ಪ್ರೇಮಲೋಕ ನಮ್ಮ ಮನೆ ಈಗ..ಇಲ್ಲಿ ನಾನು ನನ್ನ ಗಂಡ ಮಗನೇ ಪ್ರಪಂಚ ಅಂತಾ ದರ್ಶನ್ ಹಾಗೂ ವಿಜಯಲಕ್ಷ್ಮಿ ಜೋಡಿ ಖುಷಿ ಖುಷಿಯಾಗಿ ಜೀವನ ನಡೆಸುತ್ತಿದ್ದಾರೆ. ಪತಿ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ ನೆರಳಿನಂತೆ ಹಿಂಬಲಿಸುತ್ತಿದ್ದಾರೆ. ಟ್ರಿಪ್-ಟೂರ್ ಹೊರತಾಗಿ ದಚ್ಚು ಶೂಟಿಂಗ್ ಹೋದ್ರೆ ಅಲ್ಲಿಯೂ ವಿಜಯಲಕ್ಷ್ಮಿ ಹಾಜರಾತಿ ಇದ್ದೇ ಇರುತ್ತೇ. ಅಷ್ಟು ಚೆನ್ನಾಗಿ ಈ ಜೋಡಿ ಹೊಂದಿಕೊಂಡು ಹೋಗುತ್ತಿದ್ದಾರೆ.
ಇತ್ತೀಚೆಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ದರ್ಶನ್ ಹಾಗೂ ವಿಜಯಲಕ್ಷ್ಮಿ ಒಟ್ಟಿಗೆ ಕಾಣಿಸಿಕೊಡಿದ್ದಾರೆ. ಯಜಮಾನ ಸಿನಿಮಾ ನಿರ್ಮಾಪಕಿ ಶೈಲಜಾ ನಾಗ್ ಬಿ ಸುರೇಶ್ ದಂಪತಿ ಪುತ್ರಿ ಚಂದನಾ ನಾಗ್ ಭರತನಾಟ್ಯ ಕಾರ್ಯ್ರಕಮದಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದೆ. ಅಣ್ಣ ಅತ್ತಿಗೆಯನ್ನು ಒಟ್ಟಿಗೆ ನೋಡಿ ಅಭಿಮಾನಿಗಳು ಖುಷಿಯಾಗಿದ್ದು, ಈ ಜೋಡಿ ಮೇಲೆ ಯಾರ ಕಣ್ಣು ಬೀಳದೆ ಇರಲಿದೆ ಎಂದಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದ ದರ್ಶನ್ ನ್ನು ಹೊರ ತರಲು ವಿಜಯಲಕ್ಷ್ಮಿ ಶತಗತಾಯ ಪ್ರಯತ್ನ ಮಾಡಿದ್ದರು. ಕೊಲ್ಲೂರಿಂದ ಹಿಡಿದು ಅಸ್ಸಾಂನ ಕಾಮಾಕ್ಯ ದೇವಸ್ಥಾನದವರೆಗೆ ಸುತ್ತಾಡಿ ಹರಕೆ ಹೊತ್ತು ಪತಿಯನು ಜೈಲಿನಿಂದ ಹೊರತಂದಿದ್ದರು. ವಿಜಯಲಕ್ಮೀ ಅವರ ಈ ಹೋರಾಟ ನೋಡಿ ಅಭಿಮಾನಿಗಳು ನಮ್ ಅತ್ತಿಗೆ ದೇವತೆ ಎಂದಿದ್ದರು.