ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ಬಿಗ್ ಫೈಟ್ ನಡೆಯುತ್ತಿದ್ದು, ಮೊದಲಿಗೆ ಟಾಸ್ ಗೆದ್ದ ರಾಜಸ್ಥಾನ್ ಬೌಲಿಂಗ್ ಆಯ್ದುಕೊಂಡು ಆರ್ ಸಿಬಿಯನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು.
ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ: ಇದಕ್ಕೆ ಕೇಂದ್ರವೇ ಹೊಣೆ ಎಂದ ಹೆಚ್.ಸಿ ಬಾಲಕೃಷ್ಣ!
ಅದರಂತೆ RCB ಪರ ಓಪನರ್ ಗಳಾದ ವಿರಾಟ್ ಕೊಹ್ಲಿ ಹಾಗೂ ಸಾಲ್ಟ್ ಉತ್ತಮ ಆರಂಭ ಒದಗಿಸಿದರು. ಸಾಲ್ಟ್ ಔಟ್ ಆದ ಬಳಿಕ ಕ್ರೀಸ್ ಗೆ ಬಂದ ಕನ್ನಡಿಗ ದೇವದತ್ ಪಡಿಕ್ಕಲ್ ಹಾಗೂ ಕೊಹ್ಲಿ ಬೊಂಬಾಟ್ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಆ ಬಳಿಕ ದೇವದತ್ತ್ ಪಡಿಕ್ಕಲ್ ಔಟ್ ಆದ ಬಳಿಕ ಬಂದ ಕ್ಯಾಪ್ಟನ್ ರಜತ್ ಬಹುಬೇಗ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದ್ದರು.
ನಂತರ ಜಿತೇಶ್ ಹಾಗೂ ಟಿಮ್ ಡೇವಿಡ್ ಅವರಿಂದ ಬೊಂಬಾಟ್ ಜೊತೆಯಾಟ ಮೂಡಿ ಬಂದಿತು. ಈ ಮೂಲಕ ಆರ್‌ಸಿಬಿ 205 ರನ್ ಗಳಿಸಿತು. ತಂಡದ ಪರ ವಿರಾಟ್ ಕೊಹ್ಲಿ 42 ಎಸೆತಗಳಲ್ಲಿ 70 ರನ್ ಮತ್ತು ದೇವದತ್ ಪಡಿಕಲ್ 27 ಎಸೆತಗಳಲ್ಲಿ 50 ರನ್ ಗಳಿಸಿದರು. ಟಿಮ್ ಡೇವಿಡ್ 23 ರನ್ ಗಳಿಸಿದರೆ ಜಿತೇಶ್ ಶರ್ಮಾ 20 ರನ್ ಗಳಿಸಿ ಅಜೇಯರಾಗಿ ಉಳಿದರು.
ಒಟ್ಟಾರೆ ಟಾರ್ಗೆಟ್ 206 ರನ್ ಕೊಟ್ಟಿದೆ. ಇದನ್ನು ರಾಜಸ್ಥಾನ್ ಬೀಟ್ ಮಾಡುತ್ತಾ ಕಾದು ನೋಡಬೇಕಾಗಿದೆ.