ಕಲಬುರಗಿ:- ಅಡ್ಡಲಾಗಿ ಬಂದ ನಾಯಿ ಉಳಿಸಲು ರಸ್ತೆ ಬದಿಯ ತಡೆ ಕಂಬಗಳಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಅಫಜಲಪುರ ಮುಖ್ಯರಸ್ತೆ ಗೊಬ್ಬೂರ ಬಳಿ ಜರುಗಿದೆ.
ಮುಗ್ಧರನ್ನು ಬಲಿ ಪಡೆದವರಿಗೆ ಕೇಂದ್ರ ತಕ್ಕ ಪಾಠ ಕಲಿಸಲಿದೆ: ವಿ. ಸೋಮಣ್ಣ!
ಆಯೇಷಾ (70), ಅಜ್ಮೆರಾ (30) ಮತ್ತು ಅಜ್ಮೇರಾ ಮಗಳು ಜೈನಬ್ (2) ಮೃತ ದುರ್ದೈವಿಗಳು. ಇಂದು ಬೆಳಿಗ್ಗೆ ಕಾರಿನಲ್ಲಿ ಒಂದೇ ಕುಟುಂಬದ 8 ಜನ ಸೇರಿದಂತೆ 5 ಜನ ಮಕ್ಕಳು ಸಂಬಂಧಿಕರ ಮಗುವಿನ ಜವಳ ಕಾರ್ಯಕ್ರಮಕ್ಕೆ ಹೋಗುತ್ತಿದ್ದರು.
ಅದೇ ವೇಳೆ ಗೊಬ್ಬೂರ ಗ್ರಾಮದ ಬಳಿ ಕಾರಿಗೆ ಅಡ್ಡ ಬಂದ ಶ್ವಾನವನ್ನು ಉಳಿಸಲು ಹೋಗಿ ರಸ್ತೆ ಬದಿಯ ತಡೆ ಕಂಬಗಳಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ 6 ಕಂಬಗಳು ಹಾಗೂ ಕಾರು ಸಂಪೂರ್ಣ ನಜ್ಜು ಗುಜ್ಜಾಗಿ ಹೋಗಿದೆ. ಅಲ್ಲದೇ ಸ್ಥಳದಲ್ಲಿ 3 ಮಂದಿ ಸಾವನ್ನಪ್ಪಿದ್ದು, ಉಳಿದವರಿಗೆ ಗಂಭೀರ ಗಾಯಗಳಾಗಿವೆ. ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.