ್ಚವಾಗಲಿದ್ದು, ಅದರಲ್ಲಿ ₹60 ಅನ್ನು ರೈಲ್ವೆ ಇಲಾಖೆ ಭರಿಸಲಿದೆ. ಬೇರೆ ಕಡೆಯಿಂದ ಗೂಡ್ಸ್, ಪ್ಯಾಸೆಂಜರ್ ರೈಲುಗಳ ಲೋಕೋ ಪೈಲಟ್, ಸಹ ಲೋಕೋ ಪೈಲಟ್‌ಗಳು ಹಾಗೂ ವ್ಯವಸ್ಥಾಪಕರು ಮಾತ್ರ ರನ್ನಿಂಗ್ ರೂಮ್ ಬಳಸಬಹುದಾಗಿದೆ. ಒಬ್ಬ ಲೋಕೊ ಪೈಲಟ್ ಗರಿಷ್ಠ ಎಂಟು ಗಂಟೆ ಇಲ್ಲಿ ವಿಶ್ರಾಂತಿ ಪಡೆಯಬಹುದು. ಪ್ರತಿ ದಿನ 50ಕ್ಕೂ ಹೆಚ್ಚು ಸಿಬ್ಬಂದಿ ಈ ಸೌಲಭ್ಯ ಪಡೆಯುತ್ತಿದ್ದಾರೆ. ರನ್ನಿಂಗ್ ರೂಮ್‌ಗಳಲ್ಲಿ ಉತ್ತಮ ಸೌಲಭ್ಯ ಕಲ್ಪಿಸಲಾಗಿದೆ. ಗುಣಮಟ್ಟದ ಊಟ, ಉಪಾಹಾರ ಒದಗಿಸಲಾಗುತ್ತಿದೆ’ ಎಂದು ಲೋಕೊ ಪೈಲಟ್ ಶ್ಯಾಮಕುಮಾರ ಮೆಚ್ಚುಗೆ ವ್ಯಕ್ತಪಡಿಸಿದರು.