ಧಾರವಾಡ : ಸಿಗರೇಟು ಸೇದಬೇಡಿ ಎಂದು ಬುದ್ದಿ ಹೇಳಿದಕ್ಕೆ ಹಲ್ಲೆ ಮಾಡಿದ ಘಟನೆ ಧಾರವಾಡ ನಗರದ ಗಾಂಧಿ ಚೌಕ್ ಬಳಿ ನಡೆದಿದೆ.
ಆರ್ಎಸ್ ಎಸ್ ಮುಖಂಡ ಶಿರಿಶ್ ಬಳ್ಳಾರಿ ಮತ್ತು ಕುಟುಂಬಸ್ಥರ ಮೇಲೆ ಹಲ್ಲೆ ನಡೆದಿದೆ. ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ಮುಸ್ಲಿಂ ಯುವಕರಿಂದ ಹಲ್ಲೆ ನಡೆದಿದೆ. ಆರ್ ಎಸ್ ಎಸ್ ಮುಖಂಡ ಶಿರಿಶ್ ಬಳ್ಳಾರಿ ಅವರ ಮನೆಯೊಳಗೆ ನುಗ್ಗಿದ ಮುಸ್ಲಿಂ ಯುವಕರು, ಶಿರಿಶ್ ಬಳ್ಳಾರಿ ಮತ್ತು ಅವರ ಕುಟುಂಬದ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ಮಲೆಮಹದೇಶ್ವರ ಬೆಟ್ಟದಲ್ಲಿ ಸಂಪುಟ ಸಭೆ ; ಚಾಮರಾಜನಗರ ಜಿಲ್ಲೆಗೆ ಸಿಗಲಿದೆ ವಿಶೇಷ ಪ್ಯಾಕೇಜ್
ಇನ್ನೂ ಆರ್ ಎಸ್ ಎಸ್ ಮುಖಂಡ ಶ್ರಿರಿಶ್ ಅವರು ಧಾರವಾಡ ಶಹರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸದ್ಯ ಹಲ್ಲೆ ಮಾಡಿದ ನಾಲ್ವರು ಯುವಕರು ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಶಹರ ಪೋಲಿಸ್ ಠಾಣೆಯ ಎದುರು ಸೇರಿದ ನೂರಾರು ಹಿಂದೂ ಕಾರ್ಯಕರ್ತರು, ತಪ್ಪಿತಸ್ಥರ ಕ್ರಮ ಆಗಬೇಕು ಎಂದು ಆಗ್ರಹಿಸಿದ್ದಾರೆ.