ಬೆಂಗಳೂರು: ಪಹಲ್ಗಾಮ್ ದಾಳಿಯಲ್ಲಿ ಹತರಾಗಿರುವ ಕನ್ನಡಿಗರ ಮೃತದೇಹಗಳು ರಾಜಧಾನಿ ಬೆಂಗಳೂರಿಗೆ ತಲುಪಿವೆ. ಮಂಜುನಾಥ ಅವರ ಪಾರ್ಥೀವ ಶರೀರವನ್ನು ಶಿವಮೊಗ್ಗ, ಭರತ್ ಭೂಷಣ್ ಅವರ ಪಾರ್ಥೀವ ಶರೀರ ಬೆಂಗಳೂರಿನ ಮತ್ತಿಕೆರೆ ಹಾಗೂ ಮಧುಸೂದನ್ ಅವರ ಪಾರ್ಥೀವ ಶರೀರವನ್ನು ಚೆನ್ನೈ ಮೂಲಕ ನೆಲ್ಲೋರಿಗೆ ಕಳುಹಿಸಿ ಕೊಡಲಾಗುತ್ತಿದೆ.
ಫ್ರಿಡ್ಜ್ ನಲ್ಲಿ ಈ ಹಣ್ಣುಗಳನ್ನು ಇಡ್ತಿದ್ದೀರಾ!? ಇದರಿಂದ ದೇಹಕ್ಕಾಗುವ ಹಾನಿ ಎಷ್ಟು ಗೊತ್ತಾ!?
ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಕೇಂದ್ರ ಸಚಿವರಾದ ಶ್ರೀ ವಿ ಸೋಮಣ್ಣ ಅವರು ಮೃತರ ಕಳೆಬರಹಕ್ಕೆ ಭಾವಪೂರ್ಣ ನಮನಗಳನ್ನು ಸಲ್ಲಿಸಿದ್ದು, ಈ ದುರಂತದ ಸಮಯದಲ್ಲಿ ಇಡೀ ದೇಶ ಕುಟುಂಬದೊಂದಿಗೆ ನಿಲ್ಲಲಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು, ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.