ವಿಜಯಪುರ : ವಿಜಯೇಂದ್ರ ನೇತೃತ್ವದ ಜನಾಕ್ರೋಶ ಯಾತ್ರೆ ವಿಚಾರವಾಗಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದು, ಮತ್ತೆ ಬಿಎಸ್ವೈ ಕುಟುಂಬದ ವಿರುದ್ಧ ಕಿಡಿಕಾರಿದ್ದಾರೆ.
ವಿಜಯಪುರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದು ಬಿಎಸ್ವೈ ಕುಟುಂಬದ ವೈಭವಿಕರಣದ ಯಾತ್ರೆ. ವಿಜಯೇಂದ್ರ 60 ವಾಹನಗಳನ್ನ ತೆಗೆದುಕೊಂಡು ಅಡ್ಡಾಡುತ್ತಿದ್ದಾನೆ. ದಾವಣಗೆರೆಯಲ್ಲಿ 60 ವಾಹನಗಳ ಸಮೇತ ಅಡ್ಡಾಡಿದ್ದಾನೆ. ಆದರೆ ಸಾವಿರಕ್ಕಿಂತ ಹೆಚ್ಚು ಜನ ಎಲ್ಲಿಯೂ ಸೇರಿಲ್ಲ. ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ವೇಳೆ ಜನ ಇರಲಿಲ್ಲ. ಐದು ಸಾವಿರ ಕೆಪಾಸಿಟಿ ಗ್ರೌಂಡಲ್ಲಿ ಶೇ. 25 ರಷ್ಟು ಚೇರ್ ಇರಲಿಲ್ಲ. ನನ್ನ ಉಚ್ಚಾಟನೆ ಯಾತ್ರೆಯ ಆಕ್ರೋಶ ಕಡಿಮೆ ಮಾಡಲು ಈ ಯಾತ್ರೆ. ಜನಾಕ್ರೋಶ ಯಾತ್ರೆ ಕಾಂಗ್ರೆಸ್ ವಿರುದ್ಧ ಅಲ್ಲ ಎಂದು ಲೇವಡಿ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಕ್ಲೀನ್ ಪೊಲಿಟಿಷಿಯನ್ ಅಲ್ಲ ; ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ
ಇನ್ನೂ ವಿಜಯೇಂದ್ರಗೆ ತಮಿಳುನಾಡು ಕಾ ಅಧ್ಯಕ್ಷನನ್ನ ತೆಗೆದಂತೆ ತನ್ನನ್ನು ತೆಗೆಯುತ್ತಾರೆ ಎನ್ನುವ ಭಯ ಕಾಡುತ್ತಿದೆ ಎಂದು ಮತ್ತೆ ವಿಜಯೇಂದ್ರ ವಿರುದ್ದ ಮತ್ತೆ ಮುಗಿಬಿದ್ದರು.