ಬೆಂಗಳೂರು:– ಕಾಶ್ಮೀರದಲ್ಲಿ ಉಗ್ರರು ನಡೆಸಿದ ನಡೆದ ಭೀಕರ ಅಟ್ಟಹಾಸದಲ್ಲಿ ಬೆಂಗಳೂರಿನ ಮತ್ತೋರ್ವ ವ್ಯಕ್ತಿ ಬಲಿಯಾಗಿದ್ದಾರೆ. ಮಧುಸೂದನ್ ಮೃತ ವ್ಯಕ್ತಿ.
ಉಗ್ರರ ಭೀಕರ ಅಟ್ಟಹಾಸ: ಬೆಂಗಳೂರಿನ ಟೆಕ್ಕಿ ದುರ್ಮರಣ, ಸಾವಿನ ಸಂಖ್ಯೆ ಏರಿಕೆ!
ಮೂಲತಃ ಆಂಧ್ರದ ನೆಲ್ಲೂರಿನವರಾದ ಮಧುಸೂದನ್ ರಾಮಮೂರ್ತಿ ನಗರದಲ್ಲಿ ವಾಸವಾಗಿದ್ದರು. ಎರಡು ದಿನದ ಹಿಂದೆ ಕಾಶ್ಮೀರಕ್ಕೆ ಕುಟುಂಬ ತೆರಳಿತ್ತು. ಮಧುಸೂದನ್ ಅವರ ಸಾವಿನೊಂದಿಗೆ ಕರ್ನಾಟಕ ಮೂವರು ಉಗ್ರರ ದಾಳಿಗೆ ಬಲಿಯಾಗಿದ್ದಾರೆ. ಈಗಾಗಲೇ ಶಿವಮೊಗ್ಗದ ಮಂಜುನಾಥ್ ರಾವ್, ಬೆಂಗಳೂರಿನ ಭರತ್ ಮೃತಪಟ್ಟಿದ್ದಾರೆ.
ಉಗ್ರರ ಪೈಶಾಚಿಕ ಕೃತ್ಯಕ್ಕೆ ಒಟ್ಟು 26 ಮಂದಿ ಬಲಿಯಾಗಿದ್ದು. ಕಣ್ಣೆದುರು ಅನೇಕರು, ತಂದೆ, ಪತಿಯನ್ನ ಕಳೆದುಕೊಂಡಿದ್ದಾರೆ.