ಗಾಯಕಿ ಪೃಥ್ವಿ ಭಟ್ ಮದುವೆ ವಿಷಯವಾಗಿ ದೊಡ್ಡ ಸುದ್ದಿಯಾಗಿದೆ. ಮನೆ ಬಿಟ್ಟು ಹೋಗಿ ಮಗಳು ಮದುವೆಯಾಗಿದ್ದಾಳೆ. ಅವಳನ್ನು ವಶೀಕರಣ ಮಾಡಲಾಗಿದೆ ಎಂದು ಪೃಥ್ವಿ ಭಟ್ ತಂದೆ ಆರೋಪ ಮಾಡಿದ್ದರು. ಇದೀಗ ಪೃಥ್ವಿ ಭಟ್ ಅವರೇ ಮಾನಾಡಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್ ಆಗುತ್ತಿದೆ.
ಪೃಥ್ವಿ ಭಟ್ ಮದುವೆಗೆ ಈಗ ರೋಚಕ ಟ್ವಿಸ್ಟ್ ಸಿಕ್ಕಿದೆ. ತಮ್ಮ ಮದುವೆ ಬಗ್ಗೆ ಮಾತನಾಡಿರುವ ಅವರು, ತಪ್ಪಾಯ್ತು ಅಪ್ಪ. ನೀವು ಕಳೆದ ಎರಡು ದಿನಗಳಿಂದ ಹವ್ಯಕ ಗ್ರೂಪ್ ಸೇರಿದಂತೆ ಮತ್ತೆ ಬೇರೆ ಬೇರೆ ಗ್ರೂಪ್‌ಗಳಲ್ಲಿ ನರಹರಿ ದೀಕ್ಷಿತ್ ಸರ್ ಬಗ್ಗೆ ಮತ್ತೆ ನನ್ನ ಬಗ್ಗೆ ಆಡಿಯೋ ಮೆಸೇಜ್ ಕಳುಹಿಸುತ್ತಿದ್ದೀರಿ. ಈ ವಿಷಯದಲ್ಲಿ ನರಹರಿ ದೀಕ್ಷಿತ್ ಸರ್ ಅವರ ತಪ್ಪು ಏನಿಲ್ಲ. ಮಾರ್ಚ್ 7ಕ್ಕೆ ದೀಕ್ಷಿತ್ ಸರ್ ಮನೆಗೆ ಬಂದಿದ್ದು, ಈ ವಿಷಯ ಬಗ್ಗೆ ಮಾತನಾಡಿದರು. ಆಗ ನಾನು ಅವರ ಎದುರು ಹಾಗೂ ನಿಮ್ಮ ಎದುರು ಅಭಿ ಇಷ್ಟ ಅಂತನೇ ಹೇಳಿದ್ದು. ಅವತ್ತು ನಿಮ್ಮ ಮೇಲಿನ ಭಯಕ್ಕೆ ನಾನು ಸುಮ್ಮನಾದೆ, ಆದರೆ ನನ್ನ ಮನಸಿನಲ್ಲಿ ಅಭಿ ಇದ್ದರು. ಅದಾದ ಮೇಲೆ ನೀವು ನನ್ನನ್ನು ಕಟ್ಟುನಿಟ್ಟು ಮಾಡಿದಿರಿ.
ಕಾರ್ಯಕ್ರಮಗಳಿಗೆ ಹೋಗುವುದು ಬೇಡ ಅಂದಿರಿ. ಸಂಗೀತ ಬೇಡ ಅಂತಾ ಹೇಳಿದಿರಿ ಅದಕ್ಕೆ ಭಯಪಟ್ಟು ನಾನೇ ಈ ನಿರ್ಧಾರ ಮಾಡಿರುವುದು. ನಾನು ಮೊದಲು ಹೇಳಿದ ಹಾಗೆ ಈಗಲೂ ಹೇಳುತ್ತಿದ್ದೇನೆ. ನರಹರಿ ದೀಕ್ಷಿತ್ ಸರ್ ಅವರ ತಪ್ಪು ಏನಿಲ್ಲ. ನಮ್ಮ ಮದುವೆಯ ದಿನ ಅವರಿಗೆ ಗೊತ್ತಿರಲಿಲ್ಲ. ಆಮೇಲೆ ನಾನು ಫೋನ್ ಮಾಡಿ ಬರಲು ಹೇಳಿದ್ದು, ಆಮೇಲೆ ಅವರು ನನಗೆ ಅಭಿಗೆ ಆಶೀರ್ವಾದ ಮಾಡಿದರು. ಇದರಲ್ಲಿ ಅವರ ತಪ್ಪಿಲ್ಲ. ನಾನು ಮಾಡಿರುವುದು ಖಂಡಿತಾ ತಪ್ಪು, ಕ್ಷಮಿಸಿ’ ಎಂದು ಪೃಥ್ವಿ ಭಟ್ ಮಾತಾನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗುತ್ತಿದೆ.
ಮಾರ್ಚ್ 27ರಂದು ಜೀ ವಾಹಿನಿಯಲ್ಲೇ ಪ್ರೊಡಕ್ಷನ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಅಭಿಷೇಕ್ ಜೊತೆ ಪೃಥ್ವಿ ಭಟ್ ಮದುವೆಯಾಗಿದ್ದಾರೆ. ಹಲವು ಸಿನಿಮಾಗಳಿಗೆ ಅವರು ಹಿನ್ನೆಲೆ ಗಾಯಕಿಯಾಗಿ ಹಾಡಿದ್ದಾರೆ.