ಬೆಂಗಳೂರು: ಜಮ್ಮು ಕಾಶ್ಮೀರದ ಪಹಲ್ಗಾಮ್ ಪಟ್ಟಣದ ಬಳಿಯ ‘ಮಿನಿ ಸ್ವಿಟ್ಜರ್ಲೆಂಡ್’ ಎಂದು ಕರೆಯಲ್ಪಡುವ ಪ್ರವಾಸಿ ತಾಣ ಬೈಸರನ್ನಲ್ಲಿ ನಿನ್ನೆ ಉಗ್ರರು ದಾಳಿ ಮಾಡಿದ್ದಾರೆ. ಈ ಕೃತ್ಯವನ್ನು ಇಡೀ ದೇಶವೇ ಖಂಡಿಸಿದ್ದು, ಉಗ್ರರ ದಾಳಿಯಲ್ಲಿ ಮತ್ತೋರ್ವ ಬೆಂಗಳೂರು ನಿವಾಸಿ ಸಾವನ್ನಪ್ಪಿದ್ದಾರೆ.
ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿದ್ದ ಬೆಂಗಳೂರು ನಿವಾಸಿ ಮಧುಸೂದನ್ ರಾವ್ ಉಗ್ರರ ದಾಳಿಗೆ ಬಲಿಯಾಗಿದ್ದಾರೆ. ಆಂಧ್ರದ ನೆಲ್ಲೂರು ಮೂಲದ ಮಧುಸೂಧನ್ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನೆಲೆಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Helmet Tips: ಹೆಲ್ಮೆಟ್ ಧರಿಸದಿದ್ದರೆ ದಂಡ: ಖರೀದಿಸುವಾಗ ಈ ಸಲಹೆಗಳು ಕಡ್ಡಾಯ!
ದೇಶ ಹಾಗೂ ವಿದೇಶಗಳಿಂದ ಬಂದ ಪ್ರವಾಸಿಗರು ಪಹಲ್ಗಾಮ್ ಪ್ರಕೃತಿಯನ್ನು ಆನಂದಿಸುತ್ತಿದ್ದ ವೇಳೆ, ಇದ್ದಕ್ಕಿದ್ದಂತೆ ಇಡೀ ಕಣಿವೆ ಗುಂಡಿನ ಶಬ್ದದಿಂದ ನಡುಗಿ ಹೋಗಿದೆ. ಜನರು ತಮ್ಮ ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ಎದ್ದು ಬಿದ್ದು ಓಡಿದ್ದಾರೆ. ಭಯೋತ್ಪಾದಕರು ಜನರ ಹೆಸರುಗಳನ್ನು ಕೇಳಿ ಕೇಳಿ ಗುರುತಿನ ಚೀಟಿಗಳನ್ನು ಪರಿಶೀಲಿಸಿ ಕೊಂದಿದ್ದಾರೆ.