ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಮುಂದಿನ ಪಂದ್ಯವನ್ನು RR ವಿರುದ್ಧ ತವರು ಮೈದಾನ ಚಿನ್ನಸ್ವಾಮಿಯಲ್ಲಿ ಆಡಲಿದ್ದು, ಆದರೆ ಈ ಪಂದ್ಯ ರದ್ದಾಗುವ ಸಾಧ್ಯತೆ ಇದೆ.
ಭಾರತದ ಪ್ರಜಾಪ್ರಭುತ್ವ ಬಗ್ಗೆ ವಿದೇಶದಲ್ಲಿ ಮಾತಾಡಿದ್ದು ಸರಿಯಲ್ಲ: ‘ರಾಗಾ’ ವಿರುದ್ಧ ಮಹೇಶ್ ಟೆಂಗಿನಕಾಯಿ ಕಿಡಿ!
ಈಗಾಗಲೇ ಏಪ್ರಿಲ್ 18ರಂದು ಬೆಂಗಳೂರಿನ ಭಾರೀ ಮಳೆ ಸುರಿದ ಹಿನ್ನೆಲೆ ತವರು ಮೈದಾನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್ಸಿಬಿಗೆ ತುಂಬಾ ಅಡೆತಡೆ ಆಯಿತು. ಆದರೆ, ನಂತರ ಪಿಚ್ ತೆವಾಂಶವೆಲ್ಲಾ ಹೋದ ಕಾರಣ ಪಂಜಾಬ್ ಬ್ಯಾಟಿಂಗ್ ತುಂಬಾ ಅನುಕೂಲ ಆಗಿದ್ದು, ಆರ್ಸಿಬಿ ವಿರುದ್ಧ ಸುಲಭವಾಗಿ ಗೆಲುವು ಸಾಧಿಸಲು ಅನುಕೂಲವಾಯಿತು.
ಸಾಮಾನ್ಯವಾಗಿ ಈ ಪಿಚ್ನಲ್ಲಿ ಚೇಸ್ ಮಾಡಿರುವ ತಂಡ ಗೆಲುವು ಸಾಧಿಸಿರುವ ಉದಾಹರಣೆಗಳಿವೆ. ಅದರಲ್ಲೂ ಸಾಧಾರಣ ಮಳೆ ಬಂದು ನಿಂತರೆ, ಹೆಚ್ಚು ಅನುಕೂಲ ಆದಂತಾಗುತ್ತದೆ. ಇದೀಗ ಹಾಮಾನ ಇಲಾಖೆ ಪ್ರಕಾರ, ಮುಂದಿನ ಐದು ದಿನಗಳ ಕಾಲ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆಯಿದೆ.
ಏಪ್ರಿಲ್ 24ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್ಸಿಬಿ ಸೆಣಸಲಿದೆ. ಒಂದು ವೇಳೆ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಸಾಧಾರಣ ಮಳೆಯಾಗಿ ನಿಂತರೆ ಮೊದಲು ಚೇಸ್ ಮಾಡುವ ತಂಡಕ್ಕೆ ಹೆಚ್ಚು ಅನುಕೂಲ. ಆದ್ದರಿಂದ ಅಂದಾದರೂ ಆರ್ಸಿಬಿ ಹೋಂ ಗ್ರೌಂಡ್ನಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರೆ ಉತ್ತಮ. ಒಂದು ವೇಳೆ ಭಾರೀ ಮಳೆ ಮುಂದುವರೆದರೆ, ಪಂದ್ಯ ರದ್ದಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ತವರು ಅಂಗಳವಾದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ತಂಡವು ಸತತ ಮೂರು ಸೋಲನುಭವಿಸಿದೆ. ಮೊದಲು ಗುಜರಾತ್ ಟೈಟಾನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ವಿರುದ್ಧ ಸೋಲನುಭವಿಸಿತ್ತು. ಅದರಲ್ಲೂ ಪಂಜಾಬ್ ವಿರುದ್ಧ ಪಂದ್ಯದ ವೇಳೆ ಮಳೆ ಕಾರಣ ಆರ್ಸಿಬಿ ತಂಡದ ಆಟಗಾರರು ತೇವಾಂಶದ ಪಿಚ್ನಲ್ಲಿ ರನ್ ಬಾರಿಸಲು ಹೆಣಗಾಡಿದರು. ಕೊನೆಗೂ ಆರ್ಸಿಬಿ ಸೋಲು ಕಂಡಿತು. ಇನ್ನು ಈ ಆವೃತ್ತಿಯಲ್ಲಿ ಚಿನ್ನಸ್ವಾಮಿಯಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿಯೂ ಆರ್ಸಿಬಿ ಟಾಸ್ ಸಹ ಸೋತಿದೆ.