ಕೊಪ್ಪಳ:- ಜಮ್ಮು ಕಾಶ್ಮೀರದಲ್ಲಿ ನಡೆದ ಭೀಕರ ದಾಳಿ ಬೆನ್ನಲ್ಲೇ ಕೆರಳಿರುವ ಭಾರತವು ಪಾಕಿಸ್ತಾನದ ಮೇಲೆ ಹಲವು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಅದರಂತೆ ದಾಳಿ ಬೆನ್ನಲ್ಲೇ ಭಾರತದಲ್ಲಿ ನೆಲೆಯೂರಿರುವ ಪಾಕಿಸ್ತಾನಿಗರನ್ನು 72 ಗಂಟೆಯೊಳಗೆ ದೇಶ ತೊರೆಯುವಂತೆ ಕೇಂದ್ರ ಖಡಕ್ ಸೂಚನೆ ಕೊಟ್ಟಿದೆ.
ಕಾಂಗ್ರೆಸ್ ಬಹಳ ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ: ಚಲವಾದಿ ನಾರಾಯಣಸ್ವಾಮಿ!
ಅದರಂತೆ ಈಗ ಭಾರತದಲ್ಲಿ ನೆಲೆಯೂರಿರುವ ಪಾಕಿಸ್ತಾನಿಗರು ಈಗಾಗಲೇ ದೇಶ ತೊರೆಯುತ್ತಿದ್ದಾರೆ. ಅದರಂತೆ ಕೊಪ್ಪಳ ಜಿಲ್ಲೆಯಲ್ಲೂ ಇಬ್ಬರು ಪಾಕಿಸ್ತಾನ ಪ್ರಜೆಗಳು ಇರುವ ಬಗ್ಗೆ ಪೊಲೀಸ್ ಇಲಾಖೆಯ ಉನ್ನತ ಮೂಲಗಳು ತಿಳಿಸಿದೆ. ಭಾರತೀಯರನ್ನೆ ಮದುವೆಯಾದ ಇಬ್ಬರು ಪಾಕಿಸ್ತಾನ ಮಹಿಳೆಯರು ಇಲ್ಲಿದ್ದು, ಈಗಾಗಲೇ ಓರ್ವ ಮಹಿಳೆ ಎಪ್ರೀಲ್ ನಲ್ಲಿ ಪಾಕಿಸ್ತಾನಕ್ಕೆ ತೆರಳಿದ್ದಾರೆ. ಇನ್ನೊಬ್ಬ ಮಹಿಳೆ ಕೊಪ್ಪಳ ಜಿಲ್ಲೆಯ ತಾಲೂಕಿನ ಮುನಿರಾಬಾದ್ ನಲ್ಲಿದ್ದಾರೆ.
ಇಬ್ಬರು ಮಹಿಳೆಯರ ಕಡೆ ಲಾಂಗ್ ಟರ್ಮ್ ವೀಸಾ ಇದೆ ಎಂಬುವುದು ಪೊಲೀಸ್ ಇಲಾಖೆಯ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.