ರಾಯಚೂರು:- ನಗರದಲ್ಲಿ ಕಳ್ಳತನ , ದರೋಡೆ ಹಲವು ಪ್ರಕರಣ ಹೆಚ್ಚಾದ ಹಿನ್ನೆಲೆ, ಇದರ ಕಡಿವಾಣಕ್ಕೆ ಸಿಸಿಟಿವಿ ಅಳವಡಿಕೆ ಮಾಡುವಂತೆ ಸಾರ್ವಜನಿಕರು ಸ್ಥಳೀಯ ಶಾಸಕರಿಗೆ ಮನವಿ ಮಾಡಿದ್ದರು. ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಶಾಸಕರು ಸಿಸಿಟಿವಿ ಅಳವಡಿಸುವ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದಾರೆ.
ಸಲ್ಲು, ಶಾರುಖ್, ಅಲ್ಲು ಅಲ್ಲ..ಈ ಹೀರೋಗಳಿಗಿಂತ ಅಧಿಕ ಸಂಭಾವನೆ ಪಡೆಯೋದು ಯಾರು ಗೊತ್ತಾ?
ಸದಾರ್ ಬಜಾರ್ ಪೊಲೀಸ್ ಠಾಣೆಯಿಂದ ಹೀಗಾಗಿ ರಾಯಚೂರು ನಗರದ ಮುಖ್ಯ ವೃತ್ತಗಳಲ್ಲಿ ಅಶೋಕ ಡಿಪೋ ಸರ್ಕಲ್ ಹಾಗೂ ಉಸ್ಮಾನಿಯ ಮಸೀದಿ ಹತ್ತಿರ ಸೇರಿ 8 ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ರಾಯಚೂರು ಎಸ್ ಪಿ ಪುಟ್ಟಮಾದಯ್ಯ ಅವರು ಸಿಸಿ ಕ್ಯಾಮರಾ ಉದ್ಘಾಟಸಿದರು. ಜಿಲ್ಲೆ ಹಾಗೂ ಹೊರ ರಾಜ್ಯಗಳಲ್ಲಿ ಕಳೆದು ಕೊಂಡ 13 ಮೊಬೈಲ್ಗಳನ್ನ ಹುಡುಕಿ ಇದೇ ವೇಳೆ ಪೊಲೀಸರು, ಮಾಲೀಕರಿಗೆ ಒಪ್ಪಿಸಿದರು. ಸದಾರ್ ಬಜಾರ್ ಸಿಪಿಐ ಉಮೇಶ್ ಕಾಂಬ್ಳೇ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.