ಹುಬ್ಬಳ್ಳಿ:- CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಾಹ್ಮಣ ಸಮಾಜದ ಮುಖಂಡ ಜಯತೀರ್ಥ ಕಟ್ಟಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಬಾಲಕಿ ಮೇಲಿನ ರೇಪ್& ಮರ್ಡರ್ ಕೇಸ್: 2 ವರ್ಷದ ಬಳಿಕ ಆರೋಪಿಗೆ ಗಲ್ಲು ಶಿಕ್ಷೆ ಪ್ರಕಟ!
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಜನಿವಾರ ಧರಿಸುವ ವಿವಿಧ ಸಮಾಜದ ನಾಯಕರ ನೇತ ದೊಡ್ಡ ಪ್ರಮಾಣದ ಪ್ರತಿಭಟನೆ ನಡೆಸಲಾಗುವುದು. ಹುಬ್ಬಳ್ಳಿಯಲ್ಲಿ ಇದೇ 25 ರಂದು ಚೆನ್ನಮ್ಮ ಸರ್ಕಲ್ ಬಳಿ ಪ್ರತಿಭಟನೆ ಮಾಡಲಾಗುತ್ತದೆ. ಹುಬ್ಬಳ್ಳಿ ಸೇರಿದಂತೆ ಧಾರವಾಡ ಉತ್ತರ ಕರ್ನಾಟಕ ಭಾಗದ ಪ್ರಮುಖರು ಭಾಗಿ ಆಗುವರು ಬ್ರಾಹ್ಮಣ ಸಮಾಜ ಸೇರಿದಂತೆ 20 ವಿವಿಧ ಜನಿವಾರ ಧರಿಸುವ ಸಮಾಜದಿಂದ ಪ್ರತಿಭಟನೆಗೆ ಕರೆ ನೀಡಲಾಗಿದೆ.
ಧಾರವಾಡ, ಶಿವಮೊಗ್ಗ ಹಾಗೂ ಬೀದರ್ ಜಿಲ್ಲೆಗಳಲ್ಲಿ CET ಪರೀಕ್ಷೆಯಲ್ಲಿ ಜನಿವಾರಧಾರಿ ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ. ಹೀಗಾಗಿ ವಿವಿಧ ಸಮಾಜದ ಜನಿವಾರಾ ಧಾರಿಗಳಿಂದ ಉಗ್ರ ಪ್ರತಿಭಟನೆಗೆ ನಿರ್ಧಾರ ಮಾಡಲಾಗಿದೆ. ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿದ ವಿಚಾರ ಕೋಟ್ಯಂತರ ಬ್ರಾಹ್ಮಣರ ಭಾವನೆಗೆ ಧಕ್ಕೆ ತಂದಿದೆ. ಇದು ಕೇವಲ ಬ್ರಾಹ್ಮಣರ ಸಮಾಜ ಅಷ್ಟೇ ಅಲ್ಲಾ. ಜನಿವಾರಧಾರೆ ಧರಿಸುವ ಅನೇಕ ಸಮಾಜದ ಪ್ರಮುಖರಿಂದ ಖಂಡನೆ ವ್ಯಕ್ತವಾಗಿದೆ. ಹೀಗಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಜಯತೀರ್ಥ ಕಟ್ಟಿ ಹೇಳಿದ್ದಾರೆ.