ಬಳ್ಳಾರಿ : ನಗರದ ಸರ್ಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆಂದು ಬರುವ ರೋಗಿಗಳಿಗೆ ಹಾಗೂ ಅವರ ಸಂಬಂಧಿಕರಿಗೆ ಉಚಿತವಾಗಿ ಅನ್ನದಾನ ಮಾಡುವ ಸೇವೆಯನ್ನು ಸಂಸ್ಥೆಯೊಂದು ನಡೆಸಿಕೊಂಡು ಬರುತ್ತಿದೆ. ಆರೋಗ್ಯ ಸಮಸ್ಯೆಗಳಿಂದ ನೊಂದಿರುವ ಸಂದರ್ಭದಲ್ಲಿ ಹಣಕಾಸು ವೆಚ್ಚದ ಕಾರಣಕ್ಕಾಗಿ ಊಟಕ್ಕಾಗಿ ಪರದಾಡುವ ಬಡವರಿಗೆ ಈ ಉಚಿತ ಅನ್ನದಾನ ಸೇವೆ ವರದಾನವಾಗಿದೆ. ಈ ರೀತಿಯ ಶ್ಲಾಘನೀಯ ಕಾರ್ಯವನ್ನು ಬಿಮ್ಸ್ನ ಟ್ರಾಮಾ ಕೇರ್ ಸೆಂಟರ್ನಲ್ಲಿ ಎನ್.ಟಿ.ಆರ್ ಅನ್ನಪ್ರಸಾದ ಸೇವಾ ಟ್ರಸ್ಟ್ ಮಾಡಿಕೊಂಡು ಬರುತ್ತಿದೆ.
ಸರ್ಕಾರಿ ಆಸ್ಪತ್ರೆ ಅಂದ್ರೆನೆ ಅಲ್ಲಿಗೆ ಬರುವವರು ಕಡು ಬಡವರು, ಸಂಕಷ್ಟದಲ್ಲಿರುವವರು ಅನ್ನೋದು ಖಚಿತ. ಇಲ್ಲಿ ಬರುವ ರೋಗಿಗಳಿಗೆ ಉಚಿತ ಸೇವೆ ಸಿಗಬಹುದು. ಆದರೆ ರೋಗಿಗಳಿಗೆ ಹಾಗೂ ರೋಗಿಗಳನ್ನು ಹಾರೈಕೆ ಮಾಡಲು ಬರುವ ಜನರಿಗೆ ಉಚಿತ ಊಟ ಸಿಗೋದಿಲ್ಲ. ಹೀಗೆ ಸರ್ಕಾರಿ ಆಸ್ಪತ್ರೆಗಳಿಗೆ ಹೆರಿಗೆ ಸೇರಿದಂತೆ ವಿವಿದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಎನ್.ಟಿ.ಆರ್ ಅನ್ನಪ್ರಸಾದ ಸೇವಾ ಟ್ರಸ್ಟ್ ವತಿಯಿಂದ ಉಚಿತ ಅನ್ನದಾನ ಸೇವೆ ನಡೆಯುತ್ತಿದೆ.
ಎನ್ ಟಿ.ಆರ್ ಅನ್ನಪ್ರಸಾದ ಸೇವಾ ಟ್ರಸ್ಟ್ನ ಅಧ್ಯಕ್ಷ ಜಿ.ಎಲ್ ಮೋಹನ್, ಉಪಾಧ್ಯಕ್ಷರಾದ ಶ್ರೀನಿವಾಸ ಎಂ, ಎನ್ ದುರ್ಗಾ ಪನೀಂದ್ರ ಹಾಗೂ ಟ್ರಸ್ಟ್ನ ಪದಾಧಿಕಾರಿಗಳಾದ ಸಿ ಪ್ರಕಾಶ್ ರಾವ್, ಎಂ ವಿಜಯ್ ಕುಮಾರ್ ಅವರ ನೇತೃತ್ವದಲ್ಲಿ ಬಿಮ್ಸ್ ಟ್ರಾಮಾ ಕೇರ್ ಸೆಂಟರ್ನಲ್ಲಿ ಉಚಿತ ಅನ್ನದಾನ ಸೇವೆ ಅಚ್ಚುಕಟ್ಟಾಗಿ ನಡೆದುಕೊಂಡು ಬರುತ್ತಿದೆ. ಕಳೆದ 3 ತಿಂಗಳಿನಿAದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಎನ್.ಟಿ.ಆರ್ ಅನ್ನಪ್ರಸಾದ ಸೇವಾ ಟ್ರಸ್ಟ್ ನವರು ಮಾಡುತ್ತಿರುವ ಸೇವೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ