ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಳಿಯಲ್ಲಿ 27 ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೇ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇನ್ನೂ ಈ ವಿಚಾರವಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯೇ ನೀಡಿದ್ದಾರೆ.
ಟ್ವೀಟ್ ಮಾಡಿದ ಅವರು, ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಶಿವಮೊಗ್ಗದ ಮಂಜುನಾಥ ಶರ್ಮ ಅವರ ಕುಟುಂಬಸ್ಥರ ಬಳಿ ಮಾತನಾಡಿದ್ದು, ಪಾರ್ಥಿವ ಶರೀರವನ್ನು ಕರೆತರಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.
Helmet Tips: ಹೆಲ್ಮೆಟ್ ಧರಿಸದಿದ್ದರೆ ದಂಡ: ಖರೀದಿಸುವಾಗ ಈ ಸಲಹೆಗಳು ಕಡ್ಡಾಯ!
ಮಂಜುನಾಥ ಶರ್ಮರ ಪತ್ನಿ ಪಲ್ಲವಿ ಹಾಗೂ ಅವರ ಪುತ್ರನನ್ನು ತವರಿಗೆ ಕರೆತರಲು ವ್ಯವಸ್ಥೆ ಮಾಡಿರುವುದಾಗಿ ಅವರು ತಿಳಿಸಿದ್ದಾರೆ. ‘‘ಈ ಸಮಯದಲ್ಲಿ ಶ್ರೀಮತಿ ಪಲ್ಲವಿ ಅವರೊಂದಿಗೆ ಹಾಗೂ ಶಿವಮೊಗ್ಗದಲ್ಲಿರುವ ಅವರ ತಾಯಿಯವರ ಜೊತೆ ಮಾತನಾಡಿದ್ದೇನೆ. ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರದಾಳಿಯಲ್ಲಿ ಅಸುನೀಗಿರುವ ಪಲ್ಲವಿ ಅವರ ಪತಿ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಮಂಜುನಾಥ ಶರ್ಮರವರ ಆತ್ಮಕ್ಕೆ ಶಾಂತಿ ಕೋರಿ, ಸಾಂತ್ವನ ಹೇಳಿದ್ದೇನೆ.
ಪಲ್ಲವಿ ಮತ್ತು ಅವರ ಮಗ ಅನಂತ್ ನಾಗ್ ನಲ್ಲಿದ್ದು, ಸುರಕ್ಷಿತರಾಗಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ಕುಟುಂಬಕ್ಕೆ ಹಸ್ತಾಂತರಿಸಲು ಶೀಘ್ರ ಕ್ರಮ ಕೈಗೊಳ್ಳುವಂತೆ ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಕಚೇರಿಗೂ ಸಂಪರ್ಕಿಸಿ ಸೂಚಿಸಿದ್ದೇನೆ’’ ಎಂದು ಜೋಶಿ ಟ್ವೀಟ್ ಮೂಲಕ ತಿಳಿಸಿದ್ದಾರೆ.