ನೆಲಮಂಗಲ:- ನೇಣುಬಿಗಿದ ಸ್ಥಿತಿಯಲ್ಲಿ ಯುವ ವಕೀಲೆ ಶವ ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶ್ರೀನಿವಾಸಪುರ ಶೆಡ್ ನಲ್ಲಿ ಜರುಗಿದೆ.
ರಾಜಸ್ಥಾನ್ ವಿರುದ್ಧ ರೋಚಕ ಜಯ: ಗೆಲುವಿನ ಖುಷಿಯಲ್ಲಿ ಕ್ಯಾಪ್ಟನ್ ರಜತ್ ಹೇಳಿದ್ದೇನು?
ಮತ್ತೊಂದೆಡೆ ವಕೀಲೆ ಮೃತದೇಹ ಕಂಡು ಕುಟುಂಬದ ಜೊತೆಗಿದ್ದ ಯುವಕನೂ ಕೂಡ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರೋದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ವಕೀಲೆ ರಮ್ಮಾ(26) ಹಾಗೂ ಮನೆಯ ಮತ್ತೊಬ್ಬ ಪುನೀತ್(25) ಸೂಸೈಡ್ ಮಾಡಿಕೊಂಡವರು. ಶ್ರೀನಿವಾಸಪುರ ಶೆಡ್ ನಲ್ಲಿ ವಕೀಲೆ ರಮ್ಯಾ ಮೃತದೇಹ ಪತ್ತೆಯಾದರೆ, ಕೆಂಪಲಿಂಗನಹಳ್ಳಿಯ ಮನೆಯಲ್ಲಿ ಪುನೀತ್ ಮೃತದೇಹ ಪತ್ತೆಯಾಗಿದೆ. ರಮ್ಯಾ ಸಾವಿಗೆ ಉದ್ಯಮಿ ದಿನೇಶ್ ಕಾರಣ ಅಂತ ರಮ್ಯಾ ಮಾವನಿಗೆ ವಾಯ್ಸ್ ಮೇಸೆಜ್ ಕಳಿಸಿ ಸಾವನ್ನಪ್ಪಿದ್ದಾರೆ. ಇದೀಗ ಅರೋಪಿ ದಿನೇಶ್ ಪತ್ತೆಗಾಗಿ ಪೊಲೀಸರು ಶೋಧ ಕೈಗೊಂಡಿದ್ದಾರೆ.
ಗ್ರಾನೈಟ್ ಕಲ್ಲು ವ್ಯವಹಾರ ಮಾಡ್ತಿದ್ದ ದಿನೇಶ್,ತಾಯಿ ಸಮಾಧಿ ನಿರ್ಮಾಣ ವೇಳೆ ರಮ್ಯಾಗೆ ಪರಿಚಯವಾಗಿದ್ದ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಶೆಡ್ ಬಳಿ ಬಂದು ರಮ್ಯಾರನ್ನ ಕೊಂದು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಪ್ರಮುಖ ಸಾಕ್ಷಿಯಾಗಿದ್ದ ಪುನೀತ್ ಕೂಡ ಸಾವನ್ನಪ್ಪಿದ್ದಾನೆ. ಇನ್ನೂ ವಕೀಲೆ ಸಾವಿನ ರಹಸ್ಯ ಭೇದಿಸಲು ನೆಲಮಂಗಲ ಗ್ರಾಮಾಂತರ ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ದಿನೇಶ್ ಪತ್ತೆಗಾಗಿ ವ್ಯಾಪಕ ಶೋಧ ಕೈಗೊಂಡಿದ್ದಾರೆ. ಇನ್ನೂ 27 ವರ್ಷದ ರಮ್ಯ ಸಂಜೆ 7:00 ಸುಮಾರಿಗೆ ನೇಣುಬಿಗಿದು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹಾಗೆ ಕಾಣ್ತಿದೆ ಮತ್ತು ಇದೇ ಕುಟುಂಬದ ಜೊತೆಗಿದ್ದ ವ್ಯಕ್ತಿ ಕೂಡ ಮನೆಯಲ್ಲಿ ನೇಣು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಪೋಷಕರು ದೂರಿನ ಆಧಾರದ ಮೇಲೆ ಇದು ನೇಣು ಹಾಕಿರುವ ಆರೋಪದ ಮೇಲೆ ಕೊಲೆ ಕೇಸ್ ದಾಖಲಾಗಿದೆ.