ಕಲಘಟಗಿ: ತಾಲೂಕಿನ ದುಮ್ಮವಾಡ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಸಾರಾಯಿ ಮಾರಾಟ ತಡೆಗಟ್ಟಲು ಆಗ್ರಹಿಸಿ ಗ್ರಾಮ ಪಂಚಾಯತ್ ಮತ್ತು ತಾಲೂಕು ಅಬಕಾರಿ ಇಲಾಖೆಗೆ ಜನಹೋರಾಟ ಸಮಿತಿಯಿಂದ ಮನವಿ ಸಲ್ಲಿಸಲಾಯಿತು.
Helmet Tips: ಹೆಲ್ಮೆಟ್ ಧರಿಸದಿದ್ದರೆ ದಂಡ: ಖರೀದಿಸುವಾಗ ಈ ಸಲಹೆಗಳು ಕಡ್ಡಾಯ!
ಈ ವೇಳೆ ಮಾತನಾಡಿದ ಸಮಿತಿ ಸದಸ್ಯರು, ಗ್ರಾಮದಲ್ಲಿ ಬೀದಿಗೊಂದು ಅಕ್ರಮ ಸಾರಾಯಿ ಅಂಗಡಿಗಳು ತೆರೆದುಕೊಂಡಿವೆ. ಮನೆಗಳಲ್ಲಿ, ಪೆಟ್ಟಿಗೆ ಅಂಗಡಿಗಳಲ್ಲಿ ಮತ್ತು ಕಿರಾಣಿ ಅಂಗಡಿ ಗಳಲ್ಲಿ ಸಾರಾಯಿ ಇಟ್ಟು ಮಾರುತ್ತಿರುವುದು ಕಂಡುಬಂದಿದೆ. ಅಬಕಾರಿ ಇಲಾಖೆ ಅದನ್ನು ತಡೆಗಟ್ಟದೇ ಇರುವುದು ಗ್ರಾಮಸ್ಥರಿಗೆ ಬೇಸರವುಂಟುಮಾಡಿದೆ ಎಂದರು.
ತಾಲೂಕಿನದುಮ್ಮವಾಡಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಎಷ್ಟೋ ಕುಟುಂಬಗಳನ್ನು ಸಾರಾಯಿ ಬೀದಿಗೆ ತಳ್ಳಿದೆ. ಆಘಾತದ ಅಂಶವೆಂದರೆ ಊರಿನಲ್ಲೇ ಸುಲಭವಾಗಿ ಸಾರಾಯಿ ಸಿಗುತ್ತಿರುವುದರಿಂದ ಅಪ್ರಾಪ್ತ ಬಾಲಕರು ಕುಡಿತದ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಕುಡಿತ ಮತ್ತಿನಲ್ಲಿ ಮನೆಯಲ್ಲಿನ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಇದರಿಂದ ಸಂಸಾರಗಳಲ್ಲಿ ಬಿರುಕುಂಟಾಗಿ ಕುಟುಂಬಗಳು ನಾಶವಾಗಿವೆ. ಈ ಕೂಡಲೇ ಗ್ರಾಮದಲ್ಲಿನ ಅಕ್ರಮ ಸಾರಾಯಿ ಮಾರಾಟ ತಡೆಗಟ್ಟಬೇಕೆಂದು ಎಂದರು.
ಈ ಸಂದರ್ಭದಲ್ಲಿ ಜನ ಹೋರಾಟ ಸಮಿತಿಯ ಸದಸ್ಯರಾದ ಮಧುಲತಾ ಗೌಡರ್, ದೇವಮ್ಮ ದೇವತ್ಕಲ್, ಶರಣು ಗೋನವರ, ಎಲ್ಲಮ್ಮ ಪಾಟೀಲ್, ಹನುಮವ್ವ ಸುಣಗಾರ್, ಜಂಬವ್ವ ನರೇಂದ್ರ, ಕಸ್ತೂರಿ ವಾಲಿಕಾರ, ರೇಣುಕಾ ಇಂಗನಹಳ್ಳಿ, ಬಸಮ್ಮ ಲಕ್ಷಾಪುರ, ಇದ್ದರು. ಗ್ರಾಮದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು
ವರದಿ, ಮಾರುತಿ ಲಮಾಣಿ