ಹುಬ್ಬಳ್ಳಿ:- ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಕನ್ನಡಿಗರು ಬಲಿಯಾದ ಹಿನ್ನಲೆ ಬೆಳಗಿನ ಜಾವವಿಶೇಷ ವಿಮಾನ ಮೂಲಕ ಸಚಿವ ಸಂತೋಷ ಲಾಡ್ ಅವರು ಕಾಶ್ಮೀರಕ್ಕೆ ತೆರಳಿದ್ದಾರೆ
ಸಿಎಂ ಸೂಚನೆ ಹಿನ್ನಲೆ ಸಚಿವ ಸಂತೋಷ ಲಾಡ್ ಅವರು ಹುಬ್ಬಳ್ಳಿ ಯಿಂದ ವಿಶೇಷ ವಿಮಾನ ಮೂಲಕ ಕಾಶ್ಮೀರಕ್ಕೆ ಪಯಣ ಬೆಳೆಸಿದ್ದಾರೆ. ಕಾಂಗ್ರೆಸ್ ಯುವ ಮುಖಂಡ ಮಯೂರ ಮೋರೆ, ಸಚಿವ ಲಾಡ್ ಆಪ್ತ ಸಹಾಯಕಾದ ಅಲಿ ಗೊರವನಕೊಳ್ಳ, ಸಂದೀಪ ಸೇರಿ 4 ಜನರು ಪ್ರಯಾಣ ಬೆಳೆಸಿದ್ದಾರೆ. ಪೆಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕರ ದಾಳಿಗೆ ಸಿಲುಕಿದ ಕನ್ನಡಿಗರ ರಕ್ಷಣೆಗೆ ಲಾಡ್ ತೆರಳಿದರು.
ಕಾಶ್ಮೀರದ ದಾಳಿಗೆ ಸಿಲುಕಿದ ಕನ್ನಡಿಗರು:
ದಕ್ಷಿಣ ಕಾಶ್ಮೀರದ ಪ್ರಮುಖ ಪ್ರವಾಸಿ ತಾಣವಾದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ಏಕಾಏಕಿ ನಡೆಸಿರುವ ದಾಳಿಯಲ್ಲಿ ಇಬ್ಬರು ವಿದೇಶಿಗರು ಸೇರಿದಂತೆ ಸುಮಾರು 26 ಪ್ರವಾಸಿಗರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ದಾಳಿಯಲ್ಲಿ ಶಿವಮೊಗ್ಗ ಹಾವೇರಿ ಮೂಲದ ಇಬ್ಬರು ಪ್ರವಾಸಿಗರು ಉಗ್ರರ ದಾಳಿಗೆ ಬಲಿಯಾಗಿದ್ದಾರೆ. ಈ ಘಟನೆಯಲ್ಲಿ ಕೆಲವು ಕನ್ನಡಿಗರು ಸಿಕ್ಕಿರುವ ಬಗ್ಗೆ ಆರಂಭಿಕ ಮಾಹಿತಿ ಲಭ್ಯವಾಗಿದ್ದು, ಈ ಕಾರಣಕ್ಕಾಗಿ ಕರ್ನಾಟಕ ಸರ್ಕಾರವು ತಕ್ಷಣ ಕ್ರಮ ಕೈಗೊಂಡಿದೆ.
ಸಚಿವ ಸಂತೋಷ್ ಲಾಡ್ ಅವರು ಕಾಶ್ಮೀರಕ್ಕೆ ತೆರಳಿ, ಸ್ಥಳೀಯ ಆಡಳಿತ, ಭದ್ರತಾ ಪಡೆಗಳು ಮತ್ತು ಕೇಂದ್ರ ಸರ್ಕಾರದೊಂದಿಗೆ ಸಂಪರ್ಕದಲ್ಲಿರುವರು. ಕನ್ನಡಿಗರಿಗೆ ಅಗತ್ಯವಿರುವ ವೈದ್ಯಕೀಯ ಸೌಲಭ್ಯ, ಸುರಕ್ಷಿತ ಸ್ಥಳಾಂತರ ಮತ್ತು ಇತರ ಸಹಾಯವನ್ನು ಒದಗಿಸುವ ಜವಾಬ್ದಾರಿಯನ್ನು ಅವರು ವಹಿಸಿಕೊಂಡಿದ್ದಾರೆ