ಮೈಸೂರು:- ಮೈಸೂರಿನಲ್ಲಿ ಸುಸಜ್ಜಿತವಾದ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡಲು ಮಲೈ ಮಹದೇಶ್ವರ ಬೆಟ್ಟದಲ್ಲಿ ನಡೆದ ಸರ್ಕಾರದ ಕ್ಯಾಬಿನೆಟ್ ನಲ್ಲಿ ಅನುಮೋದನೆ ನೀಡಲಾಗಿದೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ಧನ್ಯವಾದ ತಿಳಿಸಿದ್ದಾರೆ.
Siddaramaiah: ಮಲೈ ಮಹದೇಶ್ವರ ಬೆಟ್ಟ ಇನ್ನು ಮುಂದೆ ಪಾನ ಮುಕ್ತ: ಸಿ.ಎಂ ಘೋಷಣೆ!
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಮೈಸೂರಿಗೆ ಒಂದು ಸುಸಜ್ಜಿತವಾದ ಕ್ರಿಕೆಟ್ ಸ್ಟೇಡಿಯಂ ಬೇಕೆಂಬುದು ಮೈಸೂರಿಗರ ಬಹು ವರ್ಷಗಳ ಕನಸಾಗಿತ್ತು. ಮೈಸೂರು ನಗರದ ಸಾತಗಳ್ಳಿ ಸಮೀಪ ಮೂಡಾ ಗುರುತು ಮಾಡಿದಂತಹ ಸುಮಾರು19.5 ಎಕರೆ ಜಾಗವನ್ನ 2021ರಲ್ಲಿ ಶ್ರೀ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಬಂದ ನಂತರ, ಆ ಭೂಮಿಯನ್ನು ಹಸ್ತಾಂತರ ಮಾಡಲು ನಾನು ಎಲ್ಲಾ ಪ್ರಯತ್ನವನ್ನು ಮಾಡಿದ್ದೆ.
ಆದರೆ ಒಂದು ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡಲು ಕನಿಷ್ಠ 06 ಎಕರೆ ಮೈದಾನಕ್ಕೆ ಹಾಗೂ 05 ಎಕರೆ ಸ್ಟೇಡಿಯಂ ನಿರ್ಮಾಣಕ್ಕೆ ಬೇಕು, ಜತೆಗೆ ಪಾರ್ಕಿಂಗ್, ಕ್ಲಬ್ ಹೌಸ್ ನಿರ್ಮಾಣಕ್ಕೂ ಕೂಡ ಜಾಗ ಬೇಕಾಗಿತ್ತು. ಆದರೆ 19.5 ಎಕರೆ ಜಾಗದ ಮಧ್ಯದಲ್ಲಿ ಒಂದು ನಿರ್ಜೀವ ಕೆರೆ ಇತ್ತು, ಅದನ್ನು ಸುಪ್ರೀಂ ಕೋರ್ಟ್ ನ ನ್ಯಾಷನಲ್ ಗ್ರೀನ್ ಟ್ರಿಬುನಲ್ ನಿಯಮಗಳ ಪ್ರಕಾರವಾಗಿ ಕೆರೆಯನ್ನ ಬೇರೆಡೆಗೆ ಸ್ಥಳಾಂತರ ಮಾಡಲು ಅವಕಾಶವಿಲ್ಲದಿರುವ ಕಾರಣ ಸದರಿ ಯೋಜನೆಯನ್ನು ಕೈಬಿಡಬೇಕಾಗಿ ಬಂತು. ತಕ್ಷಣವೇ ಇಲವಾಲ ಹೋಬಳಿಯ ಹುಯಿಲಾಳು ಬಳಿ ಸುಮಾರು 26 ಎಕರೆ ಸರ್ಕಾರಿ ಜಾಗವನ್ನು ಅಧಿಕಾರಿಗಳ ಸಹಕಾರದಿಂದ ಗುರುತಿಸಿ, ನಿಗಧಿತ ನಮೂನೆಯಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಕಂದಾಐ ಇಲಾಖೆಯ ತಹಶೀಲ್ದಾರ್, ಉಪ ವಿಭಾಗಾಧಿಕಾರಿಗಳು, ಜಿಲ್ಲಾಧಿಕಾರಿಗಳು ಹಾಗೂ ಪ್ರಾದೇಶಿಕ ಆಯುಕ್ತರ ವರದಿಗಳೊಡನೆ ಕಂದಾಯ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸಿಸಲಾಗಿತ್ತು.
ಈ ಸಂಬಂಧ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಶ್ರೀ ಬ್ರೀಜೇಶ ಪಟೇಲ್, ಕಾರ್ಯದರ್ಶಿ ಶ್ರೀ ಶಂಕರ್, ಶ್ರೀ ಪ್ರದೀಪ್ ಶಿವಪ್ಪ, ಶ್ರೀ ಸುಧಾಕರ್ ರೈ, ಶ್ರೀ ಬಾಲಚಂದರ್, ಶ್ರೀ ಹರಿಕೃಷ್ಣ ಹಾಗೂ ಇತರೆ ಸದಸ್ಯರೊಂದಿಗೆ ನಾನು ಹಲವಾರು ಬಾರಿ ಚರ್ಚಿಸಿ, ಸುಮಾರು ನೂರು ಕೋಟಿ ವೆಚ್ಚದಲ್ಲಿ ಒಂದು ಸುಸಜ್ಜಿತವಾದ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡಲು ಒಪ್ಪಿಗೆಯನ್ನು ಸೂಚಿಸಿದ್ದರು. ತದನಂತರ ಸದರಿ ಪ್ರಸ್ತಾವನೆಯ ಅನುಮೋದನೆಗೆ ಕ್ಯಾಬಿನೆಟ್ ನೋಟ್ ಕೂಡ ರಡಿಯಾಗಿತ್ತು, ಆದರೆ ಬಿ.ಜೆ.ಪಿ ಸರ್ಕಾರವು ಪುನ ಚುನಾಯಿತಗೊಳ್ಳದ ಕಾರಣ ಸದರಿ ಪ್ರಸ್ತಾವನೆ ಹಾಗೆ ಇತ್ತು. ಪ್ರಸ್ತುತ ಸದರಿ ಪ್ರಸ್ತಾವನೆಗೆ ಇಂದು ನಡೆದ ಕ್ಯಾಬಿನೆಟ್ನಲ್ಲಿ ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರು ಅನುಮೋದನೆ ನೀಡಿದ್ದು, ಅವರಿಗೆ ನನ್ನ ಧನ್ಯವಾಗಳನ್ನು ತಿಳಿಸುತ್ತೇನೆ. ಕಳೆದ ಮೂರು ವರ್ಷಗಳ ನನ್ನ ಪ್ರಯತ್ನಕ್ಕೆ ಆರ್ಥಕ ಅಂತ್ಯವನ್ನು ಕಂಡಿದೆ. ಮುಂದಿನ ದಿನಗಳ್ಲಿ ಮೈಸೂರಿನಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ವತಿಯಿಂದ ಒಂದು ಸುಸಜ್ಜಿತವಾದ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಗೊಳ್ಳಲಿದೆ. ಈ ಕಾರ್ಯಕ್ಕೆ ನನಗೆ ಸಹಕರಿಸಿದ ಮಾನ್ಯ ಶಾಸಕರಾದ ಜಿ.ಟಿ.ದೇವೇಗೌಡರು, ಅಂದಿನ ಪ್ರಾದೇಶಿಕ ಆಯುಕ್ತರಾದ ಶ್ರೀ ಸಿ.ಜಿ ಪ್ರಕಾಶ್, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಶ್ರೀ ಬ್ರೀಜೇಶ ಪಟೇಲ್, ಕಾರ್ಯದರ್ಶಿ ಶ್ರೀ ಶಂಕರ್, ಶ್ರೀ ಪ್ರದೀಪ್ ಶಿವಪ್ಪ, ಶ್ರೀ ಸುಧಾಕರ್ ರೈ, ಶ್ರೀ ಬಾಲಚಂದರ್, ಶ್ರೀ ಹರಿಕೃಷ್ಣ ಹಾಗೂ ಇತರೆ ಸದಸ್ಯರಿಗೂ ನನ್ನ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದಿದ್ದಾರೆ.