ಲೈಂಗಿಕತೆ ಅನ್ನೋದು ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲೊಂದು. ಯಾವುದೇ ವ್ಯಕ್ತಿ ಪ್ರೌಢಾವಸ್ಥೆಗೆ ಕಾಲಿಟ್ಟಾಗ, ಅವರಿಗೆ ಸೆಕ್ಸ್ನಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ವಯಸ್ಸಾದಂತೆ ಜವಾಬ್ದಾರಿಗಳೂ ಹೆಚ್ಚಾಗಲಿದ್ದು, ಲೈಂಗಿಕತೆಯಿಂದ ವಂಚಿತರೂ ಆಗಬಹುದು. ದೀರ್ಘ ಕಾಲದವರೆಗೆ ಸೆಕ್ಸ್ ಮಾಡದಿದ್ದರೆ, ಅವರು ಅಡ್ಡ ಪರಿಣಾಮಗಳನ್ನು ಎದುರಿಸುತ್ತಾರೆ.
ಜ್ವರ, ತಲೆನೋವು ಬಂದಾಗಲ್ಲೆಲ್ಲಾ ಪ್ಯಾರಸಿಟಮಾಲ್ ತಿನ್ಬೋದು ಬಿಟ್ಬಿಡಿ..! ಇದು ಹೃದಯಕ್ಕೆ ಹಾನಿ
ಅನೇಕ ಭಾರತೀಯರು ಲೈಂಗಿಕತೆಯ ಬಗ್ಗೆ ಮುಕ್ತವಾಗಿ ಮಾತನಾಡಲು ಮುಜುಗರ ಪಡುತ್ತಾರೆ. ಆದರೆ ಈ ಬಗ್ಗೆ ಮಾತನಾಡುವುದು ನಮ್ಮ ಲೈಂಗಿಕ ಜ್ಞಾನವನ್ನು ಬೆಳೆಸುವುದರ ಜೊತೆಗೆ ನಾನಾ ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಜನರು ಲೈಂಗಿಕ ಶಿಕ್ಷಣದ ಬಗ್ಗೆ ಶಾಲಾ ದಿನಗಳಲ್ಲಿಯೇ ಸ್ವಲ್ಪಮಟ್ಟಿಗೆ ಕಲಿಸಲು ಶಿಫಾರಸು ಮಾಡುತ್ತಾರೆ.
ಪ್ರೀತಿ, ಕಾಮ, ಬಯಕೆ, ಸ್ಪರ್ಶ ಇತ್ಯಾದಿ ಅನೇಕ ಭಾವನೆಗಳನ್ನು ವ್ಯಕ್ತಪಡಿಸಲು ಲೈಂಗಿಕತೆಯನ್ನು ಬಳಸಲಾಗುತ್ತದೆ. ಲೈಂಗಿಕತೆಯು ಪ್ರೇಮಿಗಳು ಅಥವಾ ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಸೆಕ್ಸ್ನ ಪ್ರಯೋಜನಗಳು: ಲೈಂಗಿಕ ಕ್ರಿಯೆಯು ನಮ್ಮ ದೇಹದಲ್ಲಿ ಹಲವಾರು ಬದಲಾವಣೆಗಳನ್ನು ತರುವುದಲ್ಲದೇ ಪ್ರಯೋಜನಗಳನ್ನು ಸಹ ನೀಡುತ್ತದೆ. ರಕ್ತದೊತ್ತಡ ಕಡಿಮೆ ಮತ್ತು ಒತ್ತಡ ನಿವಾರಣೆ ಮುಂತಾದ ರೀತಿಯಲ್ಲಿ ಸಹಾಯಕವಾಗಿದೆ. ಲೈಂಗಿಕತೆ ನಮ್ಮಲ್ಲಿ ಆತ್ಮವಿಶ್ವಾಸ, ಉತ್ತಮ ನಿದ್ರೆ, ರಕ್ತ ಪರಿಚಲನೆಗೆ ಸಹಕಾರಿ ಆಗಿದ್ದು, ನಮ್ಮ ವೈಯಕ್ತಿಕ ಜೀವನದಲ್ಲೂ ಒಳ್ಳೆಯ ಬದಲಾವಣೆಗಳನ್ನು ತರುತ್ತದೆ.
ತಿಂಗಳಿಗೆ ಎಷ್ಟು ಬಾರಿ ಸೆಕ್ಸ್ ಮಾಡಬೇಕು?: ಜೀ ನ್ಯೂಸ್ ವರದಿ ಪ್ರಕಾರ, ಲವ್ ರಿಲೇಷನ್ ಶಿಪ್ ಇರುವವರಿಗೆ ಹೋಲಿಸಿದರೆ, ವಿವಾಹಿತರು ಹೆಚ್ಚು ದಿನ ಲೈಂಗಿಕತೆಯಲ್ಲಿ ತೊಡಗುತ್ತಾರೆ. ಒಂದು ತಿಂಗಳಲ್ಲಿ ನೀವು ಎಷ್ಟು ಬಾರಿ ಲೈಂಗಿಕತೆಯನ್ನು ಹೊಂದಬಹುದು ಎಂಬುದಕ್ಕೆ ಯಾವುದೇ ಮಿತಿಯಿಲ್ಲ. ಪರಿಸ್ಥಿತಿಗೆ ಅನುಗುಣವಾಗಿ ನಾವು ಯಾವಾಗ ಬೇಕಾದರೂ ಸಂಭೋಗಿಸಬಹುದು.
ಆದರೆ ಕೆಲವು ವೈದ್ಯರು ವಾರಕ್ಕೊಮ್ಮೆ ದೈಹಿಕ ಸಂಪರ್ಕ ಹೊಮದುವಂತೆ ಶಿಫಾರಸ್ಸು ಮಾಡುತ್ತಾರೆ. ಇದು ಪಾಲುದಾರರ ನಡುವೆ ಅನ್ಯೋನ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ಉತ್ತಮ ಸಂಬಂಧಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಹೇಳಲಾಗುತ್ತದೆ.
ಅತಿಯಾದ ಲೈಂಗಿಕ ಕ್ರಿಯೆಯ ಸಮಸ್ಯೆಗಳು: ಲೈಂಗಿಕತೆಯು ಹೇಗೆ ಪ್ರಯೋಜನಗಳನ್ನು ಹೊಂದಿದೆಯೋ ಅದೇ ರೀರಿ ಅಡ್ಡ ಪರಿಣಾಮಗಳನ್ನು ಕೂಡ ಒಳಗೊಂಡಿದೆ. ಒತ್ತಡವನ್ನು ನಿವಾರಿಸುವ ಅದೇ ಲೈಂಗಿಕತೆಯು ಕೆಲವೊಮ್ಮೆ ಒತ್ತಡವನ್ನುಂಟು ಮಾಡಬಹುದು. ಇದು ಕೆಲವೊಮ್ಮೆ ಬೆನ್ನುನೋವಿಗೆ ಕಾರಣವಾಗುತ್ತದೆ.
ಪುರುಷರು ಆಗಾಗ್ಗೆ ಸ್ಖಲನದಂತಹ ಸಮಸ್ಯೆಗಳನ್ನು ಅನುಭವಿಸಬಹುದು ಮತ್ತು ಮಹಿಳೆಯರು ಪರಾಕಾಷ್ಠೆಯನ್ನು ತಲುಪಲು ಸಾಧ್ಯವಾಗುವುದಿಲ್ಲ. ಸಂಭೋಗದ ಪರಿಣಾಮವಾಗಿ ನೀವು ಗರ್ಭಿಣಿಯಾಗಬಹುದು. ಮಕ್ಕಳನ್ನು ಹೊಂದಲು ಇಷ್ಟಪಡದವರಿಗೆ ಇದು ದೊಡ್ಡ ಸಮಸ್ಯೆಯಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.