ಬೆಂಗಳೂರು:- ಕೇರಳ ಮೂಲದ ಮತ್ತೊಂದು ‘ಕೋ ಆಪರೇಟಿವ್ ಸೊಸೈಟಿ’ ಮಹಾಮೋಸ ಬೆಳಕಿಗೆ ಬಂದಿದೆ. ಅತಿ ಹೆಚ್ಚಿನ ಬಡ್ಡಿ ನೀಡುವುದಾಗಿ ಆಮಿಷ ತೋರಿಸಿ ಬೆಂಗಳೂರು ಹೊರವಲಯದಲ್ಲಿ ಸಾವಿರಾರು ಜನರಿಗೆ ಕೋಟಿ ಕೋಟಿ ರೂಪಾಯಿ ಪಂಗನಾಮ ಹಾಕಲಾಗಿದೆ.
ಹಿರಿಯ ವಕೀಲ ಸದಾ ಶಿವರೆಡ್ಡಿ ಮೇಲಿನ ಹಲ್ಲೆ ಖಂಡಿಸಿ ತೋಳಿಗೆ ಕೆಂಪು ಪಟ್ಟಿ ಧರಿಸಿ ಪ್ರೊಟೆಸ್ಟ್!
ಹೌದು, ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು ಇದ್ದೇ ಇರುತ್ತಾರೆ. ಹೀಗಾಗಿ ಜನತೆ ಎಚ್ಚೆತ್ತುಕೊಳ್ಳಬೇಕು. ಎಸ್, 2019ರಲ್ಲಿ ಸರ್ಜಾಪುರದ ದೊಮ್ಮಸಂದ್ರದಲ್ಲಿ ಶಾಖೆ ಆರಂಭಿಸಿದ ‘ದಿ ಮಲಬಾರ್ ಸ್ಟೇಟ್ ಆಗ್ರೋ ಕೋ ಆಪರೇಟಿವ್ ಸೊಸೈಟಿ’ ಆಕರ್ಷಕ ಬಡ್ಡಿ ದರ ನೀಡುವುದಾಗಿ ಜನ ಸಾಮಾನ್ಯರನ್ನು ತನ್ನತ್ತ ಸೆಳೆದುಕೊಂಡಿದೆ. ಆದರಲ್ಲೂ ಹಿರಿಯ ನಾಗರೀಕರನ್ನು ಟಾರ್ಗೆಟ್ ಮಾಡಿ ಲಕ್ಷ ಲಕ್ಷ ಸ್ಥಿರ ಠೇವಣಿ ಮತ್ತು ಡೈಲಿ, ವೀಕ್ಲಿ ಮತ್ತು ಮಂತ್ಲಿ ಪಿಗ್ಮಿ ಕೂಡ ಸಂಗ್ರಹ ಮಾಡಿ ಆರಂಭದಲ್ಲಿಯೇ ಭರ್ಜರಿ ಸಂಗ್ರಹ ಮಾಡಿದೆ. ಆರಂಭದಲ್ಲಿ ಗ್ರಾಹಕರಿಗೆ ಹಣ ಕೂಡ ಹಿಂದಿರುಗಿಸಿದೆ. ಅದೇ ನಂಬಿಕೆಯಲ್ಲಿ ಗ್ರಾಹಕರು ಬೇರೆ ಬೇರೆ ಬ್ಯಾಂಕುಗಳಲ್ಲಿದ್ದ ಹಣವನ್ನು ಸೊಸೈಟಿಗೆ ಜಮಾ ಮಾಡಿದ್ದಾರೆ. ಆದರೆ 2024ರಲ್ಲಿ ದಿಢೀರ್ ಮಲಬಾರ್ ಸೊಸೈಟಿ ಬಾಗಿಲು ಬಂದ್ ಮಾಡಿದ್ದು, ಸಿಬ್ಬಂದಿ ಪರಾರಿಯಾಗಿದ್ದಾರೆ.
ಕ್ಯಾನ್ಸರ್ ರೋಗಿಯಾದ ರೈತ ಚಂದ್ರಾರೆಡ್ಡಿ ಎಂಬವರು ಕೊನೆ ದಿನಗಳಲ್ಲಿ ತನ್ನ ಜೀವನಕ್ಕಾಗಿ ಕೂಡಿಟ್ಟಿದ್ದ ಹಣವನ್ನು ಕೂಡ ಹೆಚ್ಚಿನ ಬಡ್ಡಿ ಆಸೆಗೆ ಬಿದ್ದು ದಿ ಮಲಬಾರ್ ಸೊಸೈಟಿಯಲ್ಲಿ ಎಫ್ಡಿ ಮಾಡಿದ್ದು, ಇದೀಗ ಚಿಕಿತ್ಸೆಗೆ ಹಣವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿ ಮಲಬಾರ್ ಸೊಸೈಟಿ ಅಧಿಕಾರಿ ಮತ್ತು ಸಿಬ್ಬಂದಿ ಬಣ್ಣಬಣ್ಣದ ಮಾತುಗಳಿಗೆ ಬೆರಗಾಗಿ ಹತ್ತು ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ತನಗೆ ನ್ಯಾಯ ದೊರಕಿಸಿ ಕೊಡುವಂತೆ ಸರ್ಜಾಪುರ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಐದಾರು ತಿಂಗಳ ಅಲೆದಾಟದ ಬಳಿಕ ಕೇವಲ ಎನ್ಸಿಆರ್ ದಾಖಲಿಸಿ ಕೈ ತೊಳೆದುಕೊಂಡಿದ್ದಾರೆ. ಹೇಗಾದರೂ ಮಾಡಿ ಹಣ ಪಡೆದುಕೊಳ್ಳಬೇಕು ಎಂದು ದೂರದ ಕೇರಳಕ್ಕೆ ಹೋಗಿ ಬಂದರು ಪ್ರಯೋಜನ ಆಗಿಲ್ಲ. ಸೊಸೈಟಿ ಅಧ್ಯಕ್ಷ ರಾಹುಲ್ ಚಕ್ರಪಾಣಿ, ಕಾರ್ಯನಿರ್ವಾಹಕ ಅಧಿಕ ಅಬ್ದುಲ್ ಅಜೀಜ್ ಸೇರಿದಂತೆ ಸಿಬ್ಬಂದಿಯ ಮೇಲೆ ಎಫ್ಐಆರ್ ದಾಖಲಿಸಿ ಆರೋಪಿಗಳನ್ನು ಬಂಧಿಸಿದರೆ ನೊಂದ ಗ್ರಾಹಕರಿಗೆ ನ್ಯಾಯ ಸಿಗಲಿದೆ ಎಂದು ಹಣ ಕಳೆದುಕೊಂಡ ಗ್ರಾಹಕ ಚಂದ್ರಾರೆಡ್ಡಿ ಸರ್ಜಾಪುರ ಪೊಲೀಸರನ್ನು ಒತ್ತಾಯಿಸಿದ್ದಾರೆ.