ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಚಿಲಕವಾಡ ಗ್ರಾಮದಲ್ಲಿ ಕೆ.ವ್ಹಿ.ಹುಲಕೋಟಿ ಅವರ 1.5 ಎಕರೆ ಕ್ಷೇತ್ರದಲ್ಲಿರುವ ಮನೆ ಮತ್ತು ಸುತ್ತಲಿನ ವೈವಿದ್ಯಮಯ ಸಸ್ಯ ಗಿಡಗಳಿಂದ ಕಂಗೊಳಿಸುತ್ತಿರುವ “ನಂದನ ವನ” ಇನ್ನೂಬ್ಬರಿಗೆ ಮಾದರಿಯಾಗಿದೆ. ಬಯಲು ನಾಡಿನ ನವಲಗುಂದ ತಾಲೂಕಿನ ಈ ಹಳ್ಳಿ ಚಿಲಕವಾಡ ಗ್ರಾಮದಲ್ಲಿ ಅದೆಂಥ ತೋಟ ಅಂತಾ ನನಗೂ ಕುತೂಹಲವಾಗಿತ್ತು ಈ ನಂದನವನ ಆವರಣಕ್ಕೆ ಕಾಲಿಟ್ಟಾಗ ಒಂದು ರೀತಿಯ ಅಚ್ಚರಿಯ ಮಲೆನಾಡಿನಲ್ಲಿ ಬಂದಂತಹ ಅನುಭವವಾಯಿತು.
ಶ್ರೀ ಕೆ.ವ್ಹಿ.ಹೊಲಕೋಟಿಯವರು ಪ್ರಾಥಮಿಕ ಶಿಕ್ಷಣ ಚಿಲಕವಾಡ ಗ್ರಾಮದಲ್ಲಿ ಹಾಗೂ ಹೆಚ್ಚಿನ ವ್ಯಾಸಂಗ ಧಾರವಾಡದ ಯುನಿವರ್ಸಿಟಿಯಲ್ಲಿ ಸಸ್ಯಶಾಸ್ತ್ರದಲ್ಲಿ ಉನ್ನತ ಪದವಿ (ಎಮ್.ಎಸ್.ಸಿ) ಮುಗಿಸಿ 3 ವರ್ಷ (1971-74) ವರೆಗೆ ಹುನಗುಂದದ ಶ್ರೀ ವಿಜಯ ಮಹಾಂತೇಶ ಆರ್ಟ & ಸಾಯಿನ್ಸ ಕಾಲೇಜದಲ್ಲಿ ಉಪನ್ಯಾಸಕರ ವೃತ್ತಿ 1974 ರಲ್ಲಿ ರಾಜಿನಾಮೆ ನೀಡಿ ಸ್ವಂತ ಊರಾದ ಚಿಲಕವಾಡದಲ್ಲಿ ಕೃಷಿಯನ್ನು ಪೂರ್ಣ ಪ್ರಮಾಣದಲ್ಲಿ ವ್ಯವಸಾಯವನ್ನು ಕೈಗೊಂಡು ಸುಮಾರು ನೂರಾರು ಎಕರೆ ಜಮೀನು ಒಣಬೇಸಾಯ ಪದ್ದತಿ ಒಳಪಡಿಸಿ ಸಾವಯವ ರೀತಿಯಲ್ಲಿ ಉಳ್ಳಾಗಡ್ಡಿ, ಮೆಣಸಿನಕಾಯಿ, ಇತರೆ ವಾಣಿಜ್ಯ ಬೆಳೆಗಳನ್ನು ಬೆಳೆದು ಪ್ರಗತಿ ಸಾಧಿಸಿದರು
. 1.5 ಎಕರೆ ಕ್ಷೇತ್ರವನ್ನು ಮನೆ ಕಟ್ಟಲು ಖರೀದಿಸಿ 2000 ವರ್ಷದ ಹೊತ್ತಿಗೆ ಮನೆಯನ್ನು ನಿರ್ಮಾಣ ಮಾಡಿ ಅದರ ಜೊತೆಗೆ ಈ ನಂದನ ವನ ತೋಟವನ್ನಾಗಿ ಮಾಡಿದರು. ಶುಭದಾಯಕವಾದ ಪಂಚರತ್ನ ಗಿಡಗಳು :- ಅಶ್ವಥ ಮರ, ಬಿಲ್ವ ಪತ್ರ. ಶಮೀ ವೃಕ್ಷ (ಬನ್ನಿ). ಬೇವು. ಅತ್ತಿ ಮರ.
ಹಣ್ಣಿನ ಗಿಡಗಳು :- ಚಿಕ್ಕೂ, ವಿವಿಧ ಬಾರೆ ಗಿಡ, ನಾಲ್ಕು ರತಹದ ಪೇರಲ್, ಎರಡು ತರಹದ ಬೆಟ್ಟದ ನೆಲ್ಲ, ನಾಲ್ಕು ನೇರಳೆ, ಎರಡು ಹಲಸು, ನಾಲ್ಕು ತರಹದ ಮಾವು, ಎರಡು ಕಿತ್ತಳೆ, ಐದು ದಾಳಿಂಬೆ, ಎರಡು ಸಿಹಿ ಹುಣಸಿ, ಚರ್ರಿ ಗಿಡಗಳು, ಸೇತಾಫಲ, ವಿಶೇಷವಾಗಿ ಒತ್ತು ಕೊಟ್ಟು ಬೆಳೆದಂತಹ ಅವಕಾಡೊ (ಬಟರ ಪ್ರೋಟ), ದೊಡ್ಡದಾದ ಬಾಳೆಪಡ, ಮಂಗಳೂರಿನಲ್ಲಿ ತಂದ ಸಸಿ ಯಾಲಕ್ಕಿ ಬಾಳೆಹಣ್ಣು, ನಿಂಬೆ ಗಿಡಗಳು, ಪ್ಯಾಶನ್ ಪ್ರೂಟ್ ಬಳ್ಳಿಗಳು, ಇದಲ್ಲದೇ ನಿತ್ಯ ಏಳೇನೀರು, ಟೆಂಗಿನಕಾಯಿ ಒಣ ಕೊಬ್ಬರಿ, ಕೊಡುವ ಟೆಂಗಿನ ಮರಗಳು, ಹೀಗೆ ಮನೆಗೆ ಬೇಕಾಗುವ ವೈವಿದ್ಯಮಯ ಹಣ್ಣುಗಳು, ಚಳ್ಳ ಕಾಯಿ ಗಿಡಗಳು, ಅಮಟಿಕಾಯಿ ಗಿಡಗಳು ಬೇರೆ ಬೇರೆ ಆಯಾ ಸೀಜನ್‍ನಲ್ಲಿ ಸಿಗುವ ಹಣ್ಣುಗಳನ್ನು ಬೆಳೆದಿರುತ್ತಾರೆ.
ಇನ್ನು ಹೂವಿನ ಗಿಡಗಳು :- ಇನ್ನು ಹೂಗಿಡಗಳೂ ಬಳ್ಳಿಗಳು ಸಾಕಷ್ಟು ಮುಖ್ಯವಾಗಿ ಎಂಟು ವಿಧದ ದಾಸವಾಳ ಹೂ ಗಳು, ಐದು ವಿಧದ ಮಲ್ಲಿಗೆಗಳು, ಏಳೆಂಟು ಬಗೆಯ ಗುಲಾಬಿಗಳು, ಚಿಕ್ಕ ಜೈನೀಸ್ ಆಯ್‍ಗ್ಜೋರಾ(ixoಡಿಚಿ) ಮುಸುಂಡಾ, ಬೆಲ್ ಪ್ಲಾವರ್ಸ. ಸಾಕಷ್ಟು ಗಡ್ಡೆಗಳು ಹೂವಾಗಿ ಐದಾರು ಸೇವಂತಿಗೆ, ಐದಾರು ಬಣ್ಣಗಳಲ್ಲಿ ಜೆರ್ಬೆರಾ, ಪೋರ್ಚು ಲಿಕಾ ಹೂಗಳು, ಪೆರಿವಿಂಕಲ್ (ಬಟ್ಟಲು ಹೂ) ಗಿಡಗಳು, ಪಾರಿಜಾತ, ಬಕೂಲಾ, ನಾಗಸಂಪಿಗೆ, ಸಂಪಿಗೆ, ಇನ್ನು ತೋಟದ ಸೌಂದರ್ಯವನ್ನು ಹೆಚ್ಚಿಸಲು (ಅಲಂಕಾರಿಕ) ಅರ್ನಾಮೆಂಟಲ್ ಗಿಡಗಳಾದ ಗೋಲ್ಡನ್ ಶೋವರ್ (ಹಳದಿ ಗೊಂಚಲ ಹೂವು), ಜಕರಾಂಡಾ (ನೀಲ ಗೊಂಚಲು ಹೂವು), ಸ್ಧೈಧೋಡಿಯಂ (ಕೆಂಪು ಗುಚ್ಚ ಹೂವುಗಳು), ನಾಲ್ಕು ತರಹದ ಒಲಿಯಂಡರ (ಕಣಗಲು) ದೊಡ್ಡ ಜಾತಿ ಕಣಗಲು ಇನ್ನು ಅನೇಕ ವೈವದ್ಯಮಯ ಹೂವು ಗಿಡಗಳು, ಪ್ಲುಮೇರಿಯಾ. ಅಚ್ಚ ಬಿಳಿ ಹೂವುಗಳ ಇಡಿ ವರ್ಷ, ಹಾಗೂ ಪ್ಲೇಮೇಲಿಯಾ (ಬೆಂಕಿ) ಹೂಗಿಡ, ಪಿಂಕ ಟ್ರಂಬೇಟ್ ವೈನ್, ಟೇಕೋಮಾ, ಕ್ಲೈಯಟೋಸ್ಟೋಮಾ ಎರಡು ಬಳ್ಳಿ ಗೊಂಚಳ ಹೂವುಗಳು ಹೀಗೆ ಹಲವು ಸೌಂದರ್ಯ ಹೆಚ್ಚಿಸುವ ಗಿಡಗಳನ್ನು ನೋಡಬಹುದು ಎಲ್ಲವೂ ಸದ್ಯ ಹೂವಿನಿಂದ ತೋಟವನ್ನು ಕಂಗೂಳಿಸುವಂತೆ ಮಾಡಿವೆ.
ಇದರ ಜೊತೆಗೆ ಔಷದಿ ಸಸ್ಯಗಳಾದ ತುಳಸಿ, ದೊಡ್ಡ ಪತ್ರಿ, ಬಟ್ಟಲು ಹೂವು (ಪೇರಿ ವಿಂಕಲ್), ಕಲಾಂಚೋ ಪಿನ್ನಾಟಾ, (ಕಿಡ್ನಿ ಸ್ಟೋನ್ ಕರಗಿಸುವ ಸಸ್ಯ), ಅಮೃತ ಬಳ್ಳಿ, ಬ್ರಹ್ಮಹಿ, ಇಷ್ಟೇಲ್ಲ ವೈವಿದ್ಯಮಯ ಸಸ್ಯಗಳ ರಾಶಿಯೇ ಈ ನಂದನ ವನ ಆವರಣದಲ್ಲಿ ಇವಕ್ಕೆಲ್ಲ ರಕ್ಷಣೆಗೊಸ್ಕರ ಸುತ್ತಲೂ ಜೀವಂತ ಬೇಲಿಗೆ ಬೌಗೀನ್ ವಿಲ್ಲಾ, ಮತ್ತು ದುರಂತಾ ಬೇಲಿಯನ್ನು ಹಚ್ಚಲಾಗಿದೆ.
ಮರಮುಟ್ಟು ಗಿಡಗಳು : ತೇಗು ಇಪ್ಪತ್ತು ಗಿಡ, ಶ್ರೀಗಂದ ನಾಲ್ಕು ಗಿಡ, ಬೇವು ಐದು ಗಿಡ, ಅಶೋಕಾ ಎಂಟು ಗಿಡ, ಹೆಬ್ಬೇವು, ಬಾದಾಮ ಗಿಡಗಳು ಇವೆ. ತರಕಾರಿ ಸಸ್ಯಗಳನ್ನು ಒತ್ತುಕೊಟ್ಟು ಸಾವಯವ ರೀತಿಯಲ್ಲಿ ಮನೆಗೆ ಬೇಕಾಗುವ ಕರಿಬೇವು, ಪುದೀನಾ, ಕೊತ್ರಂಬರಿ, ಮೆಂತೇ, ಪಾಲಕ, ಹಾಗೂ ಶಾಶ್ವತವಾಗಿ ಫಲಕೊಡುವ ಬದನೆ, ಲಿಂಬೆ, ತೊಂಡಿ, ಕೆಂಪುಬಸಳಿ, ಅನ್ನಕ್ಕೆ ಹಾಕು ಎಲೆ (ಬ್ರೇಕಾನಾ) ಅಲ್ಲದೇ ಇನ್ನೊಂದು ವಿಶೇಷವಾಗಿ ಬೆಳೆದದ್ದು ಬಳ್ಳಿಯಲ್ಲಿ ಬೆಳೆಯುವ ಬಟಾಟ (ಆಲೂ) ಮತ್ತು ಗೆಣಸು. ಇಷ್ಟೇಲ್ಲ ವೈವಿದ್ಯಮಯ ಸಸ್ಯಗಳಿಂದ ಕಂಗೊಳಿಸುವ ಈ ತೋಟ ಹೆಸರಿಗೆ ತಕ್ಕಂತೆ ನಂದನ ವನವಾಗಿದೆ.
ಸಂಪೂರ್ಣ ಸಾವಯವ ಪದ್ದತಿಯನ್ನು ಅಳವಡಿಸಿಕೊಂಡು ನಂದನ ವನ ತೋಟ ಹಾಗೂ ಇವರ ಕೃಷಿ ಪದ್ದತಿಯನ್ನು ಇನ್ನೂಬ್ಬರು ಅಳವಡಿಸಿಕೊಂಡು ಮುಂದಿನ ಪೀಳಿಗೆಯಾದರು ಉತ್ತಮವಾದ ಆರೋಗ್ಯ, ಪರಿಸರ ಪಡೆಯಲು ಸಾಧ್ಯವೆಂಬ ವಾದ ಶ್ರೀ ಕೆ.ವ್ಹಿ.ಹುಲಕೋಟಿ ಅವರದ್ದಾಗಿದೆ. ಅವರ ಕುಟುಂಬದಲ್ಲಿ ತಮ್ಮ ಸಾವಯವ ಕೃಷಿ ಪದ್ದತಿಯನ್ನೇ ಅವರ ಇಬ್ಬರು ಪುತ್ರರಾದ ವೆಂಕಣ್ಣ ಹುಲಕೋಟಿ, ನಂದನ ಹುಲಕೋಟಿಯವರು ಮುನ್ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯವಾಗಿದೆ.